1 ರೂ.ಗೆ ಇಡ್ಲಿ ಕೊಟ್ಟು ಜನರ ಹಸಿವು ನೀಗಿಸುವ ಅಮ್ಮನಿಗೆ, ಹೊಸ ಮನೆಯನ್ನು ಉಡುಗೊರೆಯಾಗಿ ಕೊಟ್ಟ ಆನಂದ್ ಮಹಿಂದ್ರಾ!

anand

ಕೈಗಾರಿಕೋದ್ಯಮಿದಲ್ಲಿ ತನ್ನದೇ ಆದ ಹೆಸರು ಸೃಷ್ಟಿಸಿಕೊಂಡಿರುವ ಆನಂದ್ ಮಹೀಂದ್ರಾ(Anand Mahindra) ಅವರು ತಮಿಳುನಾಡಿನಲ್ಲಿ(Tamilnadu) 1 ರೂ. ಇಡ್ಲಿ ಅಮ್ಮ ಎಂದೇ ಖ್ಯಾತರಾಗಿರುವ ಅಮ್ಮನಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಮನೆಯನ್ನು ಉಡುಗೊರೆಯಾಗಿ ನೀಡುವ ಭರವಸೆಯನ್ನು ಈಡೇರಿಸಿದ್ದರಿಂದ ಮತ್ತೆ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮಹೀಂದ್ರಾ ಅವರು 2021ರ ಏಪ್ರಿಲ್‌ನಲ್ಲಿ ಟ್ವೀಟ್(Tweet) ಅನ್ನು ಹಂಚಿಕೊಂಡಿದ್ದು, ಅಲ್ಲಿ ಅವರು ಇಡ್ಲಿ ಅಮ್ಮ ಶೀಘ್ರದಲ್ಲೇ ತನ್ನ ಸ್ವಂತ ಮನೆಯನ್ನು ಪಡೆಯಲಿದ್ದಾರೆ, ಜನರಿಗೆ ಅವರ ಪ್ರಸಿದ್ಧ ಬೇಯಿಸಿದ ಇಡ್ಲಿಯನ್ನು ಬಡಿಸಲು ಆ ಮನೆಯನ್ನೇ ಬಳಸಬಹುದು ಎಂದು ಹೇಳಿದ್ದರು. ಅದರಂತೆಯೇ ಭಾನುವಾರ ತಾಯಂದಿರ ದಿನದಂದು, ಮಹೀಂದ್ರಾ ಅವರು ಇಡ್ಲಿ ಅಮ್ಮ ತನ್ನ ಹೊಸ ಮನೆಗೆ ಪ್ರವೇಶಿಸುತ್ತಿರುವ ವೀಡಿಯೊವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.

“ವಿಶ್ವ ತಾಯಂದಿರ ದಿನದಂದು ಇಡ್ಲಿಯ ಅಮ್ಮನಿಗೆ ಮನೆಯನ್ನು ಉಡುಗೊರೆಯಾಗಿ ನೀಡಲು ಸಮಯಕ್ಕೆ ಸರಿಯಾಗಿ ಮನೆಯ ನಿರ್ಮಾಣವನ್ನು ಪೂರ್ಣಗೊಳಿಸಿದ್ದಕ್ಕಾಗಿ ನಮ್ಮ ತಂಡಕ್ಕೆ ಅಪಾರ ಕೃತಜ್ಞತೆಗಳು ತಿಳಿಸುತ್ತೇನೆ. ಆ ತಾಯಿಯ ಪೋಷಣೆ, ಕಾಳಜಿ ಮತ್ತು ನಿಸ್ವಾರ್ಥತೆ. ಅವರನ್ನು ಮತ್ತು ಅವರ ಕೆಲಸವನ್ನು ಬೆಂಬಲಿಸಲು ಸಾಧ್ಯವಾಗುವ ಒಂದು ಸವಲತ್ತು ಇದು. ನಿಮ್ಮೆಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು” ಎಂದು ಹೇಳುವ ಮೂಲಕ ಶುಭಾಷಯ ಕೋರಿದ್ದಾರೆ. ಕಮಲಾತಾಲ್ ಎಂದು ಕರೆಯಲ್ಪಡುವ ಇಡ್ಲಿ ಅಮ್ಮ ತಮಿಳುನಾಡಿನ ಪೆರು ಬಳಿಯ ವಡಿವೇಲಂಪಾಳ್ಯಂ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ.

ಸುಮಾರು 37 ವರ್ಷಗಳಿಂದ ಸಾಂಬಾರ್ ಮತ್ತು ಚಟ್ನಿಯೊಂದಿಗೆ ಇಡ್ಲಿಗಳನ್ನು ಕೇವಲ 1 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಆಕೆಯ ಕಥೆಯು 2019 ರಲ್ಲಿ ವೈರಲ್ ಆಗಿತ್ತು ಮತ್ತು ಆನಂದ್ ಮಹೀಂದ್ರಾ ಅವರು ಇದಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದ್ದರು. ಒಟ್ಟಾರೆ ಆನಂದ್ ಮಹಿಂದ್ರಾ ಅವರ ಈ ಕೆಲಸಕ್ಕೆ ನೆಟ್ಟಿಗರಿ ಫಿದಾ ಆಗಿದ್ದು, ಸಾಕಷ್ಟು ಮೆಚ್ಚುಗೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

Exit mobile version