Landon: ಅಮೆರಿಕದ (America) ಎಕ್ಸ್ಎಲ್ ಬುಲ್ಲಿ ನಾಯಿಗಳನ್ನು ಬ್ರಿಟನ್ನಲ್ಲಿ ಈ ವರ್ಷಾಂತ್ಯದೊಳಗೆ ನಿಷೇಧಿಸಲಾಗುವುದು ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ (Rishi Sunak) ಘೋಷಿಸಿದ್ದಾರೆ. ಇಂಗ್ಲೆಂಡ್ನ ಸ್ಟಾಫರ್ಡ್ಶೈರ್ನಲ್ಲಿ ಈ ನಾಯಿಯ ಮಾರಣಾಂತಿಕ ದಾಳಿಯಿಂದ ವ್ಯಕ್ತಿಯೋರ್ವ ಮೃತಪಟ್ಟ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್ @RishiSunak, “ಅಮೆರಿಕನ್ XL ಬುಲ್ಲಿ ನಾಯಿಯ ತಳಿಯು ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ನಮ್ಮ ಮಕ್ಕಳಿಗೆ ಸಾಕಷ್ಟು ಅಪಾಯಕಾರಿಯಾಗಿದೆ. ಈ ಬುಲ್ಲಿ ನಾಯಿ ದಾಳಿ ನಡೆಸುವ ಕೆಲವು ಭಯಾನಕ ವಿಡಿಯೋಗಳನ್ನು ನಾವು ನೋಡಿದ್ದೇವೆ. ನಿನ್ನೆ ನಾವು ಮತ್ತೊಂದು ಶಂಕಿತ XL ಬುಲ್ಲಿಡಾಗ್ (Bulli Dog) ದಾಳಿಯನ್ನು ನೋಡಿದ್ದೇವೆ.
ಈ ನಾಯಿ ವ್ಯಕ್ತಿಯೊಬ್ಬರ ದುರಂತ ಸಾವಿಗೆ ಕಾರಣವಾಗಿದ್ದು ದುರದೃಷ್ಟಕರ. ಈ ನಾಯಿಗಳನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುವ ಜವಾಬ್ದಾರಿಯನ್ನು ಮಾಲೀಕರು ಹೊಂದಿದ್ದರೂ, ಈ ದಾಳಿಗಳನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಾರ್ವಜನಿಕರನ್ನು ರಕ್ಷಿಸಲು ನಾವು ತುರ್ತಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಜನರಿಗೆ ಭರವಸೆ ನೀಡಲು ನಾನು ಬಯಸುತ್ತೇನೆ’ ಎಂದು ಹೇಳಿದ್ದಾರೆ.

ಅಮೇರಿಕನ್ ಕೆನಲ್ ಕ್ಲಬ್ನಿಂದ (Kenal Club) ಸಾಕು ತಳಿಯಾಗಿ ಗುರುತಿಸಲ್ಪಟ್ಟಿದ್ದರೂ, ಅಮೇರಿಕನ್ ಬುಲ್ಡಾಗ್ ಅನ್ನು ಯುಕೆ ರಾಯಲ್ ಕೆನಲ್ ಕ್ಲಬ್ ಅಧಿಕೃತವಾಗಿ ಸಾಕು ತಳಿಯಾಗಿ ಗುರುತಿಸಲಾಗಿಲ್ಲ.ಇದು ಪ್ರಸ್ತುತ ಕಾನೂನಿನಲ್ಲಿ ವ್ಯಾಖ್ಯಾನಿಸಲಾದ ತಳಿಯಲ್ಲ. ಆದ್ದರಿಂದ, ಈ ಪ್ರಮುಖ ಮೊದಲ ಹಂತವು ವೇಗವಾಗಿ ಆಗಬೇಕು. ನಾವು ನಂತರ ಅಪಾಯಕಾರಿ ನಾಯಿಗಳ ಕಾಯಿದೆಯಡಿಯಲ್ಲಿ ಈ ತಳಿಯನ್ನು ನಿಷೇಧಿಸುತ್ತೇವೆ ಮತ್ತು ವರ್ಷಾಂತ್ಯದೊಳಗೆ ಹೊಸ ಕಾನೂನುಗಳು ಜಾರಿಗೆ ಬರುತ್ತವೆ ಎಂದು ಬ್ರಿಟನ್ (Britan) ಪ್ರಧಾನಿ ರಿಷಿ ಸುನಕ್ ಅವರು ಹೇಳಿದರು.
ಬ್ರಿಟನ್ನಲ್ಲಿ ಈಗಾಗಲೇ ಪಿಟ್ ಬುಲ್ ಟೆರಿಯರ್ #PitBullTerior, ಜಪಾನೀಸ್ ಟೋಸಾ, ಡೊಗೊ ಅರ್ಜೆಂಟಿನೋ ಮತ್ತು ಫಿಲಾ ಬ್ರೆಸಿಲಿರೊ ನಾಯಿ ತಳಿಗಳನ್ನು ನಿಷೇಧಿಸಲಾಗಿದೆ. ಇನ್ನು ಬ್ರಿಟನ್ನ ಬರ್ಮಿಂಗ್ಹ್ಯಾಮ್ನಲ್ಲಿ ಅಮೇರಿಕನ್ XL ಬುಲ್ಲಿ ನಾಯಿಯು 11 ವರ್ಷದ ಬಾಲಕಿ ಸೇರಿದಂತೆ ಹಲವಾರು ಜನರ ಮೇಲೆ ದಾಳಿ ಮಾಡಿರುವ ವಿಡಿಯೋಗಳು ವೈರಲ್ ಆದ ನಂತರ ಅಮೇರಿಕನ್ XL ಬುಲ್ಲಿ ನಾಯಿ ತಳಿಯನ್ನು ನಿಷೇಧಿಸಬೇಕೆಂಬ ಕೂಗು ಬ್ರಿಟನ್ನಲ್ಲಿ ಕೇಳಿ ಬಂದಿದೆ.