ಕಿರುತೆರೆ ನಟಿ ಚೇತನ ರಾಜ್ ಸಾವು ; ವೈದ್ಯರ ನಿರ್ಲಕ್ಷ್ಯವೇ ಮಗಳ ಸಾವಿಗೆ ಕಾರಣ ಎಂದ ಪೋಷಕರು!

ಬೆಂಗಳೂರು : 21 ವರ್ಷದ ಕನ್ನಡ ನಟಿರೊಬ್ಬರು ನಿನ್ನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊಬ್ಬು(Fat) ತೆಗೆಸಲು ಶಸ್ತ್ರಚಿಕಿತ್ಸೆಗೆ ಹೋಗಿ ಸಾವನ್ನಪ್ಪಿರುವ ಘಟನೆ ಬೆಳಕಿದೆ ಬಂದಿದೆ.

ಕನ್ನಡದ ಜನಪ್ರಿಯ ಕಿರುತೆರೆ ನಟಿ(Actress) ಚೇತನಾ ರಾಜ್(Chethana Raj) ಶಸ್ತ್ರಚಿಕಿತ್ಸೆಯ ನಂತರ ಸಾವನ್ನಪ್ಪಿರುವುದಾಗಿ ಕುಟುಂಬದವರು ಆರೋಪಿಸಿದ್ದಾರೆ. ಚೇತನ ರಾಜ್ ಅವರ ಪೋಷಕರು ನೀಡಿದ ದೂರಿನ ಮೇರೆಗೆ ರಾಜಾಜಿನಗರದ(Rajajinagar) ಡಾ.ಶೆಟ್ಟಿ ಕಾಸ್ಮೆಟಿಕ್ ಕ್ಲಿನಿಕ್(Dr. Shetty’s Cosmetic Clinic) ವೈದ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಚೇತನಾ ರಾಜ್ ಅವರು ಶಸ್ತ್ರಚಿಕಿತ್ಸೆಗಾಗಿ ಮೇ 16 ಸೋಮವಾರದಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಶಸ್ತ್ರಚಿಕಿತ್ಸೆಯ ಬಗ್ಗೆ ಆಕೆ ಪೋಷಕರಿಗೆ ತಿಳಿಸಿರಲಿಲ್ಲ ಎಂಬುದು ಪೋಷಕರ ಹೇಳಿಕೆ ನಂತರವೇ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ, ಆಕೆಯ ಶ್ವಾಸಕೋಶವು ನೀರಿನಿಂದ ತುಂಬಿತ್ತು ಎಂದು ವರದಿಯಾಗಿದೆ. ಸೋಮವಾರ ಹೃದಯಾಘಾತದಿಂದ ಆಕೆ ಸಾವನ್ನಪ್ಪಿದ್ದಾಳೆ. ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಪ್ರಮುಖ ಕಾರಣ ಎಂದು ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಶಸ್ತ್ರಚಿಕಿತ್ಸೆಗೆ ತಮ್ಮ ಒಪ್ಪಿಗೆ ಪಡೆಯಲು ಆಸ್ಪತ್ರೆ ವಿಫಲವಾಗಿದೆ ಮತ್ತು ಸರಿಯಾದ ಸೌಲಭ್ಯಗಳಿಲ್ಲದ ಐಸಿಯುನಲ್ಲಿ ಕಾರ್ಯವಿಧಾನವನ್ನು ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಯಾವುದೇ ಮುನ್ನೆಚ್ಚರಿಕೆ ಇಲ್ಲದೆ, ಅವರು ಈ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಕೊಬ್ಬನ್ನು ತೆಗೆದುಹಾಕುವ ನಿಜವಾದ ಅಗತ್ಯವಿದ್ದಲ್ಲಿ ಮಾತ್ರ ವೈದ್ಯರು ಶಸ್ತ್ರಚಿಕಿತ್ಸೆಯನ್ನು ಸೂಚಿಸಬೇಕು. ಶಸ್ತ್ರಚಿಕಿತ್ಸೆಗೆ ಒಳಪಡುವ ಮುನ್ನ ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿದ್ದು ಆಕೆಯ ಸ್ನೇಹಿತೆ ಎಂದು ನಟಿಯ ತಂದೆ ವರದರಾಜು ಹೇಳಿದ್ದಾರೆ. ವರದಿಗಳ ಪ್ರಕಾರ, ವೈದ್ಯರು 45 ನಿಮಿಷಗಳ ಕಾಲ ಸಿಪಿಆರ್ ಮೂಲಕ ಅವಳನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸಿದ್ದಾರೆ, ಆದರೆ ಸಾಧ್ಯವಾಗಿಲ್ಲ. ಆಕೆ ಸ್ಪಂದಿಸುತ್ತಿಲ್ಲ ಎಂದು ಅರಿತ ಕೂಡಲೇ ವೈದ್ಯರು ಆಕೆಯನ್ನು ಸಮೀಪದ ಕಾಡೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಸೂಕ್ತ ನಿಯಮಗಳನ್ನು ಪಾಲಿಸದೇ ರೋಗಿಯನ್ನು ಕರೆತಂದಿರುವ ಬಗ್ಗೆ ಕಾಡೆ ಆಸ್ಪತ್ರೆ ಆರೋಪಿಸಿದೆ ಎಂದು ವರದಿಯಲ್ಲಿ ತಿಳಿದುಬಂದಿದೆ. ನಟಿ ಚೇತನಾ ರಾಜ್ ಅವರನ್ನು ಕಳೆದುಕೊಂಡು ಆಕೆಯ ಪೋಷಕರು, ಸ್ನೇಹಿತರು ಹಾಗೂ ಕುಟುಂಬದವರು ದುಃಖತಪ್ತರಾಗಿದ್ದಾರೆ.

Exit mobile version