ಜುಲೈ 3 ರಿಂದ 10 ದಿನ ವಿಧಾನಸಭೆ ಅಧಿವೇಶನ : ಸಿಎಂ ಸಿದ್ದರಾಮಯ್ಯರಿಂದ ಬಜೆಟ್‌ ಮಂಡನೆ

Bengaluru : ಜುಲೈ 3 ರಿಂದ ಜುಲೈ 14 ರವರೆಗೆ ವಿಧಾನಮಂಡಲದ ಅಧಿವೇಶನವನ್ನು(about july Assembly session) ನಿಗದಿಪಡಿಸಲಾಗಿದೆ. ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ

ಮಾತನಾಡಿದ ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌ (U.T Khadar) ಅಧಿವೇಶನದ ಮೊದಲ ದಿನವಾದ ಜೂನ್ 3 ರಂದು ಮಧ್ಯಾಹ್ನ 12 ಗಂಟೆಗೆ ರಾಜ್ಯಪಾಲರಾದ ಥಾವರ್‌ಚಂದ್‌ ಗೆಹಲೋತ್‌

(Thaawarchand Gehlot) ಅವರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂನ್ 7 ರಂದು ಬಜೆಟ್ ಮಂಡಿಸಲಿದ್ದಾರೆ ಎಂದು ಖಾದರ್‌ ಹೇಳಿದ್ದಾರೆ.

16ನೇ ವಿಧಾನಸಭೆಯ ಮೊದಲ ಅಧಿವೇಶನದ ಮುಂದುವರೆದ ಭಾಗವಾಗಿ ಬಜೆಟ್‌ ಅಧಿವೇಶನ ಜು.3 ರಂದು ಶುರುವಾಗಲಿದೆ. ಒಟ್ಟು 10 ದಿನಗಳ ಕಾಲ ಈ ಅಧಿವೇಶನ ನಡೆಯಲಿದೆ.

ರಾಜ್ಯಪಾಲರ ಭಾಷಣ ಮೊದಲ ದಿನ ನಡೆಯಲಿದೆ. ಬಳಿಕ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮೂರು ದಿನಗಳ ಕಾಲ ಚರ್ಚೆ ನಡೆಯಲಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಆನ್‌ಲೈನ್ ವಂಚನೆ ಜಾಲವಾದ ಪಿಂಕ್ ವಾಟ್ಸ್ಆ್ಯಪ್ ಬಗ್ಗೆ ಪೊಲೀಸ್ ಇಲಾಖೆ ಎಚ್ಚರಿಕೆ

ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಜು.7 ರಂದು ಶುಕ್ರವಾರ 2023-24ನೇ ಸಾಲಿನ ಬಜೆಟ್‌ ಮಂಡನೆ ಮಾಡಲಿದ್ದಾರೆ. ಬಜೆಟ್‌ ಮೇಲೆ ಇರುವ ಕೆಲವು ಸಾಮಾನ್ಯ

ಚರ್ಚೆ ಬಳಿಕ ಅನುದಾನದ ಬೇಡಿಕೆಗಳನ್ನು ಅಂಗೀಕರಿಸಲಾಗುವುದು ಎಂದು (about july Assembly session) ಮಾಹಿತಿ ನೀಡಿದರು.

ವಿಧೇಯಕಗಳ ಬಗ್ಗೆಯೂ ಚರ್ಚೆ:

ಈ ಬಾರಿ ಸರ್ಕಾರದಿಂದ ಸ್ವೀಕರಿಸಲಾದ ವಿಧೇಯಕಗಳ ಪರ್ಯಾಲೋಚನೆ ಮತ್ತು ಅಂಗೀಕಾರ ಈ ಅಧಿವೇಶನದಲ್ಲಿ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.ಮತ್ತು ಎಪಿಎಂಸಿ (APMC) ತಿದ್ದುಪಡಿ

ಕಾಯ್ದೆಯಂತಹ ಮುಖ್ಯ ತಿದ್ದುಪಡಿ ವಿಧೇಯಕಗಳು ಮತ್ತು ಮತಾಂತರ ನಿಷೇಧ ಕಾಯಿದೆ ಇದೇ ಅಧಿವೇಶನದಲ್ಲಿ ಮಂಡನೆಯಾಗುವ ಬಗ್ಗೆ ಪರೋಕ್ಷ ಸುಳಿವು ನೀಡಿದರು.

8 ದಿನಗಳ ಕಾಲ ಪ್ರಶ್ನೋತ್ತರ ಕಲಾಪ:

ರಾಜ್ಯಪಾಲರ ಭಾಷಣ ಹಾಗೂ ಬಜೆಟ್‌ ಮಂಡನೆ ದಿನ ಹೊರತುಪಡಿಸಿ ಹತ್ತು ದಿನಗಳ ಕಲಾಪದಲ್ಲಿ ಉಳಿದ ಎಂಟು ದಿನಗಳ ಕಾಲ ಪ್ರಶ್ನೋತ್ತರ ಕಲಾಪ ನಡೆಯಲಿದೆ. ಜತೆಗೆ ಶೂನ್ಯ ವೇಳೆ, ಗಮನ ಸೆಳೆಯುವ

ಸೂಚನೆ,ನಿಯಮ 69ರ ಸೂಚನೆ, ನಿಲುವಳಿ ಸೂಚನೆ, ಸೇರಿದಂತೆ ಎಲ್ಲಾ ಕಾರ್ಯಕಲಾಪಗಳು ನಡೆಯಲಿವೆ ಎಂದು ಯು.ಟಿ. ಖಾದರ್‌ ಅವರು ವಿವರಿಸಿದರು.

ಸಾವರ್ಕರ್‌ ಫೋಟೋ ಹಾಗೇ ಇರುತ್ತೆ:

ಸುವರ್ಣಸೌಧದ (Suvarna Saudha) ವಿಧಾನಸಭೆಯಲ್ಲಿ ಸಾವರ್ಕರ್‌ ಫೋಟೋ ಅಳವಡಿಸಿದೆ ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಪೀಕರ್‌ ಯು.ಟಿ. ಖಾದರ್‌, ಅಗತ್ಯವಿರುವ ವಿಚಾರಗಳ ಬಗ್ಗೆ ಮಾತ್ರ ಚರ್ಚೆ ಮಾಡಬೇಕು.

ಹಿಂದಿನ ಘಟನೆಗಳ ಬಗ್ಗೆ ಯೋಚನೆ ಮಾಡುತ್ತಾ ಕುಳಿತರೆ ಹಿಂದೆಯೇ ಉಳಿಯುತ್ತೇವೆ.ಈ ಹಿಂದೆ ವಿಧಾನಸಭೆ ಹೇಗಿತ್ತೋ ಮುಂದೆಯೂ ಹಾಗೆಯೇ ಇರಲಿದೆ ಎಂದಷ್ಟೇ ಹೇಳಿದರು.

ಇದನ್ನೂ ಓದಿ : ಇಂದಿರಾ ಕ್ಯಾಂಟೀನ್‌ ಊಟದ ಮೆನು ಬದಲಾವಣೆ : ಹೊಸ ಸೇರ್ಪಡೆ ಪಟ್ಟಿ ಇಲ್ಲಿದೆ ನೋಡಿ

ಈ ಹಿಂದೆ ವೀರ ಸಾವರ್ಕರ್‌ (Veera Savarkar) ಫೋಟೋವನ್ನು ಬೆಳಗಾವಿ ಸುವರ್ಣಸೌಧದ ವಿಧಾನಸಭೆ ಹಾಲ್‌ನಲ್ಲಿ ಅಳವಡಿಕೆ ಮಾಡಿದ್ದರು ಇದನ್ನು ಖಂಡಿಸಿ ಕಾಂಗ್ರೆಸ್‌ ಸದಸ್ಯರು ವಿಧಾನಸಭೆ ಕಾರ್ಯ ಕಲಾಪಗಳ

ಸಮಿತಿ ಸಭೆಗೆ ಬಹಿಷ್ಕಾರ ಹಾಕಿದ್ದರು. ಇದಕ್ಕೆ ಸೈದ್ಧಾಂತಿಕವಾಗಿ ನಮ್ಮ ವಿರೋಧವಿದೆ,ರಾಜಕೀಯ ಲಾಭಕ್ಕಾಗಿ ಭಾವಚಿತ್ರ ಹಾಕಿದ್ದಾರೆ ಎಂದು ಅಂದಿನ ಕಾಂಗ್ರೆಸ್‌ ಶಾಸಕಾಂಗ ಪಕ್ಷದ

ಉಪನಾಯಕರಾಗಿದ್ದ ಯು.ಟಿ. ಖಾದರ್‌ ಹೇಳಿದ್ದರು.

ರಶ್ಮಿತಾ ಅನೀಶ್

Exit mobile version