Karnataka : ಪೊಲೀಸ್ ಇಲಾಖೆಯು ಆನ್ಲೈನ್ ವಂಚನೆ (online fraud Pink WhatsApp) ಜಾಲವಾದ ‘ಪಿಂಕ್ ವಾಟ್ಸ್ಆ್ಯಪ್’ ಬಗ್ಗೆ ಎಚ್ಚರ ವಹಿಸುವಂತೆ ಸಾರ್ವಜನಿಕರಿಗೆ ನಿರ್ದೇಶನ ನೀಡಿದೆ.
ಹೊಸ ಪಿಂಕ್ ರೂಪದಲ್ಲಿ ಮತ್ತು ಹೆಚ್ಚುವರಿ ಫೀಚರ್ ಗಳೊಂದಿಗೆ ವಾಟ್ಸ್ ಆ್ಯಪ್ ನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತಿದೆ.
ಅನೇಕರ ಮೊಬೈಲ್ ಗೆ “ಇದನ್ನು ಅಗತ್ಯವಾಗಿ ಪ್ರಯತ್ನಿಸಿ ” ಎಂದು ಕೆಲವು ಸಂದೇಶಗಳು ಲಿಂಕ್ ನೊಂದಿಗೆ(Link) ಮೊಬೈಲ್ಗಳಿಗೆ ಬರುತ್ತಿದ್ದು, ಇದನ್ನು ನಂಬಿ ಸಾಕಷ್ಟು ಮಂದಿ ಈ ಲಿಂಕ್ ಒತ್ತಿ ನಕಲಿ ಪಿಂಕ್ ವಾಟ್ಸ್ ಆ್ಯಪ್
ನ್ನು ಇನ್ಸ್ಟಾಲ್ (Install) ಮಾಡುತ್ತಿದ್ದಾರೆ. ಪಿಂಕ್ ವಾಟ್ಸ್ಆ್ಯಪ್ ಇನ್ ಸ್ಟಾಲ್ ಮಾಡಿಕೊಂಡ ಪರಿಣಾಮ ಹ್ಯಾಕರ್ಸ್ ಗಳು(Hackers) ಮೊಬೈಲ್ನಲ್ಲಿರುವ ಫೋಟೊಗಳು, ಕಾಂಟಾಕ್ಟ್ಗಳು,
ನೆಟ್ ಬ್ಯಾಂಕಿಂಗ್ ಪಾಸ್ವರ್ಡ್, ಎಸ್ಸೆಮೆಸ್ ಗಳು ಸೇರಿದಂತೆ ಎಲ್ಲ ರೀತಿಯ ಮಾಹಿತಿಗಳನ್ನು (online fraud Pink WhatsApp) ಕದಿಯಬಹುದು.
ಇದನ್ನೂ ಓದಿ : ಇಂದಿರಾ ಕ್ಯಾಂಟೀನ್ ಊಟದ ಮೆನು ಬದಲಾವಣೆ : ಹೊಸ ಸೇರ್ಪಡೆ ಪಟ್ಟಿ ಇಲ್ಲಿದೆ ನೋಡಿ
ಆದುದರಿಂದ ಯಾವುದೇ ಕಾರಣಕ್ಕೂ ಇಂತಹ ಆ್ಯಪ್ಗಳನ್ನು(APP) ಇನ್ ಸ್ಟಾಲ್ ಮಾಡಬೇಡಿ ಎಂದು ಉಡುಪಿ (Udupi) ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚೇಂದ್ರ ತಮ್ಮ ಹೇಳಿಕೆಯಲ್ಲಿ ಸಾರ್ವಜನಿಕರಿಗೆ ಮನವಿ
ಮಾಡಿದ್ದಾರೆ.ಒಂದು ವೇಳೆ ಪಿಂಕ್ ವಾಟ್ಸ್ಆ್ಯಪ್ ಇನ್ ಸ್ಟಾಲ್ ಮಾಡಿದ್ದರೆ ಅದನ್ನು ಕೂಡಲೇ ಅನ್ ಇನ್ಸ್ಟಾಲ್(Uninstall) ಮಾಡಬೇಕು.
ಎಲ್ಲ ವಾಟ್ಸ್ ಆ್ಯಪ್ ವೆಬ್ (Whatsap Web) ಸಾಧನಗಳನ್ನು ಅನ್ ಲಿಂಕ್ ಮಾಡಬೇಕು. ಸೆಟ್ಟಿಂಗ್ಗಳಿಂದ ಬ್ರೌಸರ್ (Browser)ಸಂಗ್ರಹವನ್ನು ತೆರವುಗೊಳಿಸಬೇಕು. ಎಲ್ಲ ಅಪ್ಲಿಕೇಶನ್ ಗಳಿಗೆ ಅನುಮತಿಯನ್ನು
ಪರಿಶೀಲಿಸಬೇಕು. ಯಾವುದೇ ಅಪ್ಲಿಕೇಶನ್ಗೆ (Application) ಯಾವುದೇ ಅನುಮಾನಾಸ್ಪದ ಅನುಮತಿ ಕ೦ಡು ಬಂದಲ್ಲಿ ಅದನ್ನು ಹಿಂಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.
ರಶ್ಮಿತಾ ಅನೀಶ್