ಮಹಿಳೆಯರಿಗೆ ಮಾರಕವಾಗಿರುವ ‘ಬುಲ್ಲಿ ಬಾಯಿ ಆ್ಯಪ್’

ಇತ್ತೀಚಿನ ದಿನಗಳಲ್ಲಿ ಬುಲ್ಲಿ ಬಾಯ್ ಆ್ಯಪ್‍ ಎಂಬುವುದು ಸಾಕಷ್ಟು ಸದ್ದು ಮಾಡುತ್ತಿದೆ. ಈ ಆ್ಯಪ್‍ ಮಹಿಳೆಯರಿಗೆ ಅದರಲ್ಲೂ ಮುಸ್ಲಿಂ ಮಹಿಳೆಯರಿಗೆ ಮಾರಕ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಆಷ್ಟಕ್ಕೂ ಮಹಿಳೆಯರಿಗೂ ಈ ಬುಲ್ಲಿ ಆ್ಯಪ್‍ಗೂ ಏನು ಸಂಬಂಧ ? ಬುಲ್ಲಿ ಆ್ಯಪ್‍ ಅಂದರೆ ಏನು  ಎಂಬುವುದರ ಬಗ್ಗೆ ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ.  

ಒಂದು ಮೂಲಗಳ ಪ್ರಕಾರ ಮುಸ್ಲಿಂ ಮಹಿಳೆಯರ ವಿವರಗಳನ್ನು  ಮತ್ತು ಚಿತ್ರಗಳನ್ನು ಬಳಕೆ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಾಜು ಮಾಡುವ ಪ್ರಕ್ರಿಯೆಯೇ ಈ ಬುಲ್ಲಿ ಆ್ಯಪ್‌ನ ಬಂಡವಾಳವಾಗಿದೆ. ಕಳೆದ ವರ್ಷವೂ ಕೂಡ ‘ಸುಲ್ಲಿ ಡೀಲ್’ ಎಂಬ ಹೆಸರಿನ ಆ್ಯಪ್‌ ಕೂಡ ಇಂತಹ ಕೃತ್ಯಕ್ಕೆ ಕೈಹಾಕಿತ್ತು. ಕೊನೆಗೆ ಅದು ಭಾರೀ ವಿವಾದಕೂಡ ಎಬ್ಬಿಸಿತ್ತು. ಆದರೆ ಬುಲ್ಲಿ ಬಯ್ಯಾ ಆ್ಯಪ್ ಈ ರೀತಿಯ ಕೃತ್ಯಕ್ಕಾಗಿ ಗಿಟ್ ಹಬ್ ಎಂಬ ವೇದಿಕೆಯನ್ನು ಸೃಷ್ಟಿಸಿಕೊಂಡು, ಮುಖ್ಯವಾಗಿ ಮುಸ್ಲಿಂ ಸಮಯದಾಯದ ಅದರಲ್ಲೂ ವಿವಿಧ ರಂಗಗಳಲ್ಲಿ ಪ್ರಸಿದ್ದಿ ಪಡೆದಿದ್ದವರ ಫೋಟೋಗಳನ್ನು ಕೂಡ ದುರ್ಬಳಕೆ ಮಾಡಲಾಗುತ್ತಿದೆ. ಜೊತೆಗೆ ಗಿಟ್‍ ಹಬ್‍ ಎಂಬ ಆನ್‌ಲೈನ್ ಪ್ಲಾಟ್‌ಫಾರ್ಮ್‌ನ ಮೂಲಕ ಬುಲ್ಲಿ ಬಾಯಿ ಅಪ್ಲಿಕೇಷನ್‌ನಲ್ಲಿ ಮಹಿಳೆಯರ ತಿದ್ದಿದ ಚಿತ್ರಗಳನ್ನು ಅಪ್‌ಲೋಡ್ ಮಾಡಿ ಹರಾಜಿಗೆ ಹಾಕಲಾಗಿದೆ ಎಂಬ ಆರೋಪವೂ ಕೂಡ ಕೇಳಿ ಬರುತ್ತಿದೆ. ಆದರೆ ಇಲ್ಲಿಯವರೆಗೂ  ಈ ಆ್ಯಪ್ ಮೂಲಕ ಯಾವುದೇ ನಿಜವಾದ ಹರಾಜು ಹಾಗೂ  ಮಾರಾಟ  ನಡೆಯದೆ ಇದ್ದರೂ ಕೂಡ ಈ ಆ್ಯಪ್‌ನ ಉದ್ದೇಶವು ಮಹಿಳೆಯರನ್ನು ಅವಮಾನಿಸುವುದು ಮತ್ತು ಬೆದರಿಸುವುದು ಎಂಬುವುವಂತಹ ಆಘಾತಕಾರಿ ಅಂಶ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅದರಲ್ಲೂ ಈ ಕೃತ್ಯಕ್ಕೆ ಸಾಮಾಜಿಕ ಜಾಲತಾಣದ ಸಕ್ರಿಯ ಬಳಕೆದಾರರಾಗಿರುವ ಮುಸ್ಲಿಂ ಮಹಿಳೆಯರನ್ನು ಹೆಚ್ಚು ಗುರಿಯಾಗಿಸಿಕೊಳ್ಳಲಾಗಿದೆ ಎಂಬ ಆಂತಕಕಾರಿ  ವರದಿಕೂಡ ಲಭಿಸಿದೆ.

ಈ  ಬುಲ್ಲಿ ಬಾಯ್‍ ಆ್ಯಪ್ ‘ಸುಲ್ಲಿ ಡೀಲ್ಸ್‌’ನ ಮತ್ತೊಂದು ರೂಪ ಎಂದು ಭಾವಿಸಲಾಗಿದ್ದು, ಸುಲ್ಲಿ ಮತ್ತು ಬುಲ್ಲಿ ಎಂಬುವುದು ಸ್ಥಳೀಯ ಭಾಷೆಯಲ್ಲಿ ಬಳಸುವ ಕೆಟ್ಟ ಅಥವಾ ಕೀಳು ಪದವಾಗಿದೆ. ಈ ಆ್ಯಪ್‍ನಲ್ಲಿ ಮಹಿಳೆಯರ ಫೋಟೋವನ್ನು ಹಾಕಿ ‘ಡೀಲ್‍ ಆಫ್ ದಿ ಡೇ’ ಎಂದು ಹಾರಜು ಮಾಡಲಾಗುತ್ತದೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಬುಲ್ಲಿ ಬಾಯ್‍ ಆ್ಯಪ್‍ ಹಲವು ಸಾಮಾಜಿಕ ಜಾಲತಾಣದಿಂದ ಮಹಿಳೆಯ ಫೋಟೋವನ್ನು ಕದ್ದು ‘ಗಿಟ್‍ ಹಬ್‍’ ಮುಖಾಂತರ ಹಾರಜಿಗೆ ಹಾಕುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಉಲ್ಲೇಖಿಸಲಾಗಿದೆ. ಗಿಟ್ ಹಬ್‌ ಒಂದು ಬಹುದೊಡ್ಡ ಸಂಸ್ಥೆಯಾಗಿದ್ದು ಅದು  ತನ್ನ ವೆಬ್‌ಸೈಟ್‌ನಲ್ಲಿ ಪ್ರಸ್ತುತ 200 ಮಿಲಿಯನ್‌ಗಿಂತಲೂ ಹೆಚ್ಚು ಕೋಡ್‌ನ ರೆಪೊಸಿಟರಿಗಳನ್ನು ಹೋಸ್ಟ್ ಮಾಡುತ್ತಿದೆ.  ಮತ್ತು 73 ಮಿಲಿಯನ್‌ಗಿಂತಲೂ ಹೆಚ್ಚು ಡೆವಲಪರ್‌ಗಲೂ ಇದನ್ನು ಬಳಸುತ್ತಿದ್ದಾರೆ  ಇದಕ್ಕೆ ಪೂರಕ ಎಂಬಂತೆ  ಗಿಟ್ ಹಬ್‍ ಇಂತಹ ಆ್ಯಪ್‍ಗಳಿಗೆ ಪರೋಕ್ಷ ಬೆಂಬಲವನ್ನು ನೀಡುತ್ತಿದೆ ಈ ಬಗ್ಗೆ ಕಾರಣ ತಿಳಿಯುವುದಾದರೆ,  ಬಳಕೆದಾರರು ಖಾತೆಯನ್ನು ರಚಿಸಲು ಇಮೇಲ್ ಐಡಿಯನ್ನು ಮಾತ್ರ ಒದಗಿಸಿದರೆ ಸಾಕು. ಬಳಕೆದಾರರನ್ನು ಸೈಟ್‌ ಪರಿಶೀಲಿಸುತ್ತದೆ ಆದರೆ ಯಾವಾಗಲೂ ಅನಾಮಧೇಯರಾಗಿ ಉಳಿಯುವಂತಹ ಆಯ್ಕೆಯನ್ನು ಕೂಡ ಇದರಲ್ಲಿ ಮಾಡಬಹುದಾಗಿದೆ. ಗಿಟ್ ಹಬ್ ಸಂಸ್ಥೆಯು ವಾರಂಟ್ ಇಲ್ಲದೆ ಕಾನೂನು ಜಾರಿ ಸಂಸ್ಥೆಗಳಿಗೆ IP ವಿಳಾಸ, ಲಾಗ್‌ಗಳು ಮತ್ತು ಖಾಸಗಿ ಬಳಕೆದಾರರ ವಿಷಯ, ಸ್ಥಳ ಹಾಗೂ ಟ್ರ್ಯಾಕಿಂಗ್ ಡೇಟಾವನ್ನು ಹಂಚಿಕೊಳ್ಳುವುದಿಲ್ಲ. ಇದು ಕೂಡ ಎಲ್ಲೋ ಒಂದು ಕಡೆ ಮಹಿಳೆಯರ ಫೋಟೋವನ್ನು ಬುಲ್ಲಿ ಆ್ಯಪ್‍ ನಂತಹ ಸಂಸ್ಥೆಗಳು ದುರ್ಬಳಕೆ ಮಾಡಿಕೊಳ್ಳಲು ಅನುಕೂಲವಾಗಿರುವುದಂತೂ ನಿಜ. ಅದೇನಿದ್ದರೂ ಈಗಾಗಲೇ ದೇಶಾದ್ಯಂತ  ಬಗ್ಗೆ ಕಾರ್ಯಚರಣೆ ನಡೆಸುತ್ತಿರುವ ಪೊಲೀಸರು ಹಲವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಕೃತ್ಯದ ಹಿಂದೆ ಇನ್ನೇಷ್ಟು ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ತನಿಖೆಯಿಂದ ಹೊರಬರಬೇಕಾಗಿದೆ.

Exit mobile version