ನಿಜವಾದ ಅಂಬೇಡ್ಕರ್ ವಾದಿಗಳು ಮತ್ತು ಸಮಾನತವಾದಿಗಳು ಎಂದಿಗೂ ಕಾಂಗ್ರೆಸ್ಗೆ ಬೆಂಬಲ ನೀಡಲಾರರು : ನಟ ಚೇತನ್

ಬಿಜೆಪಿಯಂತೆಯೇ (BJP) ಕಾಂಗ್ರೆಸ್ ಕೂಡ ನಮ್ಮ ಸಂವಿಧಾನದ ಪೀಠಿಕೆಗೆ ವಿರುದ್ಧವಾಗಿದೆ. ಕಾಂಗ್ರೆಸ್ ಸಮಾನತೆ/ನ್ಯಾಯ/ಸಮಾಜವಾದ/ಜಾತ್ಯತೀತತೆಯ ವಿರುದ್ಧವಾಗಿದೆ. ನಿಜವಾದ ಅಂಬೇಡ್ಕರ್ (Ambedkar) ವಾದಿಗಳು ಮತ್ತು ಸಮಾನತವಾದಿಗಳು ಎಂದಿಗೂ ಕಾಂಗ್ರೆಸ್ಗೆ ಬೆಂಬಲ ನೀಡಲಾರರು ಎಂದು ನಟ ಚೇತನ್ (Chetan) ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್ (Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ದಲಿತರು ಮತ್ತು ಹಿಂದುಳಿದವರು ‘ಸಂವಿಧಾನ ವಿರೋಧಿಗಳಿಗೆ’ ಅಧಿಕಾರ ನೀಡುವ ಮೂಲಕ ತಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಬಿಜೆಪಿಯಂತೆಯೇ ಕಾಂಗ್ರೆಸ್ ಕೂಡ ನಮ್ಮ ಸಂವಿಧಾನದ ಪೀಠಿಕೆಗೆ ವಿರುದ್ಧವಾಗಿದೆ. ಕಾಂಗ್ರೆಸ್ (Congress) ಸಮಾನತೆ/ನ್ಯಾಯ/ಸಮಾಜವಾದ/ಜಾತ್ಯತೀತತೆಯ ವಿರುದ್ಧವಾಗಿದೆ. ನಿಜವಾದ ಅಂಬೇಡ್ಕರ್ ವಾದಿಗಳು ಮತ್ತು ಸಮಾನತವಾದಿಗಳು ಎಂದಿಗೂ ಕಾಂಗ್ರೆಸ್ಗೆ ಬೆಂಬಲ ನೀಡಲಾರರು ಎಂದಿದ್ದಾರೆ.

ಇನ್ನೊಂದು ಬರಹದಲ್ಲಿ, ಕಳೆದ 3 ತಿಂಗಳಿಂದ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ಕಾಂಗ್ರೆಸ್ ಪಕ್ಷವನ್ನು ವಿರೋಧಿಸುವವರ ವಿರುದ್ಧ ಅಸಂಸದೀಯ (ಶಾಸನಸಭೆಗೆ ಯೋಗ್ಯವಲ್ಲದಂತಹ), ಅಗ್ರೆಸಿವ್ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಉದ್ರೇಕಕಾರಿ/ಪ್ರಚೋದನಕಾರಿ ಭಾಷಣ ಮಾಡುವವರನ್ನು ‘ಒದ್ದು’ ಜೈಲಿಗೆ ಹಾಕಲಾಗುವುದು ಎಂದು ಈಗ ಅವರು ಹೇಳಿದ್ದಾರೆ. ಇಂತಹ ಹಿಂಸಾತ್ಮಕ ಭಾಷೆಯು ಅಗತ್ಯವಾಗಿ ತಡೆಯುವುದಕ್ಕಿಂತ ಹೆಚ್ಚಾಗಿ ಅಧಿಕಾರದ ದುರಹಂಕಾರದಂತೆ ಕಾಣುತ್ತದೆ ಎಂದು ಟೀಕಿಸಿದ್ದಾರೆ.

ಇದಕ್ಕೂ ಮುನ್ನ ಜಾತಿಗಣತಿಯ ಬಗ್ಗೆಯೂ ಟೀಕಾಪ್ರಹಾರ ನಡೆಸಿದ್ದ ನಟ ಚೇತನ್ (Chetan), ಮುಂಬರುವ ಮಧ್ಯಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಭರವಸೆ ನೀಡಿದ್ದಾರೆ. ಕರ್ನಾಟಕದಲ್ಲಿ ಈಗಾಗಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೂ ಜಾತಿ ಗಣತಿಯನ್ನು ಏಕೆ ಬಿಡುಗಡೆ ಮಾಡಿಲ್ಲ? ಎರಡು ತಿಂಗಳ ಹಿಂದೆ ಜಾತಿ ಗಣತಿ ಬಿಡುಗಡೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು ಆದರೆ ಈಗ ಮೌನವಾಗಿದ್ದಾರೆ — 2015 ರಿಂದ 2023 ರವರೆಗೆ, ಕರ್ನಾಟಕದಲ್ಲಿ (Karnataka) ಜಾತಿ ಗಣತಿಯು ಸುಮಾರು ಒಂದು ದಶಕದಿಂದಲೂ ನಿಷ್ಕ್ರಿಯ ವಸ್ಥೆಯಲ್ಲಿದೆ. ಇದು ಕಾಂಗ್ರೆಸ್ ನ ಸುಳ್ಳು ಭರವಸೆಗಳೇ? ಎಂದು ಟೀಕಿಸಿದ್ದರು.

Exit mobile version