Bengaluru : ಕಾಂಗ್ರೆಸ್ ಸರ್ಕಾರ(Congress Government) ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ(Corruption) ಪ್ರಕರಣಗಳ ತನಿಖೆ ನಡೆಸಲು ಸ್ಥಾಪನೆಯಾಗಿದ್ದ ಭ್ರಷ್ಟಾಚಾರ ನಿಗ್ರಹ ದಳವನ್ನು(ACB) ರಾಜ್ಯ ಹೈಕೋರ್ಟ್(Karnataka Highcourt) ಅಮಾನ್ಯಗೊಳಿಸಿದ ನಂತರ,

ಇದೀಗ ಲೋಕಾಯುಕ್ತಕ್ಕೆ(Lokayuktha) ಅದರ ಎಲ್ಲ ಪ್ರಕರಣಗಳನ್ನು ಹಸ್ತಾಂತರ ಮಾಡಲಾಗಿದೆ. ಇಂದಿನಿಂದ ಅಧಿಕೃತವಾಗಿ ಲೋಕಾಯುಕ್ತ ಪ್ರಕರಣಗಳ ತನಿಖೆಯನ್ನು ಕೈಗೆತ್ತಿಗೊಳ್ಳಲಿದೆ. ಭ್ರಷ್ಟಾಚಾರ ನಿಗ್ರಹ ದಳ ಸಂಪೂರ್ಣವಾಗಿ ಅಮಾನ್ಯಗೊಂಡಿದ್ದು, ಎಸಿಬಿ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದ 141ಕ್ಕೂ ಹೆಚ್ಚು ಪೊಲೀಸರನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ.
ಇಂದು ಸಂಜೆ ವೇಳೆಗೆ ಎಸಿಬಿ ಅಡಿಯಲ್ಲಿದ್ದ ಎಲ್ಲ ಪ್ರಕರಣಗಳ ಕಡತಗಳೂ ಲೋಕಾಯುಕ್ತಕ್ಕೆ ಹಸ್ತಾಂತರವಾಗಲಿವೆ. ನಾಳೆಯಿಂದ ಸಿದ್ದರಾಮಯ್ಯ(Siddaramaiah) ಅವರು ಸ್ಥಾಪಿಸಿದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಇತಿಹಾಸ ಸೇರಲಿದೆ. ಇನ್ನು 2016ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸ್ಥಾಪಿಸಿದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ),
ಇದನ್ನೂ ಓದಿ : https://vijayatimes.com/high-alert-on-gyanvapi-case-verdict/
2022ರ ಜೂನ್‌ವರೆಗೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ 2,121 ಪ್ರಕರಣಗಳ ವಿಚಾರಣೆ ನಡೆಸುತ್ತಿದೆ. ಇದರಲ್ಲಿ 1,034 ಪ್ರ ಕರಣಗಳು ತನಿಖಾ ಹಂತದಲ್ಲಿವೆ. ಇನ್ನು ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಒಟ್ಟು 322 ಹುದ್ದೆಗಳಿವೆ. ಒಬ್ಬರು ಐಜಿಪಿ, 10 ಎಸ್ಪಿಗಳು, 35 ಹೆಚ್ಚುವರಿ ಎಸ್ಪಿಗಳು, 75 ಇನ್ಸ್ಪೆಕ್ಟರ್ಗಳು ಮತ್ತು 200 ಕಾನ್ಸ್ಟೆಬಲ್ ಹಾಗೂ ಹೆಡ್ಕಾನ್ಸ್ಟೆಬಲ್ಗಳ ಹುದ್ದೆಗಳಿವೆ.
ಕೆಳ ಹಂತದ ಸಿಬ್ಬಂದಿಗಳನ್ನು ಮಾತ್ರ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಇನ್ನು ಉನ್ನತ ಮಟ್ಟದ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯೂ ಶೀಘ್ರವೇ ನಡೆಯಲಿದೆ. ಭ್ರಷ್ಟಾಚಾರ ನಿಗ್ರಹ ದಳ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು.

ಹೀಗಾಗಿ ಇದು ಒಂದು ರೀತಿಯಲ್ಲಿ ರಾಜ್ಯ ಸರ್ಕಾರದ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿತ್ತು ಎಂಬ ಆರೋಪವು ಕೇಳಿಬಂದಿತ್ತು. ಆದರೆ ಲೋಕಾಯುಕ್ತ ಸಂಸ್ಥೆಯೂ ಸಂಪೂರ್ಣ ಸ್ವಾಯತ್ತ(Autonomus) ಸಂಸ್ಥೆಯಾಗಿದ್ದು, ಚುನಾವಣಾ ಆಯೋಗದಂತೆ ನಿರ್ಭೀತಿಯಿಂದ ಕಾರ್ಯನಿರ್ವಹಿಸಲಿದೆ.