Riyadh: ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ (Amitabh met Messi Ronaldo) ಅವರು ಗುರುವಾರ ರಿಯಾದ್‌ನಲ್ಲಿ ಫುಟ್‌ಬಾಲ್ ಜಗತ್ತಿನ ಸೂಪರ್ ಸ್ಟಾರ್‌ಗಳಾದ ಅರ್ಜೆಂಟಿನಾದ
ಲಿಯೋನೆಲ್ ಮೆಸ್ಸಿ ಮತ್ತು ಪೋರ್ಚುಗಲ್‌ನ ಕ್ರಿಸ್ಟಿಯಾನೋ ರೊನಾಲ್ಡೊ (Amitabh met Messi Ronaldo) ಅವರನ್ನು ಭೇಟಿಯಾಗಿದ್ದಾರೆ.

ರಿಯಾದ್‌ನ ಕಿಂಗ್ ಫಹದ್ (King Fahd) ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಿಎಲ್‌ಜಿ (PLG) ಮತ್ತು ಸೌದಿ ಆಲ್-ಸ್ಟಾರ್ XI (Saudi All-starXI) ನಡುವಿನ ಪುಟ್ಬಾಲ್ ಪಂದ್ಯದಲ್ಲಿ ಈ ಇಬ್ಬರೂ ಆಟಗಾರರು ಭಾಗವಹಿಸಿದ್ದರು.
ಈ ವೇಳೆ ಸೌದಿಯ ಅಲ್‌ನಾಸರ್ ಅವರ ಜೊತೆ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಆಟಗಾರರಿಗೆ ಶುಭಕೋರಿದ ಅಮಿತಾಭ್ ಬಚ್ಚನ್‌ಅವರು
ಈ ವೇಳೆ ಸೂಪರ್ ಸ್ಟಾರ್‌ಗಳಾದ ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೋ ರೊನಾಲ್ಡೊ ಜೊತೆ ಮಾತನಾಡಿದ್ದಾರೆ.
ಇದನ್ನು ಓದಿ : ಇನ್ಮುಂದೆ ರೈಲ್ವೆ ಟಿಕೆಟ್ ಅನ್ನು ಕನ್ನಡದಲ್ಲಿಯೇ ಬುಕ್ ಮಾಡಿಕೊಳ್ಳಬಹುದು
ಇಂದು ಬೆಳಿಗ್ಗೆ ತಮ್ಮ ವಿಶೇಷ ಸಂಜೆಯ ಕುರಿತು ಅಮಿತಾಭ್ ಟ್ವೀಟ್ ಮಾಡಿದ್ದಾರೆ. ಟ್ವಿಟರ್‌ನಲ್ಲಿ (Twitter) ಇದೇ ವಿಚಾರವನ್ನು ಹಂಚಿಕೊಂಡಿರುವ ಅಮಿತಾಭ್ ಬಚ್ಚನ್ ಅವರು
“‘ರಿಯಾದ್‌ನಲ್ಲಿ ಅದ್ಭುತ್ ಸಂಜೆ.. ಕ್ರಿಸ್ಟಿಯಾನೋ ರೊನಾಲ್ಡೊ, ಲಿಯೋನೆಲ್ ಮೆಸ್ಸಿ, ಎಂಬಾಪೆ, ನೇಮರ್ ಎಲ್ಲರೂ ಒಟ್ಟಿಗೆ ಆಡುತ್ತಿದ್ದಾರೆ ..
ಮತ್ತು ಆಟವನ್ನು ಉದ್ಘಾಟಿಸಲು ನಿಮ್ಮ ನಿಜವಾದ ಅತಿಥಿಗಳು ಪಿಎಲ್‌ಜಿ ವಿರುದ್ದ ರಿಯಾದ್ ಸೀಸನ್ಸ್ .. ಇನ್ಕ್ರೆಡಿಬಲ್ !!!” ಎಂದು ಬರೆದುಕೊಂಡು, ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇನ್ನು ಅಮಿತಾಭ್ ಬಚ್ಚನ್‌ಅವರು ಹಂಚಿಕೊಂಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ಆಗುತ್ತಿದ್ದು, “ನಿಮ್ಮ ಬಗ್ಗೆ ನಮಗೆಲ್ಲರಿಗೂ ಹೆಮ್ಮೆಯಿದೆ ಅಮಿತ್ ಜೀ. ನಿಮ್ಮ ನಮ್ರತೆ ಮತ್ತು ನಿಮ್ಮ ಘನತೆ ಕಲಿಯಬೇಕಾದದ್ದು.
ಅವರು ವಿಶ್ವದ ಅತ್ಯುತ್ತಮ ನಟನ ಕೈಕುಲುಕುವ ಅದೃಷ್ಟವಂತರು” ಎಂದು ಟ್ವೀಟರ್ ಬಳಕೆದಾರರೊಬ್ಬರು ಬರೆದಿದ್ದಾರೆ.
“ಅಮಿತಾಭ್‌ಜೀ.. ನೀವು ಜಗತ್ತಿನ ಶ್ರೇಷ್ಠ ಪುಟ್ಬಾಲ್ ಆಟಗಾರರನ್ನು ಭೇಟಿಯಾಗಿದ್ದೀರಿ.
ಅದೇ ರೀತಿ ಅವರು, ಜಗತ್ತಿನ ಶ್ರೇಷ್ಠ ನಟನನ್ನು ಭೇಟಿಯಾಗಿದ್ದಾರೆ. ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ನಟನನ್ನು ಪಡೆದಿರುವುದು ನಮ್ಮ ಹೆಮ್ಮೆ ನೀವು ಕೂಡಾ ಸದಾ ನಮ್ಮೆಲ್ಲರ ಸೂಪರ್‌ಸ್ಟಾರ್”ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.