ಏರ್ ಇಂಡಿಯಾವನ್ನು ಅಧಿಕೃತವಾಗಿ ಟಾಟಾಗೆ ಹಸ್ತಾಂತರಿಸಿದ ಸರ್ಕಾರ

air-india

ಏರ್ ಇಂಡಿಯಾ ಕಂಪನಿಯನ್ನು ಸರ್ಕಾರ ಅಧಿಕೃತವಾಗಿ ಟಾಟಾ ಸಂಸ್ಥೆಗೆ ವರ್ಗಾವಣೆ ಮಾಡಿದೆ. ಈ ಬಗ್ಗೆ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಏರ್ ಇಂಡಿಯಾ ಕಂಪನಿಯನ್ನು ಇಂದು ಅಧಿಕೃತವಾಗಿ ಸರ್ಕಾರ ಟಾಟಾ ಸಮೂಹಕ್ಕೆ ಹಸ್ತಾಂತರ ಮಾಡಿದೆ.

ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರ್ ಅವರು ಪ್ರಧಾನಿ ಮೋದಿ ಅವರನ್ನು ಈ ಸಂಬಂಧ ಇಂದು ಭೇಟಿ ಮಾಡಿದ್ದಾರೆ. ಈ ಭೇಟಿಯ ಫೋಟೋವನ್ನು ಪ್ರಧಾನಿ ಕಾರ್ಯಾಲಯ ಟ್ವಿಟರ್ ಮೂಲಕ ಹಂಚಿಕೊಂಡಿದೆ.

ಅಕ್ಟೋಬರ್ 8ರಂದು ಏರ್ ಇಂಡಿಯಾ ಕಂಪನಿಯನ್ನು ಟಾಟಾ ಸಮೂಹಕ್ಕೆ ಹಸ್ತಾಂತರಿಸುವ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಅಕ್ಟೋಬರ್ 11ರಂದು ಕೇಂದ್ರ ಸರಕಾರ ಈ ಕಂಪನಿಯನ್ನು 18 ಸಾವಿರ ಕೋಟಿಗೆ ಮಾರಾಟ ಮಾಡಿದ ಪತ್ರವನ್ನು ಟಾಟಾ ಸಮೂಹಕ್ಕೆ ನೀಡಿದೆ. ಅಕ್ಟೋಬರ್ 25ರಂದು ಕೇಂದ್ರ ಸರ್ಕಾರ ಮತ್ತು ಟಾಟಾ ಸನ್ಸ್ ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದವು.

ಇನ್ನು ಏರ್‌ ಇಂಡಿಯಾದ ಸೇವೆ ಸುಧಾರಣೆಗೆ, ಕಂಪನಿಯ ನೌಕರರಿಗೆ ಹಲವು ಸಂದೇಶ ರವಾನೆ ಮಾಡಿರುವ ಆಡಳಿತ ಮಂಡಳಿ, ಚೆನ್ನಾಗಿರುವ ಉಡುಪು ಧರಿಸಬೇಕು ಎಂದು ಸೂಚನೆ ನೀಡಿದೆ. ಅಲ್ಲದೇ ಪ್ರಯಾಣಿಕರನ್ನು ಅತಿಥಿಗಳ ಹಾಗೆ ಸತ್ಕಾರ ಮಾಡಬೇಕು, ವಿಮಾನದಲ್ಲಿ ರತನ್‌ ಟಾಟಾ ಅವರು ನೀಡಿರುವ ಆಡಿಯೋ ಸಂದೇಶವನ್ನು ಪ್ಲೇ ಮಾಡಬೇಕು ಎನ್ನುವ ಸೂಚನೆಗಳು ಸಿಬ್ಬಂದಿಗಳಿಗೆ ಸಿಕ್ಕಿದೆ.

Exit mobile version