Imphal : ಮೇ ತಿಂಗಳ ಆರಂಭದಲ್ಲಿ ಮಣಿಪುರದಲ್ಲಿ (Another gang rape Manipur) ಜನಾಂಗೀಯ ಸಂಘರ್ಷ ಶುರುವಾಗುತ್ತಿದ್ದ ವೇಳೆಯಲ್ಲಿ ಮತ್ತೊಂದು ಭಯಾನಕ
ಲೈಂಗಿಕ ದೌರ್ಜನ್ಯ ಪ್ರಕರಣ ನಡೆದಿತ್ತು ಆದರೆ ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರಿಗೆ ಪರಿಹಾರ ಶಿಬಿರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತೆ ದೂರು ನೀಡಿದ್ದಾರೆ.
ಕಳೆದ ತಿಂಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆಯ ಹೇಯ ಪ್ರಕರಣದ ವಿಡಿಯೋ ಎಲ್ಲೆಡೆ ವೈರಲ್ (Viral) ಆಗಿ ಈ ಬಗ್ಗೆ ಇಡೀ
ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಇದೀಗ ಅನೇಕ ಸಂತ್ರಸ್ತೆಯರು ಈ ವಿಡಿಯೋ ಬೆನ್ನಲ್ಲೇ ತಮ್ಮ ಮೇಲಾದ ದೌರ್ಜನ್ಯಗಳ ಬಗ್ಗೆ ದೂರು ನೀಡಲು ಮುಂದೆ ಬರುತ್ತಿದ್ದಾರೆ.

ಮಣಿಪುರದ ಚುರಾಚಂದಪುರ (Chura chandapura) ಜಿಲ್ಲೆಯಲ್ಲಿ ಮೇ 3ರಂದು ಹಿಂಸಾಚಾರ ಭುಗಿಲೆದ್ದಿತು ಈ ಸಂದರ್ಭದಲ್ಲಿ ಇಬ್ಬರು ಗಂಡು ಮಕ್ಕಳು, ಸೋದರ ಸೊಸೆ ಹಾಗೂ ನಾದಿನಿ ಜತೆ
ಹೊತ್ತಿ ಉರಿಯುತ್ತಿದ್ದ ತನ್ನ ಮನೆಯಿಂದ ಹೊರಗೆ ಓಡಿ ಹೋಗುತಿದಾಗ ತನ್ನನ್ನು ಜನರ ಗುಂಪೊಂದು ಹಿಡಿದು ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು 37 ವರ್ಷದ ಮಹಿಳೆಯೊಬ್ಬರು
ಪೋಲೀಸರ ಬಳಿ ದೂರು ನೀಡಿದ್ದಾರೆ.
ಮಹಿಳೆಯರು ಅವರು ಅನುಭವಿಸಿದ ಯಾತನೆಗಳ ಬಗ್ಗೆ ಧೈರ್ಯ ಮಾಡಿ ಮಾತನಾಡಲು ಮುಂದೆ ಬರುತ್ತಿರುವ ಅನೇಕ ವರದಿಗಳನ್ನು (Report) ನೋಡಿದ ನಂತರ ತಮ್ಮಲ್ಲಿ ಧೈರ್ಯ
ಬಂದಿರುವುದಾಗಿ ಪೊಲೀಸರಿಗೆ ದೂರು ನೀಡುವಾಗ (Another gang rape Manipur) ಸಂತ್ರಸ್ತೆ ತಿಳಿಸಿದ್ದಾರೆ.

ಘಟನೆಯ ವಿವರ :
ದುಷ್ಕರ್ಮಿಗಳು ಮಹಿಳೆ ಹಾಗೂ ಆಕೆಯ ಪಕ್ಕದ ಮನೆಗೆ ಮೇ 3ರ ಸಂಜೆ 6.30ರ ವೇಳೆಗೆ ಬೆಂಕಿ ಹಚ್ಚಲು ಆರಂಭಿಸಿದ್ದರು. ಆಕೆ ಸೋದರ ಸೊಸೆ, ತನ್ನ ಇಬ್ಬರು ಮಕ್ಕಳು, ಹಾಗೂ ನಾದಿನಿ ಜತೆ
ಸಾಧ್ಯವಾದಷ್ಟು ವೇಗವಾಗಿ ಓಡಲು ಆರಂಭಿಸಿದ್ದರು ಎಂದು ಎಫ್‌ಐಆರ್ (FIR) ತಿಳಿಸಿದೆ. “ನನ್ನ ಇಬ್ಬರು ಮಕ್ಕಳನ್ನು ಹಿಡಿದುಕೊಂಡು, ಮತ್ತು ಸೋದರ ಸೊಸೆಯನ್ನು ಬೆನ್ನಿನಲ್ಲಿ ಇರಿಸಿಕೊಂಡು ಹಾಗೂ
ನನ್ನ ನಾದಿನಿ ಜತೆ ಓಡತೊಡಗಿದ್ದೆ. ನನ್ನ ನಾದಿನಿ ಕೂಡ ಆಕೆಯ ಬೆನ್ನಿನಲ್ಲಿ ಆಕೆಯ ಮಗುವನ್ನು ಇರಿಸಿಕೊಂಡು ನನಗಿಂತ ಮುಂದೆ ಓಡುತ್ತಿದ್ದಳು. ಆದರೆ ದುರದೃಷ್ಟವಾತ್ ನಾನು ಎಡವಿ ರಸ್ತೆಯ ಮೇಲೆ ಬಿದ್ದೆ.
ಇದನ್ನೂ ಓದಿ : ಹೃದಯಾಘಾತಕ್ಕೆ ಕಾರಣವಾಗುವ ಈ ಲೋ ಬಿಪಿ ಆಗಲು ಕಾರಣಗಳೇನು ಗೊತ್ತಾ? ಹೇಗಿರುತ್ತವೆ ಲಕ್ಷಣಗಳು?? ಚಿಕಿತ್ಸೆ ಏನು.. ಇಲ್ಲಿದೆ ಮಾಹಿತಿ
ಮುಂದೆ ನನಗೆ ಓಡಲು ಕೂಡ ಆಗಲಿಲ್ಲ. ಆದರೆ ನನ್ನ ನಾದಿನಿ ವಾಪಸ್ ನನ್ನ ಹತ್ತಿರ ಬಂದು, ಗಂಡುಮಕ್ಕಳನ್ನು ಹಾಗೂ ನನ್ನ ಬೆನ್ನ ಮೇಲಿದ್ದ ಸೋದರ ಸೊಸೆಯನ್ನು ಕರೆದುಕೊಂಡು ಓಡತೊಡಗಿದಳು.
ಅಷ್ಟರಲ್ಲಿ ಹೇಗೋ ನಾನು ಕೊನೆಗೂ ಮೇಲೆ ಎದ್ದೆ. ಐದಾರು ಮಂದಿ ದುಷ್ಕರ್ಮಿಗಳು ಅಷ್ಟರಲ್ಲಿ ನನ್ನನ್ನು ಹಿಡಿದುಕೊಂಡರು. ಅವಾಚ್ಯವಾಗಿ ನನ್ನನ್ನು ನಿಂದಿಸುತ್ತಾ ನನ್ನ ಮೇಲೆ ಹಲ್ಲೆ ನಡೆಸಿದರು. ನಾನು
ಬಿಡಿಸಿಕೊಳ್ಳಲು ಎಷ್ಟು ಯತ್ನಿಸಿದರೂ ಕೂಡ ನನ್ನ ಪ್ರತಿರೋಧದ ನಡುವೆಯೂ ನನ್ನನ್ನು ಕೆಳಕ್ಕೆ ತಳ್ಳಿದರು. ಆ ವ್ಯಕ್ತಿಗಳು ಇದರ ಬಳಿಕ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರು” ಎಂದು ಮಹಿಳೆ ಹೇಳಿದ್ದಾರೆ.

ನಾನು ಘಟನೆಯನ್ನು ಬಹಿರಂಗಪಡಿಸಿರಲಿಲ್ಲ ಏಕೆಂದರೆ ಸಾಮಾಜಿಕ ಬಹಿಷ್ಕಾರದಿಂದ (Social Exclusion) ನಮ್ಮನ್ನು ಕಾಪಾಡಲು ಮತ್ತು “ನನ್ನನ್ನು ಮತ್ತು ನನ್ನ ಕುಟುಂಬದ ಗೌರವ, ಘನತೆಯನ್ನು
ಉಳಿಸಿಕೊಳ್ಳಲು ಅಷ್ಟೇ ಅಲ್ಲದೆ ಸಾಮಾಜಿಕ ಕಳಂಕದ ಭೀತಿಯಿಂದಾಗಿ ಸಹ ಈ ದೂರು ನೀಡುವುದು ತಡವಾಗಿದೆ. ನನ್ನ ಜೀವ ತೆಗೆದುಕೊಳ್ಳಲು ಕೂಡ ನಾನು ಪ್ರಯತ್ನಿಸಿದ್ದೆ ” ಎಂದು ಬುಧವಾರ ದಾಖಲಾದ
‘ಝೀರೋ ಎಫ್‌ಐಆರ್’ನಲ್ಲಿ ಬಿಷ್ಣುಪುರ (Bishnupura) ಪೊಲೀಸ್ ಠಾಣೆಯಲ್ಲಿ ಮಹಿಳೆಯ ಹೇಳಿಕೆಯನ್ನು ನಮೂದಿಸಲಾಗಿದೆ.
ಆಂತರಿಕವಾಗಿ ನೆಲೆ ಕಳೆದುಕೊಂಡವರ ಪರಿಹಾರ ಶಿಬಿರದಲ್ಲಿ ಪ್ರಸ್ತುತ ಆ ಮಹಿಳೆ ವಾಸಿಸುತ್ತಿದ್ದಾರೆ. ಐಪಿಸಿ ಸೆಕ್ಷನ್ 376 ಡಿ, 120 ಬಿ, 354, ಮತ್ತು 34ರ ಅಡಿ ಪ್ರಕರಣ ದಾಖಲಿಸಲಾಗಿದೆ.

ಮೈತೇಯಿ ಸಮುದಾಯದ ಜನರು ಅವರನ್ನು ಪರಿಶಿಷ್ಟ ಪಂಗಡ ವರ್ಗಕ್ಕೆ ತಮ್ಮನ್ನು ಸೇರಿಸಬೇಕು ಎಂದು ಆಗ್ರಹಿಸುತ್ತಿದ್ದರು ಈ ವೇಳೆಯಲ್ಲಿ ಕುಕಿ ಸಮುದಾಯವು ಮೈತೇಯಿ ಸಮುದಾಯದ ಜನರ
ಬೇಡಿಕೆಯ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಿತ್ತು ಅದಾದ ನಂತರ ಹಿಂಸಾಚಾರ ಶುರುವಾಗಿತ್ತು.
ರಶ್ಮಿತಾ ಅನೀಶ್