ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಪೋನ್ ವಿತರಣೆ

ರಾಯಬಾಗ, ನ. 28:‌ ಕೊರೋನಾ ಸಂಕಷ್ಟ ಕಾಲದಲ್ಲಿ ‘ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕ್ಷೇತ್ರಗಳಲ್ಲಿ ಜವಾಬ್ಧಾರಿಯುತ ಕೆಲಸಗಳನ್ನು ಮಾಡುವುದರ ಮೂಲಕ ಜನ ಮನ ಗೆದ್ದಿದ್ದರು. ತಮ್ಮ ಕೇಂದ್ರದ ಕಾರ್ಯ ಚಟುವಟಿಕೆಗಳ ಮಾಹಿತಿಯನ್ನು ಪ್ರತಿ ದಿನ ಕಳುಹಿಸಲು ಸರ್ಕಾರದಿಂದ ಸ್ಮಾರ್ಟ್ ಫೋನ್‌ಗಳನ್ನು ವಿತರಿಸಲಾಗುತ್ತಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.

ಇಲ್ಲಿನ ತಮ್ಮ ನಿವಾಸದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸ್ಮಾರ್ಟ್‌ ಫೋನ್‌ಗಳನ್ನು ಕಾರ್ಯಕರ್ತೆಯರಿಗೆ ವಿತರಿಸಿ ಅವರು ಮಾತನಾಡಿದರು. ‘ಕೊರೊನಾ ಸಂಕಷ್ಟದಲ್ಲೂ ಜೀವದ ಹಂಗು ತೊರೆದು ಕಾರ್ಯಕರ್ತೆಯರು ನಿರ್ವಹಿಸಿದ ಕಾರ್ಯಕ್ಕೆ  ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿ ಹೆಚ್ಚಿನ ಜವಾಬ್ದಾರಿ ನೀಡಿದೆ’ ಎಂದರು.

ಸಿಡಿಪಿಒ ಸಂತೋಷ ಕಾಂಬಳೆ, ಪೋಷಣ್‌ ಅಭಿಯಾನದ ಸಂಯೋಜಕ ಅನ್ನಪೂರ್ಣಾ ಘಟನಟ್ಟಿ, ಲಖನ್ ದುಂಡಗಿ, ಮೇಲ್ವಿಚಾರಕಿಯರಾದ ಎಸ್.ಎಸ್. ಪಾಟೀಲ, ಎಸ್.ಎಸ್. ದೊಡಮನಿ, ಇಂದಿರಾ ಅಸ್ಕಿ, ಜಿ.ಕೆ. ಕಾಂಬಳೆ, ಉಮಾ ಗಡಕರಿ, ಮಹಾದೇವಿ ತರಾಳ, ಶಾಜಾದ ಜಮಾದಾರ, ಭಾರತಿ ಮುರನಾಳ, ಶೀಲಾ ಕುಲಕರ್ಣಿ, ಶ್ರೀದೇವಿ ಜಾಧವ, ಅರ್ಚನಾ ಕುಲಕರ್ಣಿ ಅವರು ಹಾಜರಿದ್ದರು.

Exit mobile version