‘ನಮಗೆ 3 ಪತ್ನಿಯರಿದ್ದಾರೆ, ಪ್ರತಿಯೊಬ್ಬರಿಗೂ ಗೌರವವಿದೆ, ಆದರೆ ಹಿಂದೂಗಳಲ್ಲಿ…’ AIMIM ನಾಯಕನ ವಿವಾದಾತ್ಮಕ ಹೇಳಿಕೆ!

bjp

Lucknow : ನಮಗೆ (ಮುಸ್ಲಿಮರಿಗೆ) ಮೂರು ಮದುವೆಗಳಿವೆ ಎಂದು ಜನರು ಹೇಳುತ್ತಾರೆ. ಆದರೆ ನಾವು ಮೂರು ಮದುವೆ ಮಾಡಿಕೊಂಡರೂ ಸಮಾಜದಲ್ಲಿ ಮೂವರು ಪತ್ನಿಯರಿಗೂ ಗೌರವ ಕೊಡುತ್ತೇವೆ.

ಆದರೆ ನೀವು (ಹಿಂದೂಗಳು) ಒಬ್ಬರನ್ನು ಮದುವೆಯಾಗಿ ಮೂವರು ಪ್ರೇಯಸಿಯರನ್ನು ಹೊಂದಿದ್ದೀರಿ ಎಂದು  ಉತ್ತರ ಪ್ರದೇಶದ (Uttar Pradesh) ಎಐಎಂಐಎಂ(AIMIM) ರಾಜ್ಯಾಧ್ಯಕ್ಷ ಶೌಕತ್ ಅಲಿ ವಿವಾದಾತ್ಮಕ (Controversial) ಹೇಳಿಕೆ ನೀಡಿದ್ದಾರೆ.

ಉತ್ತರಪ್ರದೇಶದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶೌಕತ್ ಅಲಿ, ನಮಗೆ ಮೂರು (AIMIM Leader Controversial Statement) ಮದುವೆಗಳಿವೆ ಎಂದು ಜನರು ಹೇಳುತ್ತಾರೆ.

ಆದರೆ ನಾವು ಮೂರು ಮದುವೆ ಮಾಡಿಕೊಂಡರೂ ಸಮಾಜದಲ್ಲಿ ಮೂವರು ಪತ್ನಿಯರಿಗೂ ಗೌರವ ಕೊಡುತ್ತೇವೆ, ಆದರೆ ನೀವು (ಹಿಂದೂಗಳು) ಒಬ್ಬರನ್ನು ಮದುವೆಯಾಗಿ ಮೂವರು ಪ್ರೇಯಸಿಯರನ್ನು ಹೊಂದಿದ್ದೀರಿ, ನೀವು ನಿಮ್ಮ ಒರ್ವ ಹೆಂಡತಿ ಅಥವಾ ಪ್ರೇಯಸಿಯನ್ನು ಗೌರವಿಸುವುದಿಲ್ಲ.

https://youtu.be/EyLZ5K3m7zo ಸ್ಟೋನ್ ಕ್ರಷರ್ ಅನ್ನು ಈ ಕೂಡಲೇ ರದ್ದುಗೊಳಿಸಿ

ಆದರೆ ನಾವು ಮೂರು ಮದುವೆಗಳನ್ನು ಮಾಡಿಕೊಂಡರು, ಎಲ್ಲರನ್ನೂ  ಗೌರವದಿಂದ ಇಡುತ್ತೇವೆ ಮತ್ತು ನಮ್ಮ ಎಲ್ಲ ಮಕ್ಕಳ ಹೆಸರೂ ಪಡಿತರ ಚೀಟಿಯಲ್ಲಿರುತ್ತದೆ ಎಂದು ಹಿಂದೂ ವಿವಾಹದ (Hindu Marriage) ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಶೌಕತ್ ಅಲಿಯ ಈ ಹೇಳಿಕೆಗೆ  ಸಾಮಾಜಿಕ ಜಾಲತಾಣದಲ್ಲಿ ತೀವ್ರ (AIMIM Leader Controversial Statement) ವಿರೋಧ ವ್ಯಕ್ತವಾಗಿದೆ.

ಇದೇ ವೇಳೆ ಶೌಕತ್ ಅಲಿ ಹಿಜಾಬ್ ನಿಷೇಧ (Hijab Ban) ವಿಷಯದ ಬಗ್ಗೆ ಸುಪ್ರೀಂಕೋರ್ಟ್ನ (Supremecourt) ತೀರ್ಪಿನ (Verdict) ಬಗ್ಗೆ ಮಾತನಾಡಿ, “ದೇಶದಲ್ಲಿ ಯಾರು ಏನು ಧರಿಸುತ್ತಾರೆ ಎಂಬುದನ್ನು ಹಿಂದುತ್ವ ನಿರ್ಧರಿಸುವುದಿಲ್ಲ, ಅದನ್ನು ಸಂವಿಧಾನವು ನಿರ್ಧರಿಸುತ್ತದೆ. 

ದೇಶದಲ್ಲಿ ಯಾರು ಏನು ಧರಿಸುತ್ತಾರೆ ಎಂಬುದನ್ನು ಸಂವಿಧಾನ ನಿರ್ಧರಿಸುತ್ತದೆಯೇ ಹೊರತು ಹಿಂದುತ್ವವಲ್ಲ, ಆದರೆ ಬಿಜೆಪಿಯು ಇಂತಹ ವಿಷಯಗಳನ್ನು ಮುಂದಿಟ್ಟುಕೊಂಡು ದೇಶವನ್ನು ಒಡೆಯುವ ಕೆಲಸ ಮಾಡುತ್ತಿದೆ. ಬಿಜೆಪಿಯವರು(BJP) ಮುಸ್ಲಿಮರನ್ನು ಟಾರ್ಗೆಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ : https://vijayatimes.com/one-detained-under-anti-conversion-law/

ಹೀಗಾಗಿಯೇ ಮದರಸಾ, ಲಿಂಚಿಂಗ್, ವಕ್ಫ್ ಮತ್ತು ಹಿಜಾಬ್ನಂತಹ ಸಮಸ್ಯೆಗಳು ನಡೆಯುತ್ತಿವೆ. ಬಿಜೆಪಿ ದುರ್ಬಲವಾದಾಗ ಅವರು ಮುಸ್ಲಿಂ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುತ್ತಾರೆ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
Exit mobile version