ಹದಿಹರೆಯದವರು ತಮ್ಮ ಲೈಂಗಿಕ ಪ್ರಚೋದನೆಗಳನ್ನು ನಿಯಂತ್ರಿಸಬೇಕು : ಕಲ್ಕತ್ತಾ ಹೈಕೋರ್ಟ್

Calcutta: ಹದಿಹರೆಯದ ಹುಡುಗಿಯರು ತಮ್ಮ ಲೈಂಗಿಕ ಪ್ರಚೋದನೆಗಳನ್ನು ನಿಯಂತ್ರಿಸಬೇಕು ಮತ್ತು ಹದಿಹರೆಯದ ಹುಡುಗರು ಚಿಕ್ಕ ಹುಡುಗಿಯರನ್ನು ಗೌರವಿಸಬೇಕು ಎಂದು ಕಲ್ಕತ್ತಾ ಹೈಕೋರ್ಟ್ (Calcutta High Court) ಹೇಳಿದೆ.

ಪ್ರೇಮ ಸಂಬಂಧ ಹೊಂದಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಶಿಕ್ಷೆಗೆ ಗುರಿಯಾಗಿದ್ದ ಯುವಕನನ್ನು ನ್ಯಾಯಾಲಯ ಖುಲಾಸೆಗೊಳಿಸಿದ ಸಂದರ್ಭದಲ್ಲಿ ನ್ಯಾಯಾಲಯದಿಂದ ಈ ಹೇಳಿಕೆ ಹೊರಬಿದ್ದಿದೆ. ನ್ಯಾಯಮೂರ್ತಿಗಳಾದ ಚಿತ್ತ ರಂಜನ್ ದಾಶ್ (Chitta Ranjan Das) ಮತ್ತು ಪಾರ್ಥ ಸಾರಥಿ ಸೇನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು, “ಹದಿಹರೆಯದ ಹುಡುಗಿಯರು ತಮ್ಮ ಲೈಂಗಿಕ ಪ್ರಚೋದನೆಗಳನ್ನು ನಿಯಂತ್ರಿಸಬೇಕು.

ಹದಿಹರೆಯದ ಹುಡುಗರು ಯುವತಿಯರು, ಮಹಿಳೆಯರು ಮತ್ತು ಅವರ ಘನತೆಯನ್ನು ಗೌರವಿಸಬೇಕು ಎಂದು ಹೇಳಿದೆ. ಇದೇ ವೇಳೆ ದೈಹಿಕ ಸಮಗ್ರತೆ, ಘನತೆ ಮತ್ತು ಸ್ವ-ಮೌಲ್ಯವನ್ನು ರಕ್ಷಿಸುವುದು, ಅವರ ಲೈಂಗಿಕ ಪ್ರಚೋದನೆಗಳನ್ನು ನಿಯಂತ್ರಿಸುವುದು ಮತ್ತು ದೈಹಿಕ ಸ್ವಾಯತ್ತತೆ ಮತ್ತು ಗೌಪ್ಯತೆಯ ಹಕ್ಕನ್ನು ರಕ್ಷಿಸುವುದು ಸೇರಿದಂತೆ ಮಹಿಳೆಯರು ಮತ್ತು ಹದಿಹರೆಯದವರಿಗೆ ನಿರ್ದಿಷ್ಟ ಕರ್ತವ್ಯಗಳನ್ನು ನ್ಯಾಯಾಲಯವು ವಿವರಿಸಿದೆ.

ಇನ್ನೊಂದೆಡೆ ಪುರುಷ ಹದಿಹರೆಯದವರಿಗೆ, ಒಬ್ಬ ಯುವತಿಯ ಅಥವಾ ಮಹಿಳೆಯ ಮೇಲಿನ ಕರ್ತವ್ಯಗಳನ್ನು ಗೌರವಿಸುವುದು ಪುರುಷ ಹದಿಹರೆಯದ ಕರ್ತವ್ಯವಾಗಿದೆ. ಅವನು ಮಹಿಳೆಯನ್ನು ಗೌರವಿಸಲು ತನ್ನ ಮನಸ್ಸನ್ನು ತರಬೇತಿ ಮಾಡಬೇಕು, ಅವಳ ಸ್ವಾಭಿಮಾನ, ಅವಳ ಘನತೆ, ಖಾಸಗಿತನ ಮತ್ತು ಅವಳ ದೇಹದ ಸ್ವಾಯತ್ತತೆಯ ಹಕ್ಕು ಸದಾ ಗೌರವಿಸಬೇಕೆಂದು ಕೋಲ್ಕತ್ತಾ ಹೈಕೋರ್ಟ್ ತಿಳಿಹೇಳಿದೆ.

ನ್ಯಾಯಮೂರ್ತಿಗಳಾದ ಚಿತ್ತ ರಂಜನ್ ದಾಶ್ ಮತ್ತು ಪಾರ್ಥ ಸಾರಥಿ ಸೇನ್ (Partha sarathi Sen)ಅವರನ್ನೊಳಗೊಂಡ ದ್ವಿಸದಸ್ಯ ಪೀಠ ನೀಡಿರುವ ಈ ತೀರ್ಪು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಹದಿಹರೆಯದವರು ನಿಭಾಯಿಸಬೇಕಾದ ಕರ್ತವ್ಯಗಳನ್ನು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿ, ಸಲಹೆಗಳನ್ನೊಳಗೊಂಡ ವಿಭಿನ್ನವಾದ ತೀರ್ಪನ್ನು ನೀಡಿದೆ. ಇತ್ತೀಚಿನ ದಿನಗಳಲ್ಲಿ ಹದಿಹರೆಯದವರ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಈ ಕುರಿತು ಗಂಭೀರ ಚಿಂತನೆ ನಡೆಯಬೇಕಿದೆ. ಮಕ್ಕಳಿಗೆ ಹದಿಹರೆಯ ವಯಸ್ಸಿನಲ್ಲೇ ಲೈಂಗಿಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಪಾಲಕರು ಪ್ರಮುಖ ಪಾತ್ರ ವಹಿಸಬೇಕಿದೆ.

Exit mobile version