ಖಾತೆ ಹಂಚಿಕೆಯಲ್ಲಿ ಅಸಮಧಾನ ಹಿನ್ನಲೆ ಆನಂದ್ ಸಿಂಗ್ ರಾಜೀನಾಮೆ ?

ಬೆಂಗಳೂರು, ಆ. 11: ಬಸವರಾಜ ಬೊಮ್ಮಾಯಿ ನೇತೃತ್ವದ ನೂತನ ಸಂಪುಟ ರಚನೆಯಾಗಿ 1  ವಾರ ಕಳೆಯುವ ಮುಂಚೆಯೇ ಖಾತೆ ಹಂಚಿಕೆಯ ಅಸಮಧಾನ ಸ್ಪೋಟ ಗೊಂಡಿದ್ದು, ಆನಂದ್ ಸಿಂಗ್ ರಾಜೀನಾಮೆಯತ್ತ ಮುಖಮಾಡಿದ್ದಾರೆ.

ಕಳೆದ ವಾರ ನೂತನ ಸಚಿವ ಸಂಪುಟ ರಚನೆಯಾಗಿ ಹಳೆಯ ಸಚಿವರೂ ಸೇರಿದಂತೆ ಹೊಸ ಶಾಸಕರಿಗೂ ಖಾತೆ ಹಂಚಿಕೆ ಮಾಡಲಾಗಿತ್ತು. ಆದರೆ ಕೆಲವು ನೂತನ ಸಚಿವರು ತಮಗೆ ವಹಿಸಿರುವ ನೂತನ ಖಾತೆಯ ಬಗ್ಗೆ ಬಹಿರಂಗವಾಗಿಯೇ ಅಸಮಧಾನ ಹೊರ ಹಾಕಿದ್ದಾರೆ. ಆದರೆ ವಿಜಯನಗರದ ಶಾಸಕ ಆನಂದ್ ಸಿಂಗ್ ಖಾತೆ ಹಂಚಿಕೆ ಅಸಮಧಾನ ಹಿನ್ನಲೆಯಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಹಂತಕ್ಕೆ ಹೋಗಿದ್ದಾರೆ. ಇದಲ್ಲದೇ ಅವರ ಕಾರ್ಯಲಯದ ಬೋರ್ಡ ಕೂಡ ತೆಗೆಸಿ ಸರ್ಕಾರಕ್ಕೆ ಪರೋಕ್ಷ ಎಚ್ಚರಿಕೆ ಕೂಡ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಈ ಖಾತೆಯ ನಿರ್ವಹಿಸುವ ಬದಲು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಶಾಸಕನಾಗಿಯೇ ಮುಂದುವರಿಯುವುದು ಉತ್ತಮ ಎಂದು ಆನಂದ್ ಸಿಂಗ್ ಬಹಿರಂಗವಾಗಿಯೇ ಹೇಳಿದ್ದರು. ನಾನು ಬಿಜೆಪಿ ಸರ್ಕಾರ ಬರುವುದಕ್ಕಾಗಿ ರಾಜೀನಾಮೆ ನೀಡಿ ಬಂದಿದ್ದೆ ಯಡಿಯೂರಪ್ಪ ಅವರ ಅವಧಿಯಲ್ಲೂ 2 ದಿನಗಳಲ್ಲಿ3 ಖಾತೆ ಬದಲಾಯಿಸಿದ್ದರು. ಆದರೂ ಕೂಡ ನನಗೆ ನಿರೀಕ್ಷಿತ ಖಾತೆ ಲಭಿಸಿರಲಿಲ್ಲ. ಈ ಬಾರಿ ಕೂಡ ನಾನು ಕೇಳಿದ ಖಾತೆ ದೊರೆಯಲಿಲ್ಲ. ನನ್ನಿಂದ ಪಕ್ಷ ಬಂದಿದೆ ಅಂತ ಅಲ್ಲ ಆದರೆ ನನ್ನಂತ ಹಲವಾರು ಜನರಿಂದ ಪಕ್ಷ ಅಧಿಕಾರಕ್ಕೆ ಬಂದಿದೆ ಆದರೆ ನಾನು ಕೇಳಿದ ಖಾತೆ ಕೊಡದೆ ನನಗೆ ಅವಮಾನ ಮಾಡಿದಂತಾಗಿದೆ ನನಗೆ  ನಾನು ಕೇಳಿದ ಖಾತೆ ಕೊಡದಿದ್ದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.

Exit mobile version