ನಟ ಚೇತನ್ ಅವರನ್ನು ಮಂಗಳವಾರ ಮಧ್ಯಾಹ್ನ ಶೇಷಾದ್ರಿಪುರಂ ಪೊಲೀಸರು ಮನೆಗೆ ಬಂದು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ನಟ ಚೇತನ್ ಪತ್ನಿ ಮೇಘನಾ ಆರೋಪ ವ್ಯಕ್ತಪಡಿಸಿದ್ದರು. ಸಾಮಾಜಿಕ ಕಾರ್ಯಕರ್ತ, ಕನ್ನಡ ಪರ ಹೋರಾಟಗಾರನಾಗಿ ಕೆಲ ವೇದಿಕೆಗಳಲ್ಲಿ ಕಾಣಿಸಿಕೊಂಡಿರುವ ನಟ ಚೇತನ್ ಅವರನ್ನು ಶೇಷಾದ್ರಿಪುರಂ ಪೊಲೀಸರು ಯಾವುದೇ ನೋಟಿಸ್ ನೀಡದೆ, ನಾನು ಮನೆಯಲ್ಲಿ ಇಲ್ಲದ ಸಮಯದಲ್ಲಿ ಅವರನ್ನು ಎಳೆದುಕೊಂಡು ಹೋಗಿದ್ದಾರೆ ಎಂದು ಮೇಘನಾ ಶೇಷಾದ್ರಿಪುರಂ ಠಾಣೆಯ ಮುಂದೆ ನಿಂತು ಫೇಸ್ಬುಕ್ ಲೈವ್ ಬಂದು ಚೇತನ್ ಅವರನ್ನು ಅಪಹರಿಸಿರುವ ಬಗ್ಗೆ ಹೇಳಿದ್ದಾರೆ.

ಈ ಪ್ರಕರಣ ಕುರಿತು ಚೇತನ್ ಪತ್ನಿ ಮೇಘನಾ ಸುದ್ದಿಗೋಷ್ಟಿಯಲ್ಲಿ ಪೊಲೀಸರನ್ನು ಯಾಕೆ ನೀವು ನೋಟಿಸ್ ನೀಡದೆ ಚೇತನ್ ಅವರನ್ನು ಕರೆದುಕೊಂಡು ಹೋಗಿದ್ದು, ಎಂದರೆ ಪೊಲೀಸರಿಂದ ಯಾವುದೇ ಉತ್ತರವಿಲ್ಲ. ಇಲ್ಲಿನ ಪೊಲೀಸರು ನಾವು ಚೇತನ್ ಅವರನ್ನು ಅರೆಸ್ಟ್ ಮಾಡಿಲ್ಲ ಎಂದು ವಾದಿಸುತ್ತಿದ್ದಾರೆ! ಇದಕ್ಕೆ ಏನು ಹೇಳಬೇಕು ನೀವೇ ಹೇಳಿ ಎಂದು ಕೇಳಿದ್ದಾರೆ. ಸದ್ಯದ ವರದಿ ನಟ ಚೇತನ್ ಅವರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹಿಜಾಬ್ ವಿವಾದ ಕುರಿತು ಕಳೆದ ದಿನಗಳಿಂದ ನ್ಯಾಯಲಯದಲ್ಲಿ ನಡೆಯುತ್ತಿದ್ದ ಚರ್ಚೆ ಕುರಿತು ವಿವಾದಾತ್ಮಕ ಪೋಸ್ಟ್ ಹಾಕಿದ್ದ ಹಿನ್ನೆಲೆ ಚೇತನ್ ಅವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಹಿಜಾಬ್ ಕುರಿತು ಯಾರು ಕೂಡ ವಿವಾದಾತ್ಮಕ ಹೇಳಿಕೆಗಳು, ಪೋಸ್ಟ್ ಮಾಡುವುದು ಅಕ್ಷಮ್ಯ ತಪ್ಪು!

ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಮಾಡಬಾರದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್ ಅವರು ಸೂಚನೆ ನೀಡಿದ್ದರು. ಎರಡು ವರ್ಷಗಳ ಹಿಂದೆ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿ ನಟ ಚೇತನ್ ಹೈಕೋರ್ಟ್ ನ್ಯಾ. ಕೃಷ್ಣ ದೀಕ್ಷಿತ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಫೆ.16 ರಂದು ಪೋಸ್ಟ್ ಆಗಿತ್ತು ಜೊತೆಗೆ ಅಷ್ಟೇ ವೈರಲ್ ಆಗಿತ್ತು. 21 ನೇ ಶತಮಾನದಲ್ಲಿದ್ದರು ಕೂಡ ನ್ಯಾಯಾಂಗದ ದೀಕ್ಷಿತ್ ಅವರು ಮಾಡುತ್ತಿರುವ ಸ್ತ್ರೀ ವಿರುದ್ಧ ಕಿಚ್ಚು, ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದರು. ಚೇತನ್ ಅವರು ಎರಡು ವರ್ಷಗಳ ಹಿಂದೆ ಮಾಡಿದ್ದ ವಿವಾದಾತ್ಮಕ ಟ್ವೀಟ್ ಕುರಿತು ಶೇಷಾದ್ರಿಪುರಂ ಪೊಲೀಸರು ಚೇತನ್ ಅವರನ್ನು ಠಾಣೆಗೆ ಕರೆದುಕೊಂಡು ಹೋಗಲು ಪ್ರಮುಖ ಕಾರಣ ಎಂಬ ಮಾಹಿತಿ ಸದ್ಯ ಹೊರಬಿದ್ದಿದೆ.