vijaya times advertisements
Visit Channel

ಎಡಿಟರ್ಸ್ ಡೆಸ್ಕ್

ಹಿಜಾಬ್ vs ಕೇಸರಿ! ವಿವಾದ ಹಿಂದೆ ಕಾಣದ ಕೈಗಳ ಕುತಂತ್ರವಿದೆಯಾ?

ಕಳೆದ ಕೆಲವು ದಿನಗಳಿಂದ ಸಾಕಷ್ಟು ವಿವಾದವನ್ನು ಎಬ್ಬಿಸಿ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿರುವ ವಿಷಯ ವಸ್ತುವೇ ಈ `ಹಿಜಾಬ್’
ಶಾಲೆ ಅಥವಾ ಕಾಲೇಜು ಎಂಬುವುದು ಯಾವುದೇ ರಾಜಕೀಯ, ಜಾತಿ, ಧರ್ಮ ಇವುಗಳನ್ನೆಲ್ಲ ಮೀರಿದ ಸರ್ವ ಧರ್ಮ ಜ್ಞಾನ ದೇಗುಲ

JDS

ರಾಜ್ಯದಲ್ಲಿ ಮುಗಿಯಿತಾ ಜೆಡಿಎಸ್‌ ಹವಾ? ದಳದ ನಾಯಕರೆಲ್ಲಾ `ಕೈ’ಕೊಡಲು ಕಾರಣ ಏನು?

ದಳದ ಒಂದೊಂದೇ ದಳಗಳು ಉದುರುತ್ತಿವೆ. ದಳದ ನಾಯಕರು ಒಬ್ಬೊಬ್ಬರಾಗಿಯೇ ಪಕ್ಷ ತೊರೆದು ಹೋಗುತ್ತಿರುವ ಬೆಳವಣಿಗೆಯನ್ನು ನೋಡಿದ್ರೆ ಮುಂಬರುವ ವಿಧಾನಸಭಾ ಚುನಾವಣೆಯ ವೇಳೆ ರಾಜ್ಯದ ರಾಜಕೀಯ ಚಿತ್ರಣವೇ ಬದಲಾಗೋ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಬರಬರುತ್ತಾ ರಾಜ್ಯದಲ್ಲಿ ಜೆಡಿಎಸ್‌ ಅಲೆ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತಿದೆ.

modi teleprompter

ಮೋದಿ ಟೆಲಿಪ್ರಾಂಪ್ಟರ್

ಟೆಲಿಪ್ರಾಮ್ಟರ್ ಅಂದ್ರೆ  ಟಿ.ವಿ ಅಥವಾ ಸಮಾರಂಭಗಳಲ್ಲಿ ಮಾತನಾಡುವ ವ್ಯಕ್ತಿಯ ಕಣ್ಣಿಗೆ ಕಾಣುವಂತೆ ಭಾಷಣದ ಸ್ಕ್ರಿಪ್ಟ್ ಅನ್ನು ಪ್ರದರ್ಶಿಸುವ ಸಾಧನ. ಟೆಲಿಪ್ರಾಮ್ಟರ್ ಬಳಕೆ ಇಂದಿನದಲ್ಲ. ಸುಮಾರು 1948ರಿಂದಲೂ ಇದನ್ನು ಬಳಸಲಾಗುತ್ತಿದೆ. ಈ ಹಿಂದೆ ಟಿ.ವಿಗಳಲ್ಲಿ ಸುದ್ದಿ ಮುಖ್ಯಾಂಶಗಳನ್ನು ಹಾಳೆಗಳಲ್ಲಿ ಬರೆದುಕೊಡಲಾಗುತ್ತಿತ್ತು.

NEP

ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ ಮಾಡಬೇಡಿ ಎಂದ ಹೈಕೋರ್ಟ್.! ಕರ್ನಾಟಕದಲ್ಲಿ ಕನ್ನಡಕ್ಕಿಲ್ಲವೇ ಆದ್ಯತೆ.?

ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್.ಇ.ಪಿ) ಅನುಷ್ಠಾನದ ಆಧಾರದ ಮೇಲೆ, ಉನ್ನತ ಅಧ್ಯಯನದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯ ವಿಷಯವಾಗಿ ಅನುಷ್ಠಾನಗೊಳಿಸುವ ವಿಷಯವು ಪರಿಗಣಿಸಬೇಕಾದ ಪ್ರಶ್ನೆಯಾಗಿದೆ ಎಂದು ನಾವು ಭಾವಿಸುತ್ತೇವೆ. ಹಾಗಾಗಿ, ಈ ಹಂತದಲ್ಲಿ ರಾಜ್ಯ ಸರ್ಕಾರವು ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಲು ಒತ್ತಾಯಿಸುವಂತಿಲ್ಲ.

syed library

ಅಧಿಕಾರಿಗಳ ಭರವಸೆ ಸೋತರು, ತಾನು ಸೋಲದೆ ಸುಟ್ಟುಹೋಗಿದ್ದ ಗ್ರಂಥಾಲಯವನ್ನು ಮರು ನಿರ್ಮಾಣ ಮಾಡಿದ ಮೈಸೂರಿನ ಈ ವ್ಯಕ್ತಿ.!

ಜನವರಿ 26ರಿಂದ ಗ್ರಂಥಾಲಯವನ್ನು ಸಾರ್ವಜನಿಕರ ಉಪಯೋಗಕ್ಕೆ  ತೆರೆಯಲಾಗುವುದು ಎಂದು ಸೈಯದ್‌ ತಿಳಿಸಿದ್ದಾರೆ . ಇಶಾಕ್ ಅವರು 4 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ಕಟ್ಟಡವನ್ನು ನಿರ್ಮಿಸಿದ್ದಾರೆ. ಸ್ಥಳೀಯ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಯ ಮಕ್ಕಳಿಂದ ಕಟ್ಟಡವನ್ನು ಉದ್ಘಾಟನೆ ಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಮಹಿಳೆಯರಿಗೆ ಮಾರಕವಾಗಿರುವ ‘ಬುಲ್ಲಿ ಬಾಯಿ ಆ್ಯಪ್’

ಒಂದು ಮೂಲಗಳ ಪ್ರಕಾರ ಮುಸ್ಲಿಂ ಮಹಿಳೆಯರ ವಿವರಗಳನ್ನು  ಮತ್ತು ಚಿತ್ರಗಳನ್ನು ಬಳಕೆ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಾಜು ಮಾಡುವ ಪ್ರಕ್ರಿಯೆಯೇ ಈ ಬುಲ್ಲಿ ಆ್ಯಪ್‌ನ ಬಂಡವಾಳವಾಗಿದೆ. ಕಳೆದ ವರ್ಷವೂ ಕೂಡ ‘ಸುಲ್ಲಿ ಡೀಲ್’ ಎಂಬ ಹೆಸರಿನ ಆ್ಯಪ್‌ ಕೂಡ ಇಂತಹ ಕೃತ್ಯಕ್ಕೆ ಕೈಹಾಕಿತ್ತು. ಕೊನೆಗೆ ಅದು ಭಾರೀ ವಿವಾದಕೂಡ ಎಬ್ಬಿಸಿತ್ತು.

ಸ್ಥಳೀಯ ಸಂಸ್ಥೆಗಳ ಚುನಾವಣೆ ನಿಜಕ್ಕೂ ವಿಧಾನಸಭಾ ಚುನಾವಣೆಯ ದಿಕ್ಸೂಚಿಯೇ ?

ರಾಜ್ಯದಲ್ಲಿ  5 ನಗರಸಭೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 3ರಲ್ಲಿ ಗೆದ್ದು ಬೀಗಿದ್ದು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಗೆಲವು ಸಾಧಿಸುವಲ್ಲಿ ವಿಫಲವಾಗಿವೆ. ಜೊತೆಗೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರಸಭೆ, ತುಮಕೂರು ಜಿಲ್ಲೆಯ ಶಿರಾ 2 ನಗರಸಭೆ ಅತಂತ್ರವಾಗಿದೆ.

ವಿಜಯ ಟೈಮ್ಸ್ ಇಂಪ್ಯಾಕ್ಟ್ ಅಪರೇಷನ್ ಖೋಟಾ ನೋಟು ! ಬಯಲಾಯ್ತು ಕೋಟೆ ನಾಡಿನ ರಾಜಕಾರಣಿಯ ದಂಧೆಯ ಪ್ರಮುಖ ಆರೋಪಿ ಚಂದ್ರಶೇಖರನ ಬಂಧನ

ಕಳೆದ ಕೆಲವು ದಿನಗಳ ಹಿಂದೆ ವಿಜಯಲಕ್ಷ್ಮಿ ಶಿಬರೂರು ನೇತೃತ್ವದ ವಿಜಯ ಟೈಮ್ಸ್‌ ಕವರ್‌ ಸ್ಟೋರಿ ತಂಡ ಚಿತ್ರದುರ್ಗದಲ್ಲಿರು ಖೋಟಾ ನೋಟು ಅಡ್ಡೆಯಲ್ಲಿ ಸ್ಟಿಂಗ್‌ ಆಪರೇಷನ್‌ ನಡೆಸಿತ್ತು. ಈ ಕಾರ್ಯಚರಣೆಯು ರಾಜ್ಯಾದ್ಯಂತ ಸಾಕಷ್ಟು ಸಂಚಲನವನ್ನು ಮೂಡಿಸಿತ್ತು. ಈ ದಂಧೆಯನ್ನು ವಿಜಯ ಟೈಮ್ಸ್‌ ತಂಡ ಬಯಲು ಮಾಡಿದ ಬೆನ್ನಲ್ಲೇ ಚಿತ್ರದುರ್ಗ ಪೊಲೀಸರು ಖೋಟಾ ನೋಟು ದಂಧೆಯ ಪ್ರಮುಖ ಆರೋಪಿಯಾಗಿರುವ ಚಿತ್ರದುರ್ಗ ನಗರಸಭೆಯ  ಸದಸ್ಯನಾಗಿರುವ ಚಂದ್ರಶೇಖರ್‌ ಅಲಿಯಾಸ್‌ ಖೋಟಾ ನೋಟು ಚಂದ್ರು  ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೈ ಎಲೆಕ್ಷನ್ ಅಲ್ಲ. ಬೈಯೋ ಎಲೆಕ್ಷನ್. ಜನರನ್ನ ಮೂರ್ಖರನ್ನಾಗಿಸಲು ನೀವೆಲ್ಲಾ ಸೇರಿ ಮಾಡ್ತಿರೋ ಗಿಮ್ಮಕ್ಕಾ? ನಿಮ್ಮ ನಾಲಿಗೆ ಹರಿಯಬಿಟ್ಟು ನಾಡಿನ ಮರ್ಯಾದೆ ಕಳೆಯ ಬೇಡಿ.

ಬೈ ಎಲೆಕ್ಷನ್ ಅಲ್ಲ. ಬೈಯೋ ಎಲೆಕ್ಷನ್. ಜನರನ್ನ ಮೂರ್ಖರನ್ನಾಗಿಸಲು ನೀವೆಲ್ಲಾ ಸೇರಿ ಮಾಡ್ತಿರೋ ಗಿಮ್ಮಕ್ಕಾ? ನಿಮ್ಮ ನಾಲಿಗೆ ಹರಿಯಬಿಟ್ಟು ನಾಡಿನ ಮರ್ಯಾದೆ ಕಳೆಯ ಬೇಡಿ.