ಬೆಂಗಳೂರು ನಗರವನ್ನು 5 ಜಿಲ್ಲೆಗಳಾಗಿ ವಿಂಗಡಿಸಿ ಅಧ್ಯಕ್ಷರ ನೇಮಕ ಮಾಡಿದ ಎಐಸಿಸಿ

New Delhi : ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ (Congress) ತಯಾರಿ ಶುರುಮಾಡಿದ್ದು, ಬೆಂಗಳೂರು (Bengaluru) ನಗರವನ್ನು ಪಕ್ಷ ಸಂಘಟನೆಗಾಗಿ 5 ಜಿಲ್ಲೆಗಳನ್ನಾಗಿ ವಿಂಗಡಣೆ ಮಾಡಿದೆ. ಅಷ್ಟೇ ಅಲ್ಲದೇ ಈ 5 ಜಿಲ್ಲೆಗಳಿಗೆ ಅಧ್ಯಕ್ಷರನ್ನ ಸಹ ನೇಮಿಸಿಸಿ ಎಐಸಿಸಿ ಆದೇಶ ಹೊರಡಿಸಿದೆ. ಹಾಗಾದ್ರೆ ವಿಂಗಡಣೆಗೊಂಡ ಈ 5 ಜಿಲ್ಲೆಗಳಿಗೆ ಯಾರ್ಯಾರು ಅಧ್ಯಕ್ಷರು? ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ಈಗಾಗಲೇ ಲೋಕಸಭಾ ಚುನಾವಣೆಗೆ ಕರ್ನಾಟಕದ 28 ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆಗೆ ವೀಕ್ಷಕರನ್ನು ನೇಮಕ ಮಾಡಿದೆ. ಸಚಿವರನ್ನು ವೀಕ್ಷಕರನ್ನಾಗಿ ನೇಮಕ ಮಾಡಿದ್ದು, ಪ್ರತಿ ಕ್ಷೇತ್ರದಲ್ಲೂ 2 ಅಥವಾ 3 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ಜವಾಬ್ದಾರಿ ನೀಡಲಾಗಿದೆ. ಈ 5 ಜಿಲ್ಲೆಗಳಿಗೆ ಹೊಸ ಅಧ್ಯಕ್ಷರನ್ನ ನೇಮಿಸಿದೆ.

5 ಜಿಲ್ಲೆಗಳಾಗಿ ವಿಂಗಡಣೆ:

ಬೆಂಗಳೂರು ನಗರ,
ಬೆಂಗಳೂರು ಪಶ್ಚಿಮ
ಬೆಂಗಳೂರು ಪೂರ್ವ, ,
ಬೆಂಗಳೂರು ಉತ್ತರ ಮತ್ತು
ಬೆಂಗಳೂರು ದಕ್ಷಿಣ

5 ಜಿಲ್ಲೆಗಳಿಗೆ ಅಧ್ಯಕ್ಷರ ನೇಮಕ

ಬೆಂಗಳೂರು ನಗರ – ಕೆವಿ ಗೌತಮ್
ಬೆಂಗಳೂರು ದಕ್ಷಿಣ – ಓ ಮಂಜುನಾಥ್
ಬೆಂಗಳೂರು ಪಶ್ಚಿಮ- ಹನುಮಂತ ರಾಯಪ್ಪ
ಬೆಂಗಳೂರು ಪೂರ್ವ – ಉದಯ್ ಕುಮಾರ್
ಬೆಂಗಳೂರು ಉತ್ತರ- ಅಬ್ದುಲ್ ವಾಜಿದ್

ಬೆಂಗಳೂರು ನಗರವನ್ನು ಈ ರೀತಿಯಾಗಿ ಐದು ಜಿಲ್ಲೆಗಳನ್ನಾಗಿ ವಿಭಜಿಸಿಕೊಂಡಿದೆ. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗಾಗಿ ಎಐಸಿಸಿ (AICC) ಈ ರೀತಿ ವಿಂಗಡಿಸಿರುವುದಲ್ಲದೆ ಒಂದೊಂದು ಜಿಲ್ಲೆಗೆ ಒಬೊಬ್ಬ ಅಧ್ಯಕ್ಷರನ್ನ ಸಹ ನೇಮಿಸಲಾಗಿದೆ.

ಭವ್ಯಶ್ರೀ ಆರ್.ಜೆ

Exit mobile version