ದೇಶದ ಪ್ರತಿಷ್ಠಿತ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ಲಿಮಿಟೆಡ್ (Job Vacancy in NTPC 2023) ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಇಂಜಿನಿಯರಿಂಗ್
ಎಕ್ಸಿಕ್ಯೂಟಿವ್ ಟ್ರೈನಿ ಪೋಸ್ಟ್ಗಳ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಹಾಗೂ ಆಸಕ್ತಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದೆ. ಹುದ್ದೆಗಳ ವಿವರ, ವಿದ್ಯಾರ್ಹತೆ,
ವೇತನ, ಅರ್ಜಿ ಶುಲ್ಕ ಸೇರಿದಂತೆ ಸಂಪೂರ್ಣ (Job Vacancy in NTPC 2023) ವಿವರ ಇಲ್ಲಿದೆ.
ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ಲಿಮಿಟೆಡ್ 495 ಇಂಜಿನಿಯರಿಂಗ್ ಎಕ್ಸಿಕ್ಯೂಟಿವ್ ಟ್ರೈನಿ (Engineer Executive Trainee) ಹುದ್ದೆಗಳಿಗೆ ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್
ಇಂಜಿನಿಯರಿಂಗ್ ಪರೀಕ್ಷೆ ಬರೆದು ಅರ್ಹತೆ ಪಡೆದವರು ಮಾತ್ರ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ
ಸಿವಿಲ್ : 30
ಇಲೆಕ್ಟ್ರಿಕಲ್ : 120
ಇಲೆಕ್ಟ್ರಾನಿಕ್ಸ್ : 80
ಮೈನಿಂಗ್ : 65
ಮೆಕ್ಯಾನಿಕಲ್ : 200
ಒಟ್ಟು ಹುದ್ದೆಗಳು : 495
ಶೈಕ್ಷಣಿಕ ಅರ್ಹತೆಗಳು
ಇಲೆಕ್ಟ್ರಿಕಲ್, ಮೆಕ್ಯಾನಿಕಲ್ (Mechanical), ಇಲೆಕ್ಟ್ರಾನಿಕ್ಸ್, ಇನ್ಸ್ಟ್ರುಮೆಂಟೇಶನ್, ಸಿವಿಲ್ ಮತ್ತು ಮೈನಿಂಗ್ (Mining) ವಿಷಯದಲ್ಲಿ ಪದವಿ ಜೊತೆಗೆ ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್
ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
ಆಯ್ಕೆ ವಿಧಾನ : ಗೇಟ್-2023 ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ, ಆಯ್ಕೆ ಮಾಡಲಾಗುತ್ತದೆ.
ವೇತನ ಶ್ರೇಣಿ : Rs.40,000 – 1,40,000 ರೂ.ಗಳು
ಪ್ರಮುಖ ದಿನಾಂಕಗಳು :
ಅಪ್ಲಿಕೇಶನ್ ಸಲ್ಲಿಕೆಗೆ ಪ್ರಾರಂಭ ದಿನಾಂಕ : 6-10-2023
ಆನ್ಲೈನ್ ಅಪ್ಲಿಕೇಶನ್ ಸಲ್ಲಿಕೆಗೆ ಕೊನೆ ದಿನಾಂಕ: 20-10-2023
ವಯೋಮಿತಿ : ಗರಿಷ್ಠ 27 ವರ್ಷ ಮೀರಿರಬಾರದು. OBC ಅಭ್ಯರ್ಥಿಗಳಿಗೆ 3 ವರ್ಷ, SC / ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ಲಿಮಿಟೆಡ್ ಅಧಿಕೃತ ವೆಬ್ಸೈಟ್ ವಿಳಾಸ : https://www.ntpc.co.in/
ಅರ್ಜಿ ಸಲ್ಲಿಕೆ ವೆಬ್ಸೈಟ್ ವಿಳಾಸ : careers.ntpc.co.in
ಇದನ್ನು ಓದಿ: NTPCಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಆರಂಭಿಕ ವೇತನ 40,000..!