ಬ್ಲಾಕ್ ಫಂಗಸ್ ಒಟ್ಟು 45,374 ಪ್ರಕರಣ: 4,332 ಮಂದಿ ಸಾವು

ನವದೆಹಲಿ, ಜು. 22: ದೇಶದಲ್ಲಿ ಇದುವರೆಗೆ ಒಟ್ಟು 45,374 ಕಪ್ಪು ಶಿಲೀಂಧ್ರ ಸೋಂಕು ಪ್ರಕರಣಗಳು ವರದಿಯಾಗಿದ್ದು, 4,332 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಪ್ಪು ಶಿಲೀಂಧ್ರ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಖಾತೆ ಸಚಿವ ಡಾ. ಭಾರತಿ ಪ್ರವೀಣ್‌ ಪವಾರ್‌ ಉತ್ತರಿಸಿದರು.
ಕಪ್ಪು ಶಿಲೀಂಧ್ರ ಸೋಂಕು ಹೊಸ ಕಾಯಿಲೆಯಲ್ಲ. ಆದರೂ, ಇದನ್ನು ಸಾಂಕ್ರಾಮಿಕ ರೋಗಗಳ ಕಾಯ್ದೆ-1897 ಅಡಿಯಲ್ಲಿ ಸೇರಿಸುವಂತೆ ರಾಜ್ಯಗಳು 2021ರ ಮೇನಲ್ಲಿ ಆರೋಗ್ಯ ಸಚಿವಾಲಯವನ್ನು ಒತ್ತಾಯಿಸುವವರೆಗೆ ಹೆಚ್ಚಿನ ಗಮನ ಸೆಳೆದಿರಲಿಲ್ಲ ಎಂದು ಅವರು ಹೇಳಿದ್ದಾರೆ. ಜೊತೆಗೆ ಕಳೆದ ಎರಡು ತಿಂಗಳಿನಿಂದ ಕಪ್ಪು ಶಿಲೀಂಧ್ರ ಪ್ರಕರಣಗಳು ಕಡಿಮೆಯಾಗುತ್ತಿರುವುದು ಕಂಡು ಬಂದಿದೆ ಎಂದೂ ಹೇಳಿದ್ದಾರೆ.

Exit mobile version