ಯುಐಡಿಎಐ ಎಚ್ಚರಿಕೆ ! ಆಧಾರ್ ಅಪ್ಡೇಟ್ ಮಾಡಲು ಇಮೇಲ್, ವಾಟ್ಸಾಪ್ನಲ್ಲಿ ದಾಖಲೆ ಕಳುಹಿಸದಿರಿ

Alert : ಆಧಾರ್ ಕಾರ್ಡ್ (Adhar Card)ಭಾರತದಲ್ಲಿ ಒಂದು ಪ್ರಮುಖ ದಾಖಲೆ ಆಗಿದೆ . ಇದು ಅಡ್ರೆಸ್ ಪ್ರೂಫ್ (aadhaar updateUIDAI alert)ಕೂಡ ಹೌದು. ಅಲ್ಲದೆ ನಾಗರಿಕರಿಗೆ ಗುರುತಿನ

ಚೀಟಿಯೂ ಕೂಡ ಹೌದು. ಅಷ್ಟೇ ಅಲ್ಲದೆ ಸರ್ಕಾರದ ಅನೇಕ ಯೋಜನೆಗಳ ಫಲ ಪಡೆಯಲು ಬೇಕಾಗಿರುವ ಪ್ರಮುಖ ದಾಖಲೆಯೂ ಕೂಡ ಹೌದು. ಆಧಾರ್​ನಲ್ಲಿ ಗುರುತಿನ ಬಯೋಮೆಟ್ರಿಕ್

(Biometric), ವ್ಯಕ್ತಿಯ ಬೆರಳಚ್ಚುಗಳಂತಹ(Finger Print) ಸೂಕ್ಷ್ಮ ಮಾಹಿತಿ ಇರುತ್ತವೆ. ಈ ಆಧಾರ್ ಕಾರ್ಡ್ ಅನ್ನು ಯುಐಡಿಎಐನಿಂದ (UIDAI) ನಿರ್ವಹಿಸಲಾಗುತ್ತದೆ.

ಆದರೆ ಇದನ್ನು ದುಷ್ಕರ್ಮಿಗಳು ದುರುಪಯೋಗಿಸಿಕೊಳ್ಳುವ (aadhaar updateUIDAI alert) ಸಾಧ್ಯತೆ ಇದ್ದೇ ಇದೆ.

ಈಗ ಆನ್​ಲೈನ್​ನಲ್ಲಿ (Online) ಆಧಾರ್ ಅಪ್ಡೇಟ್ (Update) ಅನ್ನು ಮಾಡಬಹುದಾದ್ದರಿಂದ ಇತ್ತೀಚೆಗೆ ಜನರನ್ನು ವಂಚಿಸುವ ಪ್ರಕರಣಗಳು ತುಂಬಾ ಹೆಚ್ಚಾಗುತ್ತಿವೆ . ಆಗಾಗ್ಗೆ ಜನರಿಗೆ ಈ ವಂಚನೆಗಳ

ವಿರುದ್ಧ ಜಾಗೃತಿ ಮೂಡಿಸುವ ಕೆಲಸವನ್ನು ಯುಐಡಿಎಐ ಮಾಡುತ್ತಿರುತ್ತದೆ. ಈಗ ಆಧಾರ್ ಪ್ರೂಫ್​ಗೆ (Proof) ಸಂಬಂಧಿಸಿದ ದಾಖಲೆಗಳನ್ನು ಇಮೇಲ್ (E mail) ಮತ್ತು ವಾಟ್ಸಾಪ್ (WhatsApp)

ಮೂಲಕ ವಂಚಕರು ಕೇಳುತ್ತಿರುವುದು ಹೆಚ್ಚಾಗಿದೆ. ಈ ಬಗ್ಗೆ ಅಲರ್ಟ್ ಮೆಸೇಜ್ (Alert Message) ಅನ್ನು ಆಧಾರ್ ಪ್ರಾಧಿಕಾರ ಸೋಷಿಯಲ್ ಮೀಡಿಯಾದಲ್ಲಿ (Social Media) ಪೋಸ್ಟ್ (Post) ಮಾಡಿದೆ.

ವಿಮಾನದಲ್ಲಿ ಪ್ರಾಣಿಗಳು: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 234 ಪ್ರಾಣಿಗಳ ವಶ ಪ್ರಯಾಣಿಕನ ಬ್ಯಾಗ್ ಅಲ್ಲಿ ಜೀವಂತ ಪ್ರಾಣಿಗಳು ಮತ್ತು ಸರೀಸೃಪಗಳು

ಇದನ್ನೂ ಓದಿ : ಸುಳ್‌ ಸುದ್ದಿ ಹಬ್ಬಿಸಿದ್ರೆ ಹುಷಾರ್‌ ! ಸಾಮಾಜಿಕ ಜಾಲತಾಣಗಳಲ್ಲಿ ಸುಳ್‌ಸುದ್ದಿ ಪತ್ತೆ ಹಚ್ಚುವ ಫ್ಯಾಕ್ಟ್ ಚೆಕ್ unit ಗೆ ಸಿಎಂ ಗ್ರೀನ್ ಸಿಗ್ನಲ್

ಐಡಿ ಪ್ರೂಫ್(ID Proof) ಅಥವಾ ವಿಳಾಸ ಪ್ರೂಫ್(Address Proof) ದಾಖಲೆಗಳನ್ನು ಇಮೇಲ್ ಅಥವಾ ವಾಟ್ಸಾಪ್ ಮೂಲಕ ‘ಆಧಾರ್ ಅನ್ನು ಅಪ್ಡೇಟ್ ಮಾಡಲು ಯುಐಡಿಎಐ ಯಾವತ್ತೂ

ಕೇಳುವುದಿಲ್ಲ. ಜನರು ವಂಚಕರ ಬಗ್ಗೆ ಆದಷ್ಟು ಹುಷಾರಾಗಿರಿ. ಆನ್ಲೈನ್ನಲ್ಲಿ ಆಧಾರ್ ಅನ್ನುಮೈ ಆಧಾರ್​ನ ಪೋರ್ಟಲ್ (Adhar Portal) ಮೂಲಕ ಅಪ್ಡೇಟ್ ಮಾಡಿ. ಅಥವಾ ನಿಮಗೆ ಸಮೀಪದ

ಆಧಾರ್ ಕೇಂದ್ರಕ್ಕೆ (Adhar Centre)ಹೋಗಿ ಅಪ್ಡೇಟ್ ಮಾಡಿ,’ ಎಂದು ಯುಐಡಿಎಐ ಹೇಳುತ್ತಿದೆ.

ಆಧಾರ್ ಅಪ್ಡೇಟ್ ಆನ್ಲೈನ್ನಲ್ಲಿ ಆಗದೇ ಇರಲು ಕಾರಣಗಳು?

ನಾವು ಆಧಾರ್ ಅಪ್ಡೇಟ್ ಅನ್ನು ಆನ್ಲೈನ್ ಮೂಲಕ ಮಾಡಲು ಯತ್ನಿಸುವಾಗ ಕೆಲವೊಮ್ಮೆ ವಿಫಲವಾಗಬಹುದು. ಯಾಕೆಂದರೆ ನೀವು ಅದರಲ್ಲಿ ನಿಮ್ಮ ಸರಿಯಾದ ದಾಖಲೆಗಳನ್ನು ಅಪ್ಲೋಡ್

(Upload) ಮಾಡದೇ ಇದ್ದಾಗ ಹೀಗೆ ಆಗಬಹುದು. ನೀವು ನಿಮ್ಮ ದಾಖಲೆಯ ಒರಿಜಿನಲ್ (Original) ಅಂದರೆ ಮೂಲ ಪ್ರತಿಯನ್ನು ಸ್ಕ್ಯಾನ್ (Scan) ಮಾಡಿ ಅದನ್ನು ಅಪ್ಲೋಡ್ ಮಾಡಬೇಕು.

ನೀವು ಹಾಗೆ ಮಾಡಿರದಿದ್ದರೆ ಅಪ್ಡೇಟ್ ಆಗದೇ ಇರಬಹುದು. ಹಾಗೆಯೇ, ನಿಮ್ಮ ಹೆಸರಿನಲ್ಲಿ ಪ್ರೂಫ್ ದಾಖಲೆಗಳು ಇಲ್ಲದೇ ಇದ್ದಾಗಲೂ ಹೀಗಾಗಬಹುದು.

ಆಧಾರ್ ಸೆಂಟರ್ಗೆ ಹೋಗಿ ಅಪ್ಡೇಟ್ ಮಾಡಿ

ನಿಮ್ಮ ಆಧಾರ್ ಅಪ್ಡೇಶನ್ ಅನ್ನು ಸಮೀಪದ ಆಧಾರ್ ಕೇಂದ್ರವೊಂದಕ್ಕೆ ಹೋಗಿಯೂ ಮಾಡಬಹುದು. ವಿಳಾಸ ಪ್ರೂಫ್ (Address Proof) ಮತ್ತು ಐಡಿ ಪ್ರೂಫ್ (ID Proof) ದಾಖಲೆಗಳನ್ನು

ಜೊತೆಯಲ್ಲಿ ಹೋಗುವಾಗ ತೆಗೆದುಕೊಂಡು ಹೋಗಿ. ಅಲ್ಲಿ ನಿರ್ದಿಷ್ಟ ಶುಲ್ಕವನ್ನು ಸಹಾಯಕ ಸಿಬ್ಬಂದಿಗೆ ಪಾವತಿಸಿ ಆಧಾರ್ ಅಪ್ಡೇಟ್ ಮಾಡಬಹುದು.

ಆನ್ಲೈನ್ನಲ್ಲಿ ಆಧಾರ್ ಅನ್ನು ಅಪ್ಡೇಟ್ ಮಾಡುವ ಕ್ರಮಗಳು

ರಶ್ಮಿತಾ ಅನೀಶ್

Exit mobile version