ಕರಾವಳಿಗೆ ಅಮಿತ್‌ ಶಾ ಆಗಮನ; ಬಿಜೆಪಿ ಕಾರ್ಯಕರ್ತರಲ್ಲಿ ಹುರುಪು ತುಂಬುವ ನಿರೀಕ್ಷೆ

Mangalore: ಬಿಜೆಪಿ ಮತಗಳ ಭದ್ರಕೋಟೆಯಾದ ದಕ್ಷಿಣ ಕನ್ನಡಕ್ಕೆ (Dakshina Kannada) ಕೇಂದ್ರ ಗೃಹ ಸಚಿವರಾದ ಅಮಿತ್​ ಶಾ (Amit Shah) ಇಂದು(ಫೆ.11) ಕ್ಕೆ ಭೇಟಿ ನೀಡಲಿದ್ದಾರೆ. ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವಾಗಲೇ ಅಮಿತ್‌ ಶಾ ಮಂಗಳೂರು (Amit Shah's mangalore visit) ಭೇಟಿ ಬೆಜೆಪಿ ಕಾರ್ಯಕರ್ತರಲ್ಲಿ ನಾಯಕರಲ್ಲಿ ಹೊಸ ಸಂಚಲನವನ್ನೇ ಮೂಡಿಸಿದೆ.
 ಅಡಿಕೆ ವಹಿವಾಟು ನಡೆಸುವಂತಹ ಪುತ್ತೂರಿನ ಕ್ಯಾಂಪ್ಕೋ(Campco) ಸಂಸ್ಥೆಯ ಸುವರ್ಣ ಮಹೋತ್ಸವದ ಆಚರಣೆಗೆ ಆಗಮಿಸಲಿರುವ ಅಮಿತ್‌ ಶಾ ಕೋರ್‌ ಕಮಿಟಿ ಸಭೆ ಕೂಡ ನಡೆಸಲಿದ್ದಾರೆ.ಈ ಸಭೆಯಲ್ಲಿ 118 ಜನರಿಗೆ ಅವಕಾಶ ಕಲ್ಪಿಸಲಾಗಿದೆ.
 ಬಿಜೆಪಿಯ ಭದ್ರ ನೆಲೆಯಾಗಿರುವ ಕರಾವಳಿಯಲ್ಲಿ(Karavali) ಇತ್ತೀಚೆಗೆ ನಡೆದಿರುವ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು(Praveen Nettaru) ಹತ್ಯೆ ಪ್ರಕರಣ ,ಪಕ್ಷದ ಅಭ್ಯರ್ಥಿಗಳ ಮಾನದಂಡ,ಕರಾವಳಿಯಲ್ಲಿ ನಡೆದ ರಾಜಕೀಯ ಬೆಳವಣಿಗೆಗೆಗಳು ಹಾಗೂ ಇನ್ನಿತರ ಅನೇಕ ಸಂಗತಿಗಳು (Amit Shah's mangalore visit) ಈ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚೆಯಾಗಬಹುದು ಎಂದು ಪಕ್ಷದ ಮೂಲಗಳು ಅಂದಾಜಿಸಿದೆ.

ಅಮಿತ್‌ ಶಾ ಭೇಟಿಯ ವಿವರ:

ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆ.11 ಶನಿವಾರ ಮಧ್ಯಾಹ್ನ  ಕೇರಳದ(Kerala) ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಇಲ್ಲಿಂದ ಬಿಎಸ್​ಎಫ್(BSF) ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ 2:50ಕ್ಕೆ  ಪುತ್ತೂರಿನ ಈಶ್ವರ ಮಂಗಲಕ್ಕೆ ಆಗಮಿಸಲಿದ್ದಾರೆ. 

ಬಳಿಕ ಹೆಲಿಕಾಪ್ಟರ್ ಮೂಲಕ ಪುತ್ತೂರಿಗೆ ಬಂದಿಳಿಯಲಿದ್ದಾರೆ. ಪುತ್ತೂರಿನ ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿರುವ ಅಮಿತ್ ಶಾ ನಂತರ ಸಂಜೆ ಆರು ಗಂಟೆಯ ವೇಳೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಲಿದ್ದಾರೆ.

 https://youtu.be/XctuE8Anu9c

ಮಂಗಳೂರು ಏರ್​ಪೋರ್ಟ್ ಸಮೀಪ ಸಂಜೆ ಆರು ಹದಿನೈದರಿಂದ ರಾತ್ರಿ ಎಂಟು ಗಂಟೆಯವರೆಗೂ ಬಿಜೆಪಿ ಪ್ರಮುಖರೊಂದಿಗೆ ಅಮಿತ್ ಶಾ ಆಂತರಿಕ ಸಭೆ ನಡೆಸಲಿದ್ದಾರೆ. ಈ ಸಭೆಯು ಮುಕ್ತಾಯಗೊಂಡ ಬಳಿಕ ಅಮಿತ್ ಶಾ ದೆಹಲಿಗೆ ಮರಳಲಿದ್ದಾರೆ.

Exit mobile version