Kolar: ಜುಲೈ 21ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯರ (about dairy farmers profit) ಜೊತೆ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ಅಥವಾ ಕರ್ನಾಟಕ ಮಿಲ್ಕ್ ಫೆಡರೇಶನ್ (KMF)
ಸಭೆ ನಡೆಸಿದ್ದು, ನಂದಿನಿ (Nandini) ಹಾಲಿನ ದರ ಹೆಚ್ಚಳಕ್ಕೆ ಒಪ್ಪಿಗೆ ಪಡೆದುಕೊಂಡು ಪ್ರತಿ ಲೀಟರ್‌ಗೆ 5 ರೂಪಾಯಿಯಂತೆ ನಂದಿನ ಹಾಲಿನ ದರವನ್ನು ಏರಿಕೆ ಮಾಡುವ ಪ್ರಸ್ತಾಪವನ್ನು ಕೆಎಂಎಫ್ ಇಟ್ಟಿತ್ತು
ಆದರೆ ಅದಕ್ಕೆ ಸರ್ಕಾರ ಒಪ್ಪದೆ, 3 ರೂಪಾಯಿ ಮಾತ್ರ ಹೆಚ್ಚಿಸಲು ಅವಕಾಶ ನೀಡಿತ್ತು ಅದರಂತೆ ರಾಜ್ಯ ಸರಕಾರ ಆಗಸ್ಟ್ 1 ರಿಂದ ನಂದಿನಿ ಹಾಲಿನ ಮಾರಾಟ ದರವನ್ನು ಲೀಟರ್‌ಗೆ 3 ರೂ ಹೆಚ್ಚಿಸುವಂತೆ
ಆದೇಶ ಮಾಡಿದೆ.ಆದರೆ ಜಿಲ್ಲೆಯ ಹೈನುಗಾರರಿಗೆ (Dairy Farmers) ಇದರಿಂದ ಲಾಭವಾಗುತ್ತಿರುವುದು ಕೇವಲ 50 ಪೈಸೆ. ಏಕೆಂದರೆ, ಒಕ್ಕೂಟದ ಆಡಳಿತ ಮಂಡಳಿಗೆ ಮಾರಾಟ ದರ ಹೆಚ್ಚಳವಾಗುವ
ಅರಿವಿತ್ತು ಆದ್ದರಿಂದ ಜುಲೈ 5ರಂದು ನಡೆದಿದ್ದ ಸಭೆಯಲ್ಲಿ ಒಕ್ಕೂಟದ ಆಡಳಿತ ಮಂಡಳಿಯು ರೈತರಿಂದ ಖರೀದಿಸುವ ಹಾಲಿನ ದರವನ್ನು ಲೀಟರ್‌ಗೆ 2.50ರೂ ರಂತೆ ಕಡಿತಗೊಳಿಸಿತ್ತು.

ಹಾಲು ಉತ್ಪಾದಕರಿಗೆ ಮೊದಲು 33.90 ರೂ.ಸಿಗುತಿತ್ತು ಆದರೆ 2.50ರೂ ಕಡಿತಾಗೊಳಿಸಿದ್ದರಿಂದ ಕೇವಲ 31.40 ರೂ. ಸಿಗುತಿತ್ತು. ಈಗ ಆಗಸ್ಟ್ 1 ರಿಂದ ಗ್ರಾಹಕರಿಗೆ ಲೀಟರಿಗೆ 3ರೂ ಹೆಚ್ಚಳ
ಮಾಡಿರುವುದರಿಂದ ಕೋಲಾರ (Kolar), ಚಿಕ್ಕಬಳ್ಳಾಪುರ (Chikkaballapura) ಜಿಲ್ಲಾ ಸಹಕಾರ ಹಾಲು ಒಕ್ಕೂಟ ಅದನ್ನು ರೈತರಿಗೆ ವರ್ಗಾಯಿಸಿ ಖರೀದಿ ದರವನ್ನು 3 ರೂ ಹೆಚ್ಚಿಸಿದೆ. ಅಂದರೆ ಈಗ ಹಾಲು
ಉತ್ಪಾದಕರಿಗೆ ಒಟ್ಟು 34.40 ರೂ ಸಿಗುತ್ತಿದೆ. ಅಂದರೆ (about dairy farmers profit)ಕೇವಲ 50 ಪೈಸೆ ಲಾಭ.
ಇದನ್ನೂ ಓದಿ : ಬೆಳೆ ವಿಮೆ ಗೋಲ್‌ಮಾಲ್ ! ರೈತ ಬೆಳೆಗೆ ಖರ್ಚು ಮಾಡಿದ್ದು 15 ಸಾವಿರ ಆದರೆ ವಿಮೆ ಸಿಕ್ಕಿದ್ದು ಕೇವಲ 960ರೂ!
ಮುಖ್ಯಮಂತ್ರಿ ಸೂಚನೆಯಂತೆ ಖರೀದಿ ದರವನ್ನು ಶಾಸಕ ಹಾಗೂ ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ(K.Y Nanje gowda) ಅಧ್ಯಕ್ಷತೆಯಲ್ಲಿ ನಡೆದ ಒಕ್ಕೂಟದ ದ್ವಿತೀಯ ಆಡಳಿತ ಮಂಡಲಿ ಸಭೆಯಲ್ಲಿ
3 ರೂ. ಹೆಚ್ಚಿಸಲಾಗಿದೆ.ಲೀಟರ್ ಹಾಲಿಗೆ ಸಂಘಗಳಿಗೆ 35.85 ರೂ.ರಂತೆ ಮತ್ತು ಹಾಲು ಉತ್ಪಾದಕರಿಗೆ 34.40 ರೂ ಪಾವತಿಸಲು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

ಈ ಹಿಂದೆ 2 ರೂಪಾಯಿ ದರ ಏರಿಕೆ
ಈ ಹಿಂದೆ ನವೆಂಬರ್ (November) 14, 2022 ರಂದು ಸಹ ಪ್ರತಿ ಲೀಟರ್ ಹಾಲಿಗೆ ಹಾಗೂ ಪ್ರತಿ ಲೀಟರ್ ಮೊಸರಿನ ಬೆಲೆಯಲ್ಲಿ 3 ರೂಪಾಯಿ ಏರಿಕೆ ಮಾಡಲಾಗಿತ್ತು. ಆದರೆ ಮಾಡಲಾಗಿರುವ ಬೆಲೆ
ಏರಿಕೆಯನ್ನು ನಿರ್ಧಾರ ಘೋಷಣೆ ಮಾಡಿದ ದಿನವೇ ಹಿಂಪಡೆಯಲಾಗಿತ್ತು. ಆದರೆ ನಂದಿನಿ ಹಾಲಿನ ಹಾಗೂ ಮೊಸರಿನ ದರವನ್ನು ಕೆಎಂಎಫ್ ನವೆಂಬರ್ 23ರಂದು ಮತ್ತೆ ಹೆಚ್ಚಳ ಮಾಡಿದ. ತಲಾ 2
ರೂಪಾಯಿ ಅಂತೆ ಪ್ರತಿ ಲೀಟರ್ ಹಾಲಿಗೆ ಹಾಗೂ ಪ್ರತಿ ಲೀಟರ್ ಮೊಸರಿಗೆ ಹೆಚ್ಚಳ ಮಾಡಲಾಗಿದೆ. ಈಗ ಮತ್ತೆ 3 ರೂಪಾಯಿ ಏರಿಸಲಾಗಿದೆ.
ರಶ್ಮಿತಾ ಅನೀಶ್