Bengaluru: ಚೀನಾ (China) ಅತಿಕ್ರಮಣವನ್ನು ಮುಚ್ಚಿಹಾಕಿದಾಗ, ಚೀನಾ ಕಂಪೆನಿಗಳು ಸಾವಿರಾರು (Actor Kishore question – central govt) ಕೋಟಿ, ಗೆಳೆಯ ಅದಾನಿಗೆ ಕಾನೂನು
ಬಾಹಿರವಾಗಿಯೂ ಕೊಡುತ್ತಲೇ ಇರುವಾಗ, ಲೆಕ್ಕಪುಸ್ತಕವಿಲ್ಲದ ಪಿಎಮ್ ಕೇರ್ಸ್ ಗೆ, ಗೋದೀ ಚಾನೆಲ್ಲುಗಳಿಗೆ, ಐಪಿಎಲ್ ಗೆ ಕಾನೂನು ಪ್ರಕಾರವೇ ಕೊಟ್ಟಾಗಲೆಲ್ಲ ಕಾಣದ ದೇಶದ್ರೋಹ,
ಅದೇ ಚೀನೀ ಕಂಪನಿಗಳು ಹಣ ಕೊಟ್ಟದ್ದಕ್ಕೆ ಪ್ರಾಮಾಣಿಕವಾಗಿ ಜನಪರವಾಗಿ ಕೆಲಸ ಮಾಡುವ ಪತ್ರಕರ್ತರ ಕೆಲಸದಲ್ಲಿ ಕಂಡುಬಿಟ್ಟಿತಲ್ಲ. ಹಾಗಾದರೆ ವಿವೊ (Vivo) , ಶಾಒಮಿ ಫೋನು
ಬಳಸುವ ನಾವು ನೀವೆಲ್ಲರೂ ಇವರ ಪ್ರಕಾರ ದೇಶದ್ರೋಹಿಗಳೇ? ಎಂದು ನಟ ಕಿಶೋರ್ (Kishore) ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಚೀನಾದಿಂದ ಹಣ ಪಡೆದು ಸುಳ್ಳುಸುದ್ದಿಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ನ್ಯೂಸ್ಕ್ಲಿಕ್ (Newsclick) ಮೇಲೆ ದೆಹಲಿ ಪೊಲೀಸರು ನಡೆಸಿರುವ ದಾಳಿಯ ಕುರಿತು ತಮ್ಮ
ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಪ್ರಶ್ನೆಗೆ, ಸತ್ಯಕ್ಕೆ ಹೆದರಿದ ಭ್ರಷ್ಟ, ಹೇಡಿ ರಾಜನ ಈಡಿ, ಬೇಡಿಯ ತಲೆಬುಡವಿಲ್ಲದ ಆರೋಪಗಳ ಮುಚ್ಚುಮರೆಯ ಹೊಲಸು,
ನಾಚಿಕೆಗೆಟ್ಟ ಗೂಂಡಾಗಿರಿ (Actor Kishore question – central govt) ರಾಜಕೀಯ.. (ವಿಶೇಷಣಗಳು ಸಾಲುತ್ತಿಲ್ಲ).
ಚೀನಾ ಅತಿಕ್ರಮಣವನ್ನು ಮುಚ್ಚಿಹಾಕಿದಾಗ, ಚೀನಾ ಕಂಪೆನಿಗಳು (Company)ಸಾವಿರಾರು ಕೋಟಿ, ಗೆಳೆಯ ಅದಾನಿಗೆ ಕಾನೂನು ಬಾಹಿರವಾಗಿಯೂ ಕೊಡುತ್ತಲೇ ಇರುವಾಗ,
ಲೆಕ್ಕಪುಸ್ತಕವಿಲ್ಲದ ಪಿಎಮ್ ಕೇರ್ಸ್ ಗೆ , ಗೋದೀ ಚಾನೆಲ್ಲುಗಳಿಗೆ, ಐಪಿಎಲ್ ಗೆ (IPL) ಕಾನೂನು ಪ್ರಕಾರವೇ ಕೊಟ್ಟಾಗಲೆಲ್ಲ ಕಾಣದ ದೇಶದ್ರೋಹ, ಅದೇ ಚೀನೀ ಕಂಪನಿಗಳು ಹಣ
ಕೊಟ್ಟದ್ದಕ್ಕೆ ಪ್ರಾಮಾಣಿಕವಾಗಿ ಜನಪರವಾಗಿ ಕೆಲಸ ಮಾಡುವ ಪತ್ರಕರ್ತರ ಕೆಲಸದಲ್ಲಿ ಕಂಡುಬಿಟ್ಟಿತಲ್ಲ.
ಹಾಗಾದರೆ ವಿವೊ, ಶಾಒಮಿ ಫೋನು ಬಳಸುವ ನಾವು ನೀವೆಲ್ಲರೂ ಇವರ ಪ್ರಕಾರ ದೇಶದ್ರೋಹಿಗಳೇ? ಚೀನಾದ ಜೊತೆ ಸಾವಿರಾರು ಕೋಟಿ ವ್ಯಾಪಾರ ನಡೆಸುತ್ತಿರುವ ಭಾರತ ಸರ್ಕಾರ??
ಇವರ ತಲೆಬುಡವಿಲ್ಲದ ಆರೋಪಗಳಿಗೆ ಆಧಾರವೇನು? ಆ ಕಂಪನಿಗಳನ್ನು ಮುಚ್ಚಿಸುತ್ತಾರೆಯೇ? ಸುಮ್ಮನೇ ಏನು ಭಾರತದ ಪತ್ರಿಕಾ ಸ್ವಾತಂತ್ರ್ಯ ಜಗತ್ತಿನಲ್ಲಿ 161ನೇ ಸ್ಥಾನಕ್ಕೆ ಹೋಗಿಲ್ಲ.
ಹೀಗೇ ಬಾಯಿಮುಚ್ಚಿಸುವುದು ಮುಂದುವರೆದರೆ, ಪ್ರಾಮಾಣಿಕ ಪತ್ರಕರ್ತರನ್ನು , ಸಂಜೀವ್ ಭಟ್ (Sanjeev Bhat), ಶ್ರೀಕುಮಾರರಂಥ ಪ್ರಾಮಾಣಿಕ ಪೋಲೀಸರನ್ನು, ಅಧಿಕಾರದಲ್ಲಿರುವವರನ್ನು
ಪ್ರಶ್ನಿಸುವ ವಿರೋಧಪಕ್ಷದ ಜನಪ್ರತಿನಿಧಿಗಳನ್ನು ಒಟ್ಟಿನಲ್ಲಿ ದೇಶದ ಜನಪರ ಪ್ರಾಮಾಣಿಕರೆಲ್ಲರನ್ನೂ ಫೋಟೋದಲ್ಲಿ, ಜೈಲಿನಲ್ಲಿ (Jail) ಇಲ್ಲಾ ಸಿನಿಮಾದಲ್ಲಿ ಮಾತ್ರ ನೋಡಬೇಕಷ್ಟೆ. ನಮಗಾಗಿ
ಹೋರಾಡಿದ ಜನ ಜೈಲಿಗೆ ಹೋಗುವಾಗ ಬಾಯಿಮುಚ್ಚಿ ಕುಳಿತ ನಾವು ಯೋಚಿಸಬೇಡವೇ? ನಮ್ಮ ಮುಂದಿನ ಪೀಳಿಗೆಯ ಗತಿಯೇನೆಂದು?? ನಮ್ಮ ಮಕ್ಕಳು ಭ್ರಷ್ಟರಾಗಬೇಕು ಇಲ್ಲಾ ಜೈಲು
ಸೇರಬೇಕು ಅಲ್ಲವೇ?? ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿ: NTPCಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಆರಂಭಿಕ ವೇತನ 40,000..!