ಅಮೇರಿಕಾದ ಇತಿಹಾಸದಲ್ಲೇ ಅತೀ ದೊಡ್ಡ ಭ್ರಷ್ಟ ಚುನಾವಣೆ!

ವಾಷಿಂಗ್ಟನ್, ಡಿ. 14: ನವೆಂಬರ್ 3ರಂದು ನಡೆದ ಅಮೇರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸೋಲು ಅನುಭವಿಸಬೇಕಾಯಿತು. ಇದಕ್ಕೆ ಕಾರಣ ಪ್ರಬಲ ವ್ಯಕ್ತಿಯಾದ ಜೊ ಬೈಡನ್. ತದನಂತರದ ಬೆಳವಣಿಗೆಗಳು ಒಂದು ರೀತಿಯಲ್ಲಿ ಸೇಡು ತಿರಿಸಿಕೊಳ್ಳುವ ಸಲುವಾಗಿ ಡೊನಾಲ್ಡ್ ಟ್ರಂಪ್ ಆರೋಪಗಳನ್ನು ಮಾಡುತ್ತಾ ಬರುತ್ತಿದ್ದಾರೆ.

ಈಗ ಅದೇ ಮಾದರಿಯಲ್ಲಿ ಇನ್ನೊಂದು ಅರೋಪ ಮಾಡಿದ್ದಾರೆ ಅದು ಚುನಾವಣೆಯಲ್ಲಿ ಭ್ರಷ್ಟಾಚಾರ ಆಗಿದೆ ಎಂದು. ಹಲವು ರಾಜ್ಯಗಳಲ್ಲಿ ಎರಡೂ ಪಕ್ಷಗಳಿಗೆ ಮತದಾರರು ಹೆಚ್ಚಿನ ಒಲವು ತೋರಿದ್ದರೂ ಕೂಡ ಆದರೆ ಟೆಕ್ಸಾಸ್ ರಾಜ್ಯದಲ್ಲಿನ ಫಲಿತಾಂಶದ ಬಗ್ಗೆ ಸುಪ್ರೀಂ ಕೋರ್ಟ್‍‍ನಲ್ಲಿ ಅರ್ಜಿಯನ್ನು ತಿರಸ್ಕರಿಸಿದರೂ ಸಹ ನನಗೆ ಕಾನೂನಾತ್ಮಕ ಹೋರಾಟ ನಡೆಸುವ ಇನ್ನಷ್ಟು ಮಾರ್ಗಗಳಿವೆ ಎಂದು ಡೊನಾಲ್ಡ್ ಟ್ರಂಪ್ ವಾದವಾಗಿದೆ. ಮತ್ತು ಅಮೇರಿಕದ ಇತಿಹಾಸದಲ್ಲೆ ಅತಿ ದೊಡ್ಡ ಭ್ರಷ್ಟ ಚುನಾವಣೆ ಆಗಿರುವುದು ವಿಪರ್ಯಾಸವೆಂದು ಡೊನಾಲ್ಡ್ ಟ್ರಂಪ್ ಟ್ವೀಟ್ ಮೂಲಕ ತನ್ನ ಆಕ್ರೋಶವನ್ನು ಹೊರಹಾಕಿದ್ದಾರೆ.

Exit mobile version