ರಾಷ್ಟ್ರ ರಾಜಧಾನಿಯಲ್ಲಿ ಒಟ್ಟು 1,044 ಬ್ಲಾಕ್ ಫಂಗಸ್ ಪ್ರಕರಣ ದಾಖಲು, 89 ಮಂದಿ ಸಾವು

ನವದೆಹಲಿ, ಜೂ. 03: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದುವರೆಗೆ ಒಟ್ಟು 1,044 ಬ್ಲಾಕ್ ಫಂಗಸ್ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 89 ಮಂದಿ ಮೃತಪಟ್ಟಿದ್ದಾರೆ. 92 ಜನರು ಗುಣಮುಖರಾಗಿದ್ದು, ಉಳಿದಂತೆ 863 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಗುರುವಾರ ತಿಳಿಸಿದ್ದಾರೆ.

ಎರಡನೇ ಡೋಸ್ ವಿತರಿಸುವ ಬಗ್ಗೆಯೂ ಮಾತನಾಡಿದ ಆರೋಗ್ಯ ಸಚಿವ, ‘ನಾವು ಕೇಂದ್ರ ಸರ್ಕಾರ ನೀಡಿರುವ ಸೂಚನೆಯನ್ನು ಪಾಲಿಸುತ್ತಿದ್ದೇವೆ. ನಮ್ಮ ಪಾಲಿನ ಕೋವ್ಯಾಕ್ಸಿನ್‌ ಲಸಿಕೆ ಪೂರೈಕೆಯಾದರೆ ಮೊದಲ ಡೋಸ್ ನೀಡುವುದನ್ನು ನಿಲ್ಲಿಸಿ, ಈಗಾಗಲೇ ಲಸಿಕೆ ಹಾಕಿಸಿಕೊಂಡಿರುವವರಿಗೆ ಎರಡನೇ ಡೋಸ್‌ ವಿತರಿಸಲು ಆರಂಭಿಸುತ್ತೇವೆ. ಮೇ ತಿಂಗಳಲ್ಲಿ ನಮಗೆ ಲಸಿಕೆ ಲಭ್ಯವಾಗಿವೆ. ಜೂನ್‌ ವೇಳೆಗೆ ಪೂರೈಕೆ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿದೆ. ನಾವು ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತಿದ್ದೇವೆ’ ಎಂದಿದ್ದಾರೆ.

Exit mobile version