ಎಲ್ಲಾ ದೇವರುಗಳು ಮತ್ತು ಬಹುತೇಕ ಧರ್ಮಗಳನ್ನ ಅಣಕಿಸಲೇಬೇಕಿದೆ : ನಟ ಚೇತನ್

Chethan Ahimse

‘ದೈವನಿಂದನೆ’ ಅಂದರೆ ದೇವರಿಗೆ ಅಪಮಾನ ಮಾಡುವುದು ಸೆಕ್ಷನ್ 295ಎ ಭಾರತೀಯ ದೈವನಿಂದನೆಯ ಕಾನೂನು 295ಎನ ಒಬ್ಬ ಬಲಿಪಶುವಾದ ನನ್ನ ಪ್ರಕಾರ (‘ಬ್ರಾಹ್ಮಣ್ಯ) ಈ ಕಾನೂನು ಈ ದೇಶದ ಜಾತ್ಯಾತೀತತೆಗೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಂಟಕವಾಗಿದೆ. ಎಲ್ಲಾ ದೇವರುಗಳು ಮತ್ತು ಬಹುತೇಕ ಧರ್ಮಗಳನ್ನ ಅಣಕಿಸಲೇಬೇಕಿದೆ ಮತ್ತು ಪ್ರಶ್ನೆ ಮಾಡಬೇಕಿದೆ ಎಂದು ನಟ(Actor) ಮತ್ತು ಸಾಮಾಜಿಕ ಹೋರಾಟಗಾರ ಚೇತನ್‌(Chethan) ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳ ಕುರಿತು ತಮ್ಮ ಫೇಸ್‌ಬುಕ್‌(Facebook) ಪುಟದಲ್ಲಿ ಬರೆದುಕೊಂಡಿರುವ ಅವರು, ಸಮಾನತೆ ಹಿಂದುತ್ವವನ್ನು ಸುಲಭವಾಗಿ ಮಣಿಸಬಲ್ಲದು- ಆದರೆ ಅದಕ್ಕೆ ಅಡ್ಡಗಾಲಾಗಿ ನಿಂತು ಅದನ್ನ ಪೋಷಿಸುತ್ತಿರುವುದು ಹಿಂದೂ ಉದಾರವಾದಿಗಳು. ಅಂಬೇಡ್ಕರ್(BR Ambedkar) ಮತ್ತು ಪೆರಿಯಾರ್ ಸುಲಭವಾಗಿ ಸಾವರ್ಕರ್(Savarkar) ಮತ್ತು ಉಪಾಧ್ಯಾಯರನ್ನು ಮಣಿಸಬಲ್ಲರು. ಆದರೆ ಅದಕ್ಕೆ ಅಡ್ಡಗಾಲಾಗಿ ನಿಂತು ಅವರನ್ನು ಪೋಷಿಸುತ್ತಿರುವುದು ಗಾಂಧಿ(Gandhi) ಮತ್ತು ನೆಹರು(Nehru). ಹೀಗಾಗಿ ಮೊದಲು ಉದಾರವಾದತೆಯನ್ನು ಕಳಚಿಡಬೇಕು.

ಇನ್ನು ಎರಡು ಧರ್ಮದ ಮತಾಂಧರಿಂದ ಉದಯಪುರದಲ್ಲಿ ಟೈಲರ್ ಕನ್ಹಯ್ಯಲಾಲ್ ಅವರ ಭೀಕರ ಹತ್ಯೆ(Brutal Murder) ಇಸ್ಲಾಂ ಇಸ್ಟ್ ಭಯೋತ್ಪಾದನೆಯ ಪ್ರಕರಣವಾಗಿದೆ. ಮೊಹಮ್ಮದ್ ವಿರುದ್ಧ ನೂಪುರ್ ಶರ್ಮಾ(Nupur Sharma) ಹೇಳಿಕೆಗೆ ಕನ್ಹಯ್ಯಾಲಾಲ್ ಬೆಂಬಲ ವ್ಯಕ್ತಪಡಿಸಿದ್ದರು. ಸಾಂವಿಧಾನಿಕ ಹಕ್ಕುಗಳು ವಾಕ್ ಸ್ವಾತಂತ್ರ್ಯವನ್ನು ಒಳಗೊಂಡಿರುತ್ತದೆ, ಅದರ ಆಧಾರವು ಒಫೆಂಡ್ ಮಾಡುವ ಹಕ್ಕಾಗಿದೆ ಎಂದಿದ್ದಾರೆ.

Exit mobile version