ಪ್ರವಾದಿಯನ್ನು ಅವಹೇಳನ ಮಾಡಿದ ನೂಪುರ್ ಶರ್ಮಾರನ್ನು ಗಲ್ಲಿಗೇರಿಸಿ : ಎಐಎಂಐಎಂ!

nupur sharma

ಪ್ರವಾದಿ(Prophet) ಮೊಹಮ್ಮದ್ ಪೈಗಂಬರ್ ಅವರಿಗೆ ಅವಹೇಳನ ಮಾಡಿರುವ ಆರೋಪ ಎದುರಿಸುತ್ತಿರುವ ನೂಪುರ್ ಶರ್ಮಾರನ್ನು(Nupur Sharma) ಗಲ್ಲಿಗೇರಿಸಿ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಸಂಸದ ಇಮ್ತಿಯಾಜ್ ಜಲೀಲ್ ಹೇಳಿದ್ದಾರೆ.

ನೂಪುರ್ ಶರ್ಮಾರನ್ನು ಹೀಗೆ ಬಿಟ್ಟರೆ ನಮ್ಮ ಪ್ರತಿಭಟನೆ ಮುಂದುವರೆಯುತ್ತದೆ. ಯಾವುದೇ ಧರ್ಮ ಮತ್ತು ಪಂಥವನ್ನು ಟೀಕಿಸುವ ಇಂತವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಪ್ರವಾದಿಯನ್ನು ಅವಹೇಳನ ಮಾಡುವ ಮೂಲಕ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಲಾಗಿದೆ. ಸರ್ಕಾರ ನೂಪುರ್ ಶರ್ಮಾ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಇನ್ನು ಎಐಎಂಐಎಂ(AIMIM) ಪಕ್ಷದ ಮುಖಂಡ ಅಸಾದುದ್ದೀನ್ ಒವೈಸಿ(Asaduddin Owaisi) ಕೋಮು ಪ್ರಚೋದಿಸುವ ಪೋಸ್ಟ್‍ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅವರ ವಿರುದ್ದ ಎಫ್‍ಐಆರ್(FIR) ದಾಖಲಾಗಿದೆ. ಪೊಲೀಸರು ಅವರ ವಿಚಾರಣೆ ನಡೆಸುತ್ತಿದ್ಧಾರೆ. ಇನ್ನೊಂದೆಡೆ ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ದೇಶಾದ್ಯಂತ ಶುಕ್ರವಾರದ ಪ್ರಾರ್ಥನೆಯ ನಂತರ ಕಲ್ಲುತೂರಾಟ ಮತ್ತು ಹಿಂಸಾಚಾರ(Voilence) ನಡೆದಿದೆ.

ಉತ್ತರಪ್ರದೇಶ(Uttarpradesh) ಮತ್ತು ಪಶ್ಚಿಮ ಬಂಗಾಳದ(West Bengal) ಅನೇಕ ಜಿಲ್ಲೆಗಳಲ್ಲಿ ಹಿಂಸಾಚಾರ ನಡೆದಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಅಪಾರ ಹಾನಿಯಾಗಿದೆ. ಈ ನಡುವೆ ಇದೊಂದು ಅಂತರಾಷ್ಟ್ರೀಯ ಷಡ್ಯಂತ್ರವಾಗಿದ್ದು ದೇಶದಲ್ಲಿರುವ ಕೆಲ ಕೋಮುವಾದಿ ಶಕ್ತಿಗಳು ಇದಕ್ಕೆ ಕುಮ್ಮಕ್ಕು ನೀಡುತ್ತಿವೆ. ಭಾರತದಲ್ಲಿ ಕೋಮುಗಲಭೆ ನಡೆಸಲು ವ್ಯವಸ್ಥಿತ ಸಂಚು ನಡೆದಿದೆ. ಇದಕ್ಕೆ ಅನೇಕ ಇಸ್ಲಾಮಿಕ ದೇಶಗಳು ಹಣಕಾಸಿಕ ನೆರವನ್ನು ನೀಡುತ್ತಿವೆ ಎಂದು ಗುಪ್ತಚರ ಇಲಾಖೆ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದೆ.

ಈ ಹಿನ್ನಲೆಯಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರ(Central Government) ರಾಜ್ಯಗಳಿಗೆ ಸೂಚನೆ ನೀಡಿದೆ. ಅಗತ್ಯವಿದ್ದರೆ ಅರೆಸೇನಾ ಪಡೆಯನ್ನು ಬಳಸಿಕೊಳ್ಳಲು ಸೂಚಿಸಿದೆ.

Exit mobile version