ಗೋಧಿ ಬೆಳೆಯುವ ನಮ್ಮ ಮಣ್ಣೇಕೆ ಹೀಗಿದೆ? ಇದಕ್ಕೆ ಉತ್ತರ ಇಲ್ಲಿದೆ!

wheat

ಗೋಧಿ(Wheat) ಬೆಳೆವ ನಮ್ಮ ಮಣ್ಣೇಕೆ(Soil) ಹೀಗಿದೆ? ಹರಿಯಾಣ(Haryana) ರಾಜ್ಯದ ಕೈಥಾಲ್(Kaithal) ಜಿಲ್ಲೆಯ, ಗೆಯೊಂಗ್(Gaiyong) ಗ್ರಾಮದಲ್ಲಿ ಅಧಿಕ ಪ್ರಮಾಣದಲ್ಲಿ RSC(Residual Sodium Corbonate) ಅಂಶವಿರುವ ಮಣ್ಣಲ್ಲಿ ಗೋಧಿ ಬೆಳೆಯುವ ಹೊಲವೊಂದರ ಚಿತ್ರ. ಸಮೃದ್ಧ ನೀರಿರುವ ಕಾರಣ ರಾಸಾಯನಿಕ ಗೊಬ್ಬರಗಳನ್ನು ಮಿತಿಮೀರಿ ಬಳಸಿದ ಕಾರಣ ಉತ್ಪಾದಕ ಮಣ್ಣು ಹಾಳಾಗುತ್ತಿದೆ.

ಮಣ್ಣಿನ ಬಣ್ಣ ಬಿಳಿಯಾಗುತ್ತಿದೆ. ಯಾವುದೇ ಬೆಳೆಯುತ್ಪಾದಕ ಮಣ್ಣು ಸಹಜವಾಗಿ ಲವಣೀಯ – ಕ್ಷಾರೀಯ – ಆಮ್ಲೀಯ ಮಣ್ಣಾಗಿರುವುದಿಲ್ಲ. ನಮ್ಮಲ್ಲಿನ ಮಣ್ಣುಗಳನ್ನು ನಾವು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಹಾಗೂ ವಿವೇಚನೆಯಿಲ್ಲದೆ ಅಧಿಕ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಸುರಿಯುತ್ತಿದ್ದರೆ, ಎಂತಹ ಮಣ್ಣೂ ಸಹ ತನ್ನ ತಾಜಾತನ ಕಳೆದುಕೊಳ್ಳುತ್ತದೆ ಹಾಗೂ ದೋಷಪೀಡಿತವಾಗಿರುತ್ತದೆ.

ಮಿತಿಮೀರಿ ನೀರನ್ನು ಹಾಗೂ ರಸಗೊಬ್ಬರಗಳನ್ನು ಬಳಸುವುದು, ಆಳವಾಗಿ ಬೇರೂರುವ ಬೆಳೆಗಳನ್ನು ತಾಯಿ ಸಾಲುಗಳೊಂದಿಗೆ ಅಂದರೆ ಮುಖ್ಯ ಬೆಳೆಯೊಡನೆ ಬೆಳಸದೇ ಇರುವುದೇ ನಮ್ಮ ಮಣ್ಣು ಈ ದುಸ್ಥಿತಿಗೆ ಬರಲು ಮೂಲಕಾರಣ.

Exit mobile version