“ನಿಮಗೆ ಧೈರ್ಯವಿದ್ದರೆ…” ; ಬಂಡಾಯ ಶಾಸಕರಿಗೆ ಬಹಿರಂಗ ಸವಾಲಾಕಿದ ಆದಿತ್ಯ ಠಾಕ್ರೆ

aditya

ಮುಂಬೈ : ‘ಮಹಾ’ರಾಷ್ಟ್ರ(Maharashtra) ಸರ್ಕಾರದಲ್ಲಿ ರಾಜಕೀಯ(Political) ಬಿಕ್ಕಟ್ಟು ತೀವ್ರ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಸಚಿವ ಏಕನಾಥ್ ಶಿಂಧೆ(Eknath Shinde) ನೇತೃತ್ವದ ಶಿವಸೇನೆ(Shivasena) ಬಂಡಾಯ ಶಾಸಕರು(Sena MLA) ಪಕ್ಷ ತೊರೆದು ಚುನಾವಣೆ ಎದುರಿಸಿ ಎಂದು ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಸವಾಲಾಕಿದ್ದಾರೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ(Uddhav Thackrey) ವಿರುದ್ಧದ ದಂಗೆಯು ಸುಮಾರು ಒಂದು ವಾರಕ್ಕೂ ಹೆಚ್ಚು ಮುಂದುವರಿದಂತೆ ಬಿಜೆಪಿ(BJP) ಆಡಳಿತದ ಅಸ್ಸಾಂನಲ್ಲಿ ಬೀಡುಬಿಟ್ಟಿರುವ ಶಾಸಕರಿಗೆ ಬಹಿರಂಗ ಸವಾಲನ್ನು ನೀಡಿದ್ದಾರೆ. “ಪಕ್ಷವನ್ನು ತ್ಯಜಿಸಿ ಹೋರಾಡುವಂತೆ” ಹೇಳಿದ್ದಾರೆ.

“ನಿಮಗೆ ಧೈರ್ಯವಿದ್ದರೆ ಶಿವಸೇನೆ ಬಿಟ್ಟು ಪಕ್ಷಾಂತರ ಮಾಡಿ ಹೋರಾಡಿ. ನಾವು ಮಾಡಿದ್ದು ತಪ್ಪು, ಉದ್ಧವ್ ಠಾಕ್ರೆ ನಾಯಕತ್ವ ತಪ್ಪು ಮತ್ತು ನಾವೆಲ್ಲರೂ ತಪ್ಪು ಎಂದು ನೀವು ಭಾವಿಸಿದರೆ, ರಾಜೀನಾಮೆ(Resign) ನೀಡಿ ಚುನಾವಣೆ ಎದುರಿಸಿ. ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ ಎಂದು ಆದಿತ್ಯ ಹೇಳಿದರು. ಈ ಹಿಂದೆ ಅವರು ಈ ಬಿಕ್ಕಟ್ಟನ್ನು ಸತ್ಯ ಮತ್ತು ಸುಳ್ಳಿನ ನಡುವಿನ ಯುದ್ಧ ಎಂದು ಕರೆದಿದ್ದರು. ಶಿವಸೇನೆಯ ಬಂಡಾಯ ಶಾಸಕರು ಮಾಡಿದ ದ್ರೋಹವನ್ನು ನಾವು ಮರೆಯುವುದಿಲ್ಲ, ನಾವು (ಶಿವಸೇನೆ) ಗೆಲ್ಲುವುದು ಖಚಿತ ಎಂದು ಠಾಕ್ರೆ ನೆರದಿದ್ದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಶಿಂಧೆ ಅವರು ಸುಮಾರು 40 ಸೇನಾ ಶಾಸಕರ ಬೆಂಬಲವನ್ನು ಪ್ರತಿಪಾದಿಸುವುದರೊಂದಿಗೆ ‘ಮಹಾ ವಿಕಾಸ್ ಅಘಾಡಿ’ ಸರ್ಕಾರವು ಪತನದ ಅಂಚಿನಲ್ಲಿದೆ. ಬಂಡಾಯ ಬಣವು ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಜೊತೆಗಿನ ಸೇನಾ ಮೈತ್ರಿಯನ್ನು “ಅಸ್ವಾಭಾವಿಕ” ಎಂದು ಬಣ್ಣಿಸಿದೆ ಮತ್ತು ಬಾಳಾಸಾಹೇಬ್ ಠಾಕ್ರೆ ಸ್ಥಾಪಿಸಿದ ಪಕ್ಷವು ಬಿಜೆಪಿಯೊಂದಿಗೆ ತನ್ನ ಮೈತ್ರಿಯನ್ನು ಪುನಃಸ್ಥಾಪಿಸಲು ಒತ್ತಾಯಿಸುವುದಲ್ಲದೇ ಅನೇಕ ಬಾರಿ ಬಾಳಾಸಾಹೇಬ್ ಹೆಸರು ಬಳಸಿಕೊಂಡಿದೆ.

ಶಿವಸೇನೆ ಇದುವರೆಗೆ ಶಿಂಧೆ ಸೇರಿದಂತೆ 16 ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದು, ಅವರಿಗೆ ನೋಟಿಸ್ ಕೂಡ ಜಾರಿ ಮಾಡಲಾಗಿದೆ.

Exit mobile version