Bengaluru : ಕೊಲೆ ಪ್ರಕರಣವೊಂದರಲ್ಲಿ ಜೀವವಿರುವವರೆಗೂ ಜೈಲು ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಗೆ ಸೆಷನ್ಸ್ ನ್ಯಾಯಾಲಯ (about trial court sentence)ಜೀವವಿರುವರೆಗೂ ಶಿಕ್ಷೆ ನೀಡುವ
ಅಧಿಕಾರವನ್ನು ಚಲಾಯಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್(about trial court sentence) ಪೀಠ ತಿಳಿಸಿದೆ.
ಹಾಸನ (Hassan) ಜಿಲ್ಲೆಯ ದ್ಯಾವಪನಹಳ್ಳಿಯ (Dyavappana halli) ನಿವಾಸಿ ಹರೀಶ್ (Harish) ಮತ್ತು ಮೂರು ವರ್ಷ ಶಿಕ್ಷೆಗೆ ಗುರಿಯಾಗಿದ್ದ ಲೋಕೇಶ್ (Lokesh) ಎಂಬುವರು ಕೊಲೆ
ಆರೋಪದಲ್ಲಿ ಜೀವವಿರುವರೆಗೂ ಜೈಲಿನಲ್ಲಿರುವ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್
(K.Soma shekhar) ಮತ್ತು ಕೆ.ರಾಜೇಶ್ ರೈ(K.Rajesh Rai) ಅವರಿದ್ದ ನ್ಯಾಯಮೂರ್ತಿ ಕೆ.ರಾಜೇಶ್ ನ್ಯಾಯಪೀಠ ಈ ಆದೇಶ ನೀಡಿದೆ.

ಕೇಂದ್ರ ಸರಕಾರದ ವಿರುದ್ಧದ ವಿ.ಶ್ರೀಹರನ್ (V Sriharan) ಅಲಿಯಾಸ್ ಮುರುಗನ್ (Murugan) ಮತ್ತಿತರರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ (Supreme Court) ನೀಡಿರುವ ತೀರ್ಪನ್ನು ಉಲ್ಲೇಖಿಸಿರುವ
ಹೈಕೋರ್ಟ್, ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಮಾತ್ರ ಅಪರಾಧಿಯೊಬ್ಬರಿಗೆ ಜೀವವಿರುವರೆಗೂ ಶಿಕ್ಷೆ ನೀಡುವಂತಹ ವಿಶೇಷ ಆದೇಶವನ್ನು ನೀಡಬಹುದಾಗಿದೆ. ಆದರೆ, ವಿಚಾರಣಾ ನ್ಯಾಯಾಲಯಕ್ಕೆ
(Trial Court) ಈ ರೀತಿಯ ಶಿಕ್ಷೆ ನೀಡುವ ಅಧಿಕಾರವಿಲ್ಲ ಎಂದು ಹೇಳಿದೆ.
ಇದನ್ನೂ ಓದಿ : ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಡೆವಲಪ್‌ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ನಲ್ಲಿ 26 ಹುದ್ದೆಗಳಿಗೆ ಅರ್ಜಿ ಆಹ್ವಾನ : ಇಲ್ಲಿದೆ ಮಾಹಿತಿ
ಪ್ರಕರಣದ ಮೊದಲ ಆರೋಪಿ ಹರೀಶ್‌ಗೆ ಶಿಕ್ಷೆ ನೀಡಿರುವ ಕ್ರಮ ಎತ್ತಿಹಿಡಿದಿರುವ ಹೈಕೋರ್ಟ್, ಆರೋಪಿಗೆ ವಿಚಾರಣಾ ನ್ಯಾಯಾಲಯ ಜೀವವಿರುವರೆಗೂ ಶಿಕ್ಷೆ ನೀಡಿರುವುದು ಕಾನೂನು ಪ್ರಕಾರ
ಸರಿಯಾದ ಕ್ರಮವಲ್ಲ, ಅಲ್ಲದೆ, ಸೆಷನ್ಸ್ ನ್ಯಾಯಾಲಯ ಈ ರೀತಿಯ ಪ್ರಕರಣಗಳಲ್ಲಿ ಜೀವವಿರುವರೆಗೂ ಶಿಕ್ಷೆ ನೀಡುವ ಅಧಿಕಾರವನ್ನು ಚಲಾಯಿಸಲು ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.

ಸುಪ್ರೀಂಕೋರ್ಟ್ ತಿಳಿಸಿರುವ ಪ್ರಕಾರ ಜೀವ ಇರುವವರೆಗೂ ಶಿಕ್ಷೆ ವಿಧಿಸುವ ಪ್ರಕರಣಗಳಲ್ಲಿ ಅತ್ಯಂತ ಕ್ರೂರ ಮತ್ತು ಅಪರೂಪದ ಕೃತ್ಯಗಳಾಗಿದ್ದರೆ ಮಾತ್ರ ವಿಧಿಸಬೇಕು ಜತೆಗೆ, ಕ್ರೈಂ (Crime), ಕ್ರಿಮಿನಲ್
(Criminal) ಮತ್ತು ಅತ್ಯಂತ ಅಪರೂಪದ ಕೃತ್ಯದ ಬಗ್ಗೆ ಪರೀಕ್ಷೆ ನಡೆಸಬೇಕು ಎಂದು ತಿಳಿಸಿದೆ. ಈ ಪ್ರಕರಣದಲ್ಲಿ ಕ್ರೈಂ ಮತ್ತು ಕ್ರಿಮಿನಲ್ ಪರೀಕ್ಷೆಗೆ ತೃಪ್ತಿಕರವಾಗಿದೆ. ಆದರೆ, ಪ್ರಾಸಿಕ್ಯೂಷನ್ ಸಾಕ್ಷ್ಯಾಧಾರಗಳನ್ನು
ಒದಗಿಸಲು ಮತ್ತು ಅತ್ಯಂತ ಅಪರೂಪದ ಕೃತ್ಯ ಎಂಬುದನ್ನು ಸಾಬೀತುಪಡಿಸಲು ವಿಫಲವಾಗಿದೆ ಎಂದು ಪೀಠ ತಿಳಿಸಿದೆ.
ರಶ್ಮಿತಾ ಅನೀಶ್