ಸರ್ಕಾರಿ ಶಾಲೆಗಳಲ್ಲಿ ವಾರದಲ್ಲಿ ಎರಡು ದಿನ ಕೊಡುತ್ತಿದ್ದ ಮೊಟ್ಟೆಯಲ್ಲಿ 1 ದಿನ ಕಡಿತ: ಸರ್ಕಾರದ ಆದೇಶ

ಬೆಂಗಳೂರು : ರಾಜ್ಯದ ಸರ್ಕಾರಿ (about school egg distribution) ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಹಿಂದಿನ ವರ್ಷದಿಂದ ಅವರ ಸಾಮಾನ್ಯ ಊಟದ ಜೊತೆಗೆ ಪೂರಕ ಊಟವಾಗಿ

ಬೇಯಿಸಿದ ಮೊಟ್ಟೆ (Egg) ಅಥವಾ ಬಾಳೆಹಣ್ಣು / ಶೇಂಗಾ ಚಿಕ್ಕಿಯನ್ನು ವಾರದಲ್ಲಿ ಎರಡು ದಿನ ಪಡೆಯುತ್ತಿದ್ದರು. ಆದರೆ ಇನ್ನು ಮುಂದೆ ಇವುಗಳನ್ನು ಒಂದು ದಿನಕ್ಕೆ ಕಡಿತಗೊಳಿಸಲಾಗಿದೆ. ಮತ್ತು ಈ ಬದಲಾವಣೆಯು

ಮುಂದಿನ ತಿಂಗಳ ಜುಲೈ 15 ರವರೆಗೆ ಅನ್ವಯಿಸಿ ಈ (about school egg distribution) ಆದೇಶ ಮಾಡಲಾಗಿದೆ.

ಮುಂದಿನ ತಿಂಗಳು ಅಂದರೆ ಜುಲೈ ನಲ್ಲಿ (July) ಹೊಸ ಬಜೆಟ್‌ (Budget) ಮಂಡನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನ ಮೇರೆಗೆ ಜುಲೈ 15ರವರೆಗೆ ಮಾತ್ರ ಅನ್ವಯಿಸುವಂತೆ ಈ ಆದೇಶ

ಮಾಡಲಾಗಿದೆ ಎಂದು ಬಿಸಿಯೂಟ ಯೋಜನೆ ಅಧಿಕಾರಿಗಳ ಹೇಳಿಕೆಗಳು ವರದಿಯಾಗಿವೆ.

ಇದನ್ನೂ ಓದಿ : ರಾಜ್ಯದಲ್ಲಿ ಆನ್‌ಲೈನ್ ವಂಚನೆ ಜಾಲವಾದ ಪಿಂಕ್ ವಾಟ್ಸ್ಆ್ಯಪ್ ಬಗ್ಗೆ ಪೊಲೀಸ್ ಇಲಾಖೆ ಎಚ್ಚರಿಕೆ

ಮುಂದಿನ ಬಜೆಟ್‌ನಲ್ಲಿ ಮೊಟ್ಟೆ ನೀಡುವ ಯೋಜನೆ ಮುಂದುವರಿಸುವುದಾಗಿ ಸರ್ಕಾರ ಘೋಷಿಸಿದರೆ ಹೊಸ ಆದೇಶ ಹೊರಡಿಸಲಾಗುವುದು ಎಂದು ಬಿಸಿಯೂಟ ಯೋಜನೆ ನಿರ್ದೇಶಕರು ತಿಳಿಸಿದ್ದಾರೆ.

ಮಂಗಳವಾರ ಬಿಡುಗಡೆ ಮಾಡಿದ ಸುತ್ತೋಲೆಯಲ್ಲಿ, ರಾಜ್ಯದ ಎಲ್ಲಾ ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ದಾಖಲಾದ 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಜೂ.20ರಿಂದ ಜುಲೈ15ರವರೆಗೆ ಮೊದಲ

ಹಂತದಲ್ಲಿ ಅಥವಾ ಮುಂದಿನ ಆದೇಶ ಬರುವವರೆಗೆ ವಾರದಲ್ಲಿ ಒಂದು ದಿನ ಬೇಯಿಸಿದ ಮೊಟ್ಟೆಯನ್ನು ಪೂರಕ ಪೌಷ್ಠಿಕ ಆಹಾರವಾಗಿ ನೀಡಬೇಕು. ಬಾಳೇಹಣ್ಣು ಇಲ್ಲವೇ ಶೇಂಗಾ ಚಿಕ್ಕಿಯನ್ನು ಮೊಟ್ಟೆ ತಿನ್ನದ

ಮಕ್ಕಳಿಗೆ ವಿತರಿಸಲು ಕ್ರಮ ವಹಿಸುವಂತೆ ಶಿಕ್ಷಣ ಇಲಾಖೆಯ ಎಲ್ಲ ಡಿಡಿಪಿಐಗಳು (DDPI) ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (Field Education Officer) ಸೂಚಿಸಿದ್ದಾರೆ.

ರಶ್ಮಿತಾ ಅನೀಶ್

Exit mobile version