ಗುತ್ತಿಗೆದಾರರಿಗೆ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಅಯೋಧ್ಯೆ ಅಭಿವೃದ್ಧಿ ಯೋಜನೆ’ ಅನುಷ್ಠಾನದಲ್ಲಿ ಅನಗತ್ಯ ಲಾಭವಾಗುತ್ತಿದೆ : CAG

Bengaluru, ಆಗಸ್ಟ್ 11: ‘ಕೇಂದ್ರ ಸ್ವದೇಶ್ ದರ್ಶನ್ ಯೋಜನೆ’(about Ayodhya Development Project) ಅಡಿಯಲ್ಲಿ ಗುತ್ತಿಗೆದಾರರಿಗೆ ಉತ್ತರ ಪ್ರದೇಶ (Uttar Pradesh)

ರಾಜ್ಯದಲ್ಲಿ ನಡೆಯುತ್ತಿರುವ ‘ಅಯೋಧ್ಯೆ ಅಭಿವೃದ್ಧಿ ಯೋಜನೆ’(‘Ayodhya Development Project’) ಅನುಷ್ಠಾನದಲ್ಲಿ ಅನಗತ್ಯ ಲಾಭವಾಗುತ್ತಿದೆ.ಇದು ಸೇರಿದಂತೆ ಕೆಲವು ಅಕ್ರಮಗಳನ್ನು

ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ(about Ayodhya Development Project) (CAG) ಪತ್ತೆ ಮಾಡಿ ಮಾಹಿತಿ ಬಹಿರಂಗಗೊಳಿಸಿದೆ.

2015 ಜನವರಿಯಿಂದ(January) 2022ರ ಮಾರ್ಚ್(March) ರವರೆಗೆ ಸ್ವದೇಶ್ ದರ್ಶನ್ ಯೋಜನೆಯ ಅಭಿವೃದ್ಧಿ ಕಾರ್ಯದ ಲೆಕ್ಕಪರಿಶೋಧನೆಯನ್ನು ಮಾಡಿದೆ.ಲೆಕ್ಕಪರಿಶೋಧನಾ ವರದಿಯನ್ನು

ಲೋಕಸಭೆಯಲ್ಲಿ ಬುಧವಾರ ಮಂಡನೆ ಮಾಡಲಾಗಿದೆ ಅದರ ಪ್ರಕಾರ, ಗುತ್ತಿಗೆದಾರರಿಗೆ ಅನಗತ್ಯವಾಗಿ 19.73 ಕೋಟಿ ರೂ. ಆರು ರಾಜ್ಯಗಳಲ್ಲಿ ಅಭಿವೃದ್ಧಿ ಕಾಮಗಾರಿಗಲ್ಲಿ ಲಾಭವಾಗಿರುವುದು ಗೊತ್ತಾಗಿದೆ.

ಉತ್ತರ ಪ್ರದೇಶ ರಾಜ್ಯದ ಅಯೋಧ್ಯೆ(Ayodhya) ಅಭಿವೃದ್ಧಿ ಸೇರಿದಂತೆ ಹಿಮಾಚಲ ಪ್ರದೇಶದ(Himachal Pradesh) ಹಿಮಾಲಯನ್ ಸರ್ಕ್ಯೂಟ್, ಗೋವಾ ರಾಜ್ಯದ ಸಿಂಕ್ವೆರಿಮ್-ಅಗುಡಾ

ಜೈಲ್, ಸಿಕ್ಕಿನ ರಂಗ್‌ಪೋ ಸಿಂಗ್ಟಮ್, ತೆಲಂಗಾಣದ ಹೆರಿಟೇಜ್ ಸರ್ಕ್ಯೂಟ್, ಹಾಗೂ ಮಧ್ಯಪ್ರದೇಶದ ಬೌದ್ಧ ಸರ್ಕ್ಯೂಟ್ ಅಭಿಕಾರ್ಯಗಳಲ್ಲಿ ಅಕ್ರಮ ಆಗಿದೆ ಎಂದು ಸಿಎಜಿ ಪತ್ತೆ ಮಾಡಿದೆ.

ಕಾರ್ಯಕ್ಷಮತೆ ತೋರಿಸದ ಗುತ್ತಿಗೆದಾರರು

ಗುತ್ತಿಗೆದಾರರಿಗೆ(Contractor) ಅಯೋಧ್ಯೆ ಅಭಿವೃದ್ಧಿ ಕಾರ್ಯದಲ್ಲಿ ಲಾಭ ಮಾಡಿಕೊಡಲಾಗಿದೆ. ಈ ಗುತ್ತಿಗೆದಾರರು ಉತ್ತರ ಪ್ರದೇಶ ರಾಜ್ಯ ನಿರ್ಮಾಣ ನಿಗಮದ ಅನುಷ್ಠಾನ ಸಂಸ್ಥೆಯಿಂದ

ಕೆಲಸ ಮಾಡುತ್ತಿದ್ದಾರೆ. ಇವರು ಕಾರ್ಯಕ್ಷಮತೆ ಬಗ್ಗೆ ಕೂಡ ಖಚಿತಪಡಿಸಬೇಕು. ಅಂದರೆ ಒಟ್ಟು ಕಾಮಗಾರಿಯ ವೆಚ್ಚ 62.17 ಕೋಟಿ ರೂ.ಗಳ ಗುತ್ತಿಗೆ ಪೈಕಿ ದಾಖಲೆಗಳನ್ನು ಸಲ್ಲಿಸದೇ ಕೇವಲ 1.86

ಕೋಟಿ ರೂ.ಗಳ ಕಾರ್ಯಕ್ಷಮತೆಯನ್ನು ಮಾತ್ರ ತೋರಿಸಲಾಗಿದೆ. ಅಂದರೆ ಉಳಿದ 3.11 ಕೋಟಿ ಮೌಲ್ಯದ ಕಾರ್ಯಕ್ಷಮತೆ ತೋರಿಸದೆ ಇರುವುದು. ಈ ಮೂಲಕ ಅಕ್ರಮ ನಡೆದಿರುವುದು ಸಾಬೀತಾಗಿದೆ.

ಇದನ್ನೂ ಓದಿ : ಕೊಟ್ಟ ಮಾತಿನಂತೆ ಬಿಜೆಪಿ ಸರ್ಕಾರದ 40% ಕಮಿಷನ್ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದೇವೆ : ಸಿಎಂ ಸಿದ್ದರಾಮಯ್ಯ

ಕಾಮಗಾರಿಯನ್ನು 14 ವಿಭಾಗವಾಗಿ ಅಯೋಧ್ಯೆಯ ಗುಪ್ತರ್ ಘಾಟ್‌ನಲ್ಲಿ(Gupthar Ghat) ವಿಂಗಡಿಸಲಾಗಿತ್ತು. ವಿವಿಧ ಖಾಸಗಿ ಗುತ್ತಿಗೆದಾರರಿಗೆ ಅದೆಲ್ಲವುಗಳನ್ನು ನೀಡಲಾಯಿತು.

ಎಕ್ಸಿಕ್ಯೂಟಿಂಗ್ ಏಜೆನ್ಸಿ(Executing Agency) (ನೀರಾವರಿ ಇಲಾಖೆ) ಗುತ್ತಿಗೆದಾರರು ನೀಡುವಂತಹ ಈ ದರಗಳ ವಿಶ್ಲೇಷಣೆಯಲ್ಲಿ ಮತ್ತು ಹಣಕಾಸಿನ ಬಿಡ್‌ಗಳಲ್ಲಿ ಹುರುಳಿಲ್ಲ ಎಂಬಂತಾಗಿದೆ.

ಗುತ್ತಿಗೆದಾರರ ಜಿಎಸ್‌ಟಿ ನೋಂದಣಿ ರದ್ದು

ರಾಜ್ಯ ಸರ್ಕಾರ ಸ್ವಯಂ ಪ್ರೇರಿತವಾಗಿ ಕಾಮಗಾರಿಗಳ ಮೂವರು ಗುತ್ತಿಗೆದಾರರಿಗೆ ಅವರ ಜಿಎಸ್‌ಟಿ(GST) ನೋಂದಣಿ ರದ್ದು ಮಾಡಿದೆ. ಅವರು ಇನ್ನು ಮುಂದೆ ನೋಂದಾಯಿತ ಗುತ್ತಿಗೆದಾರರು ಈ

ಕಾರಣದಿಂದ ಆಗಿರುವುದಿಲ್ಲ. ಜಿಎಸ್‌ಟಿ ಸಂಗ್ರಹಿಸಲು ಇವರು ಅರ್ಹರಾಗಿರಲಿಲ್ಲ. ಹೀಗಿದ್ದರೂ ಸಹ ನಿಯಮ ವಿರುದ್ಧವಾಗಿ ಒಟ್ಟು 19.57 ಲಕ್ಷ ರೂ.ಹಣವನ್ನು ಒಬ್ಬ ಗುತ್ತಿಗೆದಾರನಿಗೆ ಪಾವತಿಸಲಾಗಿದೆ.

ಇದನ್ನೂ ಓದಿ : ಬ್ಯಾಂಕ್ ಸಾಲ ಪಡೆದವರಿಗೆ ಗುಡ್‌ನ್ಯೂಸ್‌ : ಆರ್‌ಬಿಐ ಸಿಹಿ ಸುದ್ದಿ ! ರೆಪೋ ದರದಲ್ಲಿ ಬದಲಾವಣೆ ಇಲ್ಲ, 6.5% ಮುಂದುವರಿಕೆ!

ಸಿಎಜಿ(CAG) ಪ್ರಕರಣದ ಇನ್ನಿತರ ಅಂಶಗಳನ್ನು ತನ್ನ ವರದಿಯಲ್ಲಿ ಒದಗಿಸಿದೆ. ಇದರಲ್ಲಿ ಗುತ್ತಿಗೆದಾರರಿಗೆ ಅನಿಯಮಿತ ಹಣ ಗುಪ್ತರ್ ಘಾಟ್ ಅಭಿವೃದ್ಧಿ ಯೋಜನೆಯಲ್ಲಿ ಕೆಲಸ ಮಾಡದಿದ್ದರು ಕೂಡ

ಪಾವತಿ ಆಗಿದೆ.ಪ್ರವಾಸೋದ್ಯಮ ಇಲಾಖೆಯು (Tourism Department) ಆಡಿಟ್(Audit) ವರದಿಯನ್ನು ಉತ್ತರ ಪ್ರದೇಶ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಮತ್ತು ನೀರಾವರಿ ಇಲಾಖೆ ಜತೆ ನಡೆದ

ಸಭೆಯಲ್ಲಿ ಒಪ್ಪಿಕೊಂಡಿದೆ.ಅಲ್ಲದೆ ಈಗಾಗಲೇ ಹೆಚ್ಚುವರಿಯಾಗಿ ನೀಡಿರುವ ಹಣದ ಮರುಪಾವತಿಗೆ ಸೂಚನೆ ನೀಡಿದೆ.

ರಶ್ಮಿತಾ ಅನೀಶ್

Exit mobile version