ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಲು ಗಡುವು ವಿಸ್ತರಣೆ : ಆನ್ಲೈನ್ನಲ್ಲಿ ಹೇಗೆ ಅಪ್ಡೇಟ್ ಮಾಡಬಹುದು ?

Digital News : ಜೂನ್ 14 ರವರೆಗೆ ಆಧಾರ್ ಕಾರ್ಡ್‌ನಲ್ಲಿರುವ ನಮ್ಮ ದಾಖಲೆಗಳನ್ನು ಉಚಿತವಾಗಿ ತಿದ್ದುಪಡಿ ಮಾಡಲು ಕಾಲಾವಕಾಶ (Aadhaar card online update)ನೀಡಲಾಗಿತ್ತು. ಇದೀಗ ಆ ಅವಧಿಯನ್ನು ಮತ್ತೆ

3 ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ. ಸೆಪ್ಟೆಂಬರ್ 14, 2023 ರವರೆಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ನವೀಕರಿಸಲು ನಿಮಗೆ ಅವಕಾಶವಿದೆ.

ಅನೇಕ ಜನರ ಆಧಾರ್ ಕಾರ್ಡ್‌ಗಳು 10 ವರ್ಷಕ್ಕಿಂತ ಹಳೆಯವು ಮತ್ತು ಎಂದಿಗೂ ನವೀಕರಿಸಲಾಗಿಲ್ಲ. 10 ವರ್ಷ ಹಳೆಯದಾದ ಆಧಾರ್ ಕಾರ್ಡ್‌ಗಳನ್ನು ನವೀಕರಿಸಲು ಸರ್ಕಾರ ಆಗಾಗ್ಗೆ ಮನವಿ ಮಾಡುತ್ತಿದೆ.

ನೀವು ಆಧಾರ್ ಸೆಂಟರ್, ಬೆಂಗಳೂರು ಒನ್ ಕೇಂದ್ರದಲ್ಲಿ ಸಹ ಇದನ್ನು ನವೀಕರಿಸಬಹುದು. ಆದರೆ ಇದಕ್ಕೆ ನಿರ್ದಿಷ್ಟ ಶುಲ್ಕ (Aadhaar card online update) ಇರುತ್ತದೆ.

ಇದನ್ನೂ ಓದಿ : ಜೂನ್ 16 ರಂದು ಚಾಲನೆ ಆಗಬೇಕಿದ್ದ ಗೃಹಲಕ್ಷ್ಮೀ ಯೋಜನೆ ಮುಂದೂಡಿಕೆ

ಜೊತೆಗೆ, ನೀವು ಆನ್‌ಲೈನ್‌ನಲ್ಲಿ ನವೀಕರಣಗಳನ್ನು ನೀವೇ ಮಾಡಬಹುದು. ಈ ಸೇವೆಯು ಪ್ರಸ್ತುತ ಆನ್‌ಲೈನ್‌ನಲ್ಲಿ ಉಚಿತವಾಗಿ ಲಭ್ಯವಿದೆ. ಸೆಪ್ಟೆಂಬರ್ 14 ರ ನಂತರ, ಶುಲ್ಕ ಪಾವತಿಸಿ ಆಧಾರ್ ಅಪ್ಡೇಶನ್ ಅನ್ನು

ಮಾಡಬಹುದು . ಜನಸಂಖ್ಯಾ ಮಾಹಿತಿಯನ್ನು ನಿಖರವಾಗಿ ಇರಿಸಿಕೊಳ್ಳಲು ಆಧಾರ್ ಅನ್ನು ನವೀಕರಿಸಲು UIDAI ಕರೆ ನೀಡುತ್ತದೆ. ಯುಐಡಿಎಐನ ಮೈ ಆಧಾರ್ ಪೋರ್ಟಲ್ ಮೂಲಕ ನೀವು ನಿಮ್ಮ

ಆಧಾರ್ ಅನ್ನು ನೀವು ಸುಲಭವಾಗಿ ನವೀಕರಿಸಬಹುದು. ಇಲ್ಲಿ ನಿಮಗೆ ಗೊಂದಲ ಅಥವಾ ಕಷ್ಟ ಎನಿಸಿದರೆ ಆಧಾರ್ ಸೆಂಟರ್ಗೆ ಹೋಗಿ 25 ರೂ ಶುಲ್ಕ ನೀಡಿ ಮಾಡಿಸಬಹುದು.

ಆನ್ಲೈನ್ನಲ್ಲಿ ಆಧಾರ್ ಅಪ್ಡೇಶನ್ ಹೇಗೆ ಮಾಡುವುದು?

ಆಧಾರ್ ವಿಚಾರದಲ್ಲಿ ಹೆಲ್ಪ್ಲೈನ್ ನಂಬರ್

ಯುಐಡಿಎಐನ 1947 ನಂಬರ್ಗೆ ಕರೆ ಮಾಡುವ ಮೂಲಕ ಆಧಾರ್ ಅಪ್ಡೇಶನ್ ಪೂರ್ಣಗೊಂಡಿದೆಯಾ ಎಂಬುದನ್ನು ತಿಳಿದುಕೊಳ್ಳಬಹುದು.ಈ ಕರೆ ಟಾಲ್ಫ್ರೀ ಆಗಿದೆ ಮತ್ತು ಐವಿಆರ್ಎಸ್ ಸಿಸ್ಟಂ ಆಗಿದೆ.

ಆಧಾರ್ ಎನ್ರೋಲ್ಮೆಂಟ್, ಪಿವಿಸಿ ಕಾರ್ಡ್ ಸ್ಟೇಟಸ್ ಜೊತೆಗೆ ಆಧಾರ್ ಸ್ಟೇಟಸ್ ಅನ್ನೂ ಇಲ್ಲಿ ಪಡೆಯಬಹುದು. ಮಾಹಿತಿಯನ್ನು ಎಸ್ಸೆಮ್ಮೆಸ್ ಮೂಲಕ ಕೂಡ ಪಡೆಯಬಹುದು.

ರಶ್ಮಿತಾ ಅನೀಶ್

Exit mobile version