‘ಅಗ್ನಿವೀರ’ ಹುದ್ದೆಗೆ ನಿರೀಕ್ಷೆಗೂ ಮೀರಿ ಬಂದ ಅರ್ಜಿಗಳು

AGNIVEER

ಭಾರತೀಯ ವಾಯುಪಡೆಯಲ್ಲಿ(Indian Air Force) ‘ಅಗ್ನಿಪಥ್’ ಯೋಜನೆಯಡಿ(Agnipath Yojana) ‘ಅಗ್ನಿವೀರ’(Agniveer) ಹುದ್ದೆಗಳಿಗೆ ಮೊದಲ ಬ್ಯಾಚ್‍ನ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಆಹ್ವಾನಿಸಲಾದ ಮೂರು ದಿನಗಳಲ್ಲೇ ನಿರೀಕ್ಷೆಗೂ ಮೀರಿ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ವಾಯುಪಡೆಯ ಅಧಿಕೃತ ವೆಬ್‍ಸೈಟ್(Website) ಮೂಲಕ ಜೂನ್ 25 ರಿಂದ ಅಗ್ನಿವೀರ ಹುದ್ದೆಗೆ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿತ್ತು.

ಕೇವಲ ಮೂರು ದಿನಗಳಲ್ಲೇ 56,900 ಅರ್ಜಿಗಳು ಸಲ್ಲಿಕೆಯಾಗಿದ್ದು, ನಿರೀಕ್ಷೆಗೂ ಮೀರಿ ಅರ್ಜಿಗಳು ಬಂದಿವೆ ಎನ್ನಲಾಗಿದೆ. ಒಟ್ಟು 3000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 5ರಂದು ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಇನ್ನು ಲಿಖಿತ ಪರೀಕ್ಷೆ ಮತ್ತು ದೈಹಿಕ ಸಾಮಥ್ರ್ಯ ಪರೀಕ್ಷೆಯ ನಂತರ ಡಿಸೆಂಬರ್‍ನಲ್ಲಿ ಅಗ್ನಿವೀರರ ಮೊದಲ ಬ್ಯಾಚ್‍ಗೆ ತರಬೇತಿ ನೀಡಲಾಗುತ್ತದೆ. ಆರು ತಿಂಗಳ ತರಬೇತಿ ನಂತರ 2023ರ ಜೂನ್ ವೇಳೆಗೆ ಅಗ್ನಿವೀರರ ಮೊದಲ ಬ್ಯಾಚ್ ಭಾರತೀಯ ವಾಯುಪಡೆಯಲ್ಲಿ ಕಾರ್ಯನಿರ್ವಹಿಸಲಿದೆ.


ಇನ್ನು ಕೇಂದ್ರ ಸರ್ಕಾರ(Central Government) ಇತ್ತೀಚೆಗೆ ‘ಅಗ್ನಿಪಥ್’ ಯೋಜನೆಯನ್ನು ಘೋಷಣೆ ಮಾಡಿದಾಗ ಉತ್ತರ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ದೇಶದ ಅನೇಕ ಕಡೆ ಪ್ರತಿಭಟನೆ ಹೆಸರಿನಲ್ಲಿ ಹಿಂಸಾಚಾರವನ್ನು ನಡೆಸಲಾಗಿತ್ತು. ವಿಪಕ್ಷಗಳು ಈ ಯೋಜನೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದವು. ಆದರೆ ಸೇನೆಯ ಮೂರು ಪಡೆಗಳ ಮುಖ್ಯಸ್ಥರು ಈ ಯೋಜನೆಗೆ ಬೆಂಬಲ ನೀಡಿದ್ದರು. ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಈ ಯೋಜನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.

Exit mobile version