Health News : ಸಾಮಾನ್ಯವಾಗಿ ಒಬ್ಬ ಮನುಷ್ಯನಲ್ಲಿ ರಕ್ತದೊತ್ತಡವು(Blood Pressure) 120/90 mm Hg ಇರಬೇಕು. ಆದರೆ ಯಾರಿಗೆ ಅದಕ್ಕಿಂತ ಹೆಚ್ಚಿನ ರಕ್ತದೊತ್ತಡ ಅಥವಾ ಕಡಿಮೆ ರಕ್ತದೊತ್ತಡ ಇರುತ್ತದೋ ಅಂತಹವರು ಹೃದಯಾಘಾತದಂತಹ(Heart Attack) ಸಂಭಾವ್ಯ ಅಪಾಯಗಳನ್ನು ಹೊಂದಬಹುದು.
ಇತ್ತೀಚೆಗೆ ಬಹಳಷ್ಟು ಜನರು ತಮ್ಮ ಚಿಕ್ಕ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಕಡಿಮೆ ರಕ್ತದೊತ್ತಡವು 90/60 mm Hg ಗಿಂತ ಕಡಿಮೆ ಇರುತ್ತದೆ. ಹಠಾತ್ ಆಗಿ ಇಂತವರು ಹೃದಯಾಘಾತಕ್ಕೆ ಒಳಗಾಗಬಹುದು. ಅಷ್ಟಕ್ಕೂ ಲೋ ಬಿಪಿಯ(Low BP) ಲಕ್ಷಣಗಳು ಏನಿದೆ ಎಂಬುದನ್ನು ಇಲ್ಲಿ ತಿಳಿಯಿರಿ.

ಕಡಿಮೆ ರಕ್ತದೊತ್ತಡದ ಲಕ್ಷಣಗಳು
ಒಂದು ವೇಳೆ ಈ ರೀತಿಯ ರೋಗಲಕ್ಷಣಗಳನ್ನು(Symptoms) ನೀವು ಹೊಂದಿದ್ದಲ್ಲಿ ರಕ್ತದೊತ್ತಡದ ಪರೀಕ್ಷೆಗೆ ಒಳಗಾಗಬೇಕು. ಏಕೆಂದರೆ ನಿಮ್ಮ ರಕ್ತದೊತ್ತಡ ತುಂಬಾ ಕಡಿಮೆ ಇದೆ ಎಂದು ಈ ಕೆಳಗಿನ ಲಕ್ಷಣಗಳು ಸೂಚಿಸುತ್ತದೆ.
ತಲೆ ತಿರುಗುವಿಕೆ
ಮಂದ ದೃಷ್ಟಿ
ತಲೆ ಸುತ್ತು ಬಂದರೆ
ಗೊಂದಲ
ಸಾಮಾನ್ಯವಾಗಿ ದುರ್ಬಲ ಭಾವನೆ
ಮೂರ್ಛೆ ಹೋಗುತ್ತಿದೆ

ನಿಮ್ಮ ರಕ್ತದೊತ್ತಡವನ್ನು ಹೇಗೆ ಚೆಕ್ ಮಾಡಿಕೊಳ್ಳಬೇಕು?
ಒಂದು ವೇಳೆ ಈ ಮೇಲೆ ತಿಳಿಸಿದ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು(Doctor) ತಡ ಮಾಡದೇ ಭೇಟಿ ನೀಡಿ. ದೇಹದಲ್ಲಿ ಈ ರೀತಿಯಾಗಿ ಬದಲಾಗುತ್ತಿರುವ ರಕ್ತದೊತ್ತಡವು ವ್ಯಕ್ತಿಯ ಸಾವಿಗೂ ಕೂಡ ಕಾರಣವಾಗುತ್ತದೆ ಎಂಬುದನ್ನು ನಾವು ಇಲ್ಲಿ ಗಮನಿಸಬೇಕಾಗುತ್ತದೆ.
ಕೆಲವೊಂದು ಔಷಧಿಗಳನ್ನು(Medicine) ವೈದ್ಯರು ನಿಮ್ಮನ್ನು ಪರೀಕ್ಷೆ ಮಾಡಿದ ನಂತರ ಶಿಫಾರಸು ಮಾಡುತ್ತಾರೆ. ಅಲ್ಲದೆ, ಎಂತಹ ಆಹಾರಗಳನ್ನು ನೀವು ಸೇವಿಸಬೇಕು ಎಂಬುದನ್ನು ಅವರಿಂದ ತಿಳಿಯಿರಿ.

ಕಡಿಮೆ ರಕ್ತದೊತ್ತಡಕ್ಕೆ ಕಾರಣಗಳು
ಗರ್ಭಾವಸ್ಥೆ
ಕೆಲವು ಔಷಧಿಗಳು
ರಕ್ತದ ಪರಿಮಾಣದಲ್ಲಿನ ಇಳಿಕೆ
ಅಂತಃಸ್ರಾವಕ ಸಮಸ್ಯೆಗಳು
ಹೃದಯ ಸಮಸ್ಯೆಗಳು
ನಿರ್ಜಲೀಕರಣ
ಅಲರ್ಜಿಯ ಪ್ರತಿಕ್ರಿಯೆ
ಪೌಷ್ಟಿಕಾಂಶದ ಕೊರತೆಗಳು
ಕಡಿಮೆ ರಕ್ತದೊತ್ತಡಕ್ಕೆ ಚಿಕಿತ್ಸೆ
ಒಂದು ವೇಳೆ ನಿಮ್ಮಲ್ಲಿ ಕಡಿಮೆ ರಕ್ತದೊತ್ತಡ ಕಂಡು ಬಂದರೆ ಹೆದರುವ ಅವಶ್ಯಕತೆ ಇಲ್ಲ. ವೈದ್ಯರು ಅದಕ್ಕೆ ಬೇಕಾಗುವಂತಹ ಸೂಕ್ತವಾದ ಚಿಕಿತ್ಸೆಯನ್ನು ನೀಡುತ್ತಾರೆ. ಆದರೆ ನಿಮ್ಮಲ್ಲಿ ಇಂತಹ ಸಣ್ಣ ಸಣ್ಣ ಲಕ್ಷಣಗಳು ಕಂಡು ಬಂದರೂ ಕೂಡ ನಂತರ ವೈದ್ಯರನ್ನು ತಕ್ಷಣ ಭೇಟಿ ನೀಡಬೇಕು ಎಂಬುದನ್ನು ದಯವಿಟ್ಟು ಎಲ್ಲರೂ ಗಮನಿಸಬೇಕಾಗುತ್ತದೆ.

ರಕ್ತದೊತ್ತಡ ಕಡಿಮೆಯಾದರೆ ಏನಾಗುತ್ತದೆ?
ಸಾಮಾನ್ಯವಾಗಿ ಒಬ್ಬ ಮನುಷ್ಯನಲ್ಲಿ ರಕ್ತದೊತ್ತಡದ 90/60 mm Hg ಗಿಂತ ಕಡಿಮೆ ಇದ್ದರೆ ಅದನ್ನು ಕಡಿಮೆ ರಕ್ತದೊತ್ತಡ ಎಂದು ಕರೆಯುತ್ತಾರೆ . ಇದರಿಂದ ಉಂಟಾಗುವ ಹಠಾತ್ ತೀವ್ರ ಕುಸಿತಗಳು ನಿಮ್ಮ ದೇಹಕ್ಕೆ ಆಮ್ಲಜನಕದ(Oxygen) ಕೊರತೆಯನ್ನು ಉಂಟು ಮಾಡುತ್ತದೆ . ಅಲ್ಲದೆ, ಹೃದಯ(Heart), ಮೆದುಳು(Brain) ಮತ್ತು ಇತರ ಅಂಗಗಳ ಹಾನಿಗೆ ಇದರಿಂದ ಯಾವುದೇ ರೀತಿಯ ಹಾನಿಗೆ ಕಾರಣವಾಗಬಹುದು.ತಕ್ಷಣವೇ ಚಿಕಿತ್ಸೆಯನ್ನು ಇಂತಹ ಅಪಾಯಗಳಿಗೆ ಪಡೆಯದಿದ್ದರೆ ಜೀವಕ್ಕೆ ಕುತ್ತು ತಂದೊಡ್ಡಬಹುದು.
ಕಡಿಮೆ ರಕ್ತದೊತ್ತಡಕ್ಕೆ ಸೂಚಿಸಲಾಗುವ ಕೆಲವು ಆಹಾರಗಳು
ಆಹಾರದ ಮೂಲಕವಾಗಿ ಕೂಡ ಕಡಿಮೆ ರಕ್ತದೊತ್ತಡವನ್ನು ನಿರ್ವಹಿಸಬಹುದು. ಧಾನ್ಯಗಳು ಮತ್ತು ಕೆಲವು ಪೌಷ್ಟಿಕಾಂಶದ ಉತ್ಪನ್ನಗಳಂತಹ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು, ಸಾಕಷ್ಟು ನೀರು ಕುಡಿಯುವುದು, ಹಸಿರು ತರಕಾರಿಗಳು, ಕೋಳಿ,ಮೊಟ್ಟೆ, ಮಾಂಸ, ಹಾಲಿನ ಉತ್ಪನ್ನಗಳು, ಬೀಜಗಳು, ಹಣ್ಣುಗಳು, , ಬೀನ್ಸ್, , ಡೈರಿ, ಮಾಂಸ, ಸಮುದ್ರಾಹಾರಗಳನ್ನು ಕೂಡ ತಪ್ಪಿಸದಿರಲು ಸಲಹೆ ನೀಡಲಾಗಿದೆ.
ರಶ್ಮಿತಾ ಅನೀಶ್