ಜುಲೈ 1 ರಿಂದ ಹೊಸ ಕಾರ್ಮಿಕ ನೀತಿ ; ಇಲ್ಲಿದೆ ಹೊಸ ಮಾರ್ಗಸೂಚಿ

Labour

ಜುಲೈ 1 ರಿಂದ ಹೊಸ ಕಾರ್ಮಿಕ ನೀತಿ(Labour Policy) ಇಡೀ ದೇಶಾದ್ಯಂತ ಜಾರಿಗೆ ಬರಲಿದೆ. ಹೊಸ ಕಾರ್ಮಿಕ ನೀತಿಯಲ್ಲಿ ಸಂಬಳ, ಪಿಎಫ್(PF) ಕೊಡುಗೆ ಮತ್ತು ಕೆಲಸದ ಸಮಯದಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ. ಹೀಗಾಗಿ ಕಾರ್ಮಿಕರ ಕೆಲಸದ ಸಮಯ, ಪಿಎಫ್ ಕೊಡುಗೆಗಳು ಮತ್ತು ಉದ್ಯೋಗಿಗಳ ಸಂಬಳದಲ್ಲಿ ವ್ಯತ್ಯಾಸವಾಗಲಿದೆ. ಅದರ ವಿವರ ಇಲ್ಲಿದೆ ನೋಡಿ.

• ಮೂಲ ವೇತನವು ಒಟ್ಟು ಮಾಸಿಕ ವೇತನದ ಕನಿಷ್ಠ 50 ಪ್ರತಿಶತದಷ್ಟು ಆಗಿರುವುದರಿಂದ ಉದ್ಯೋಗಿಗಳು ಮನೆಗೆ ತೆಗೆದುಕೊಳ್ಳುವ ಸಂಬಳವೂ ಗಮನಾರ್ಹವಾಗಿ ಬದಲಾಗುತ್ತದೆ. • ಕೆಲಸದ ಸಮಯವನ್ನು ಪ್ರತಿದಿನ 8-9 ಗಂಟೆಗಳಿಂದ 12 ಗಂಟೆಗಳವರೆಗೆ ಹೆಚ್ಚಳ. ಪ್ರತಿಯಾಗಿ ಉದ್ಯೋಗಿಗಳಿಗೆ ವಾರದಲ್ಲಿ ಮೂರು ದಿನ ರಜೆಗಳನ್ನು ನೀಡಲಾಗುತ್ತದೆ. ವಾರಕ್ಕೆ ಒಟ್ಟು 48 ಗಂಟೆಗಳ ಕೆಲಸದ ಸಮಯವನ್ನು ಕಡ್ಡಾಯಗೊಳಿಸುತ್ತದೆ.

• ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿ – ವೇತನ ಸಂಹಿತೆ, ಸಾಮಾಜಿಕ ಭದ್ರತಾ ಸಂಹಿತೆ, ಕೆಲಸದ ಸ್ಥಳದಲ್ಲಿ ಸುರಕ್ಷತೆ- ಆರೋಗ್ಯ- ಸ್ಥಿತಿಗತಿ ಸಂಹಿತೆ ಮತ್ತು ಕೈಗಾರಿಕಾ ಸಂಬಂಧಗಳ ಸಂಹಿತೆ. • ಹೊಸ ಕಾರ್ಮಿಕ ನೀತಿಯನ್ವಯ ನಿವೃತ್ತಿಯ ವೇಳೆ ಪಡೆಯುವ ಮೊತ್ತ ಮತ್ತು ಗ್ರಾಚ್ಯುಟಿ ಮೊತ್ತವು ಹೆಚ್ಚಾಗುತ್ತದೆ. ಕಾರ್ಮಿಕರು ಸಮವರ್ತಿ ಪಟ್ಟಿಯಲ್ಲಿ ಒಂದು ವಿಷಯವಾಗಿರುವುದರಿಂದ, ರಾಜ್ಯಗಳು ಹೊಸ ಸಂಹಿತೆಯ ಅಡಿಯಲ್ಲಿ ಕಾನೂನುಗಳನ್ನು ರೂಪಿಸುವ ಅಗತ್ಯವಿದೆ.

ಸಂಸತ್ತು ಕಾರ್ಮಿಕ ಸಂಹಿತೆಗಳನ್ನು ಈಗಾಗಲೇ ಅಂಗೀಕರಿಸಿದೆ. ಸದ್ಯ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವೇತನ ಸಂಹಿತೆಯ ಅಡಿಯಲ್ಲಿ ಕರಡು ನಿಯಮಗಳನ್ನು ಪ್ರಕಟಿಸಿವೆ.

Exit mobile version