ಕಾಶ್ಮೀರಿ ಪಂಡಿತರಿಗೆ 32 ವರ್ಷಗಳ ನಂತ್ರ ಸಿನಿಮಾ ಸಿಕ್ಕಿದೆ, ನ್ಯಾಯ ಸಿಕ್ಕಿಲ್ಲ : ಕೇಜ್ರಿವಾಲ್!

aravind kejrival

32 ವರ್ಷಗಳ ನಂತರ ಕಾಶ್ಮೀರಿ ಪಂಡಿರಿಗೆ(Kashmiri Pandits) ಸಿನಿಮಾ(Cinema) ಸಿಕ್ಕಿದೆ. ಆದರೆ ಅವರಿಗೆ ನ್ಯಾಯ(Justice) ಸಿಕ್ಕಿಲ್ಲ. ಎಲ್ಲ ರಾಜಕೀಯ ಪಕ್ಷಗಳು ಒಗ್ಗೂಡಿ ಕಾಶ್ಮೀರಿ ಪಂಡಿತರಿಗೆ ನ್ಯಾಯ ಒದಗಿಸಲು ಕೆಲಸ ಮಾಡಬೇಕಿದೆ ಎಂದು ದೆಹಲಿ ಸಿಎಂ(Delhi CM) ಅರವಿಂದ್ ಕೇಜ್ರಿವಾಲ್(Aravind Kejrival) ಹೇಳಿದ್ದಾರೆ.

‘ದಿ ಕಾಶ್ಮೀರಿ ಫೈಲ್ಸ್’(The Kashmir Files) ಚಿತ್ರವನ್ನು ಬಿಜೆಪಿ(BJP) ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ಆದರೆ ಕಾಶ್ಮೀರದಲ್ಲಿ ಪಂಡಿತರ ಮೇಲೆ ಅನ್ಯಾಯವಾಗಿ 32 ವರ್ಷಗಳೇ ಕಳೆದಿವೆ. ಆದರೆ ಇಲ್ಲಿಯವರೆಗೂ ಅವರಿಗೆ ನ್ಯಾಯ ಸಿಕ್ಕಿಲ್ಲ. ಬಿಜೆಪಿ ಕಾಶ್ಮೀರದಲ್ಲಿ ಅಧಿಕಾರ ನಡೆಸಿದೆ. ಆದರೆ ಆಗ ಕಾಶ್ಮೀರಿ ಪಂಡಿತರಿಗೆ ನ್ಯಾಯ ಒದಗಿಸುವ ಕೆಲಸವನ್ನು ಬಿಜೆಪಿ ಮಾಡಿಲ್ಲ. ಇನ್ನೂ ಕಾಶ್ಮೀರಿ ಪಂಡಿತರ ಬಗ್ಗೆ ನನಗೆ ಸಹಾನುಭೂತಿ ಇದೆ. ಅವರಿಗಾದ ಅನ್ಯಾಯವನ್ನು ನಾನು ಖಂಡಿಸುತ್ತೇನೆ. ಅವರಿಗೆ ಪುನರ್ ವಸತಿ ಕಲ್ಪಿಸಬೇಕಿದೆ.

ಕಾಶ್ಮೀರ ಬಿಟ್ಟು ಹೋದ ಕುಟುಂಬಗಳನ್ನು ಮರಳಿ ಕರೆ ತರಬೇಕಿದೆ. ಆ ಮೂಲಕ ಪಂಡಿತರಿಗೆ ನ್ಯಾಯ ಒದಗಿಸಬೇಕಿದೆ ಎಂದಿದ್ದಾರೆ. ಇನ್ನು ಕಳೆದ ಎಂಟು ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಈ ಎಂಟು ವರ್ಷದಲ್ಲಿ ಎಷ್ಟು ಜನ ಕಾಶ್ಮೀರಿ ಪಂಡಿತರನ್ನು ಮರಳಿ ಕಾಶ್ಮೀರಕ್ಕೆ ಕರೆತರಲಾಗಿದೆ? ಕಾಶ್ಮೀರಿ ಪಂಡಿತರ ಪುನರ್ ವಸತಿಗಾಗಿ ಮೋದಿ ಸರ್ಕಾರ ಏನು ಮಾಡಿದೆ? ಆದರೆ ಈಗ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಬಿಜೆಪಿಯವರು ಪ್ರಚಾರ ಮಾಡುತ್ತಿದ್ದಾರೆ. ಪಂಡಿತರಿಗೆ ಬೇಕಿರುವುದು ಸಿನಿಮಾ ಪ್ರಚಾರವಲ್ಲ, ಬದಲಾಗಿ ಪುನರ್ ವಸತಿ. ಅದನ್ನು ಕಲ್ಪಿಸುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ.

ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾದರೆ ಎಲ್ಲ ರಾಜಕೀಯ ಪಕ್ಷಗಳು ಬಿಜೆಪಿಯನ್ನು ಬೆಂಬಲಿಸಲಿವೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಇತ್ತೀಚೆಗೆ ದೆಹಲಿ ವಿಧಾನಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಟೀಕಿಸಿದ್ದರು. ಬಿಜೆಪಿ ಎಲ್ಲೆಡೆ ಈ ಚಿತ್ರವನ್ನು ಪ್ರಚಾರ ಮಾಡುತ್ತಿದೆ. ಉಚಿತ ಪ್ರದರ್ಶನವನ್ನು ಏರ್ಪಡಿಸುತ್ತಿದೆ. ತೆರಿಗೆ ವಿನಾಯತಿ ನೀಡಲಾಗಿದೆ. ಅದರ ಬದಲಾಗಿ ಇಡೀ ಚಿತ್ರವನ್ನು ಯೂಟ್ಯೂಬ್‍ನಲ್ಲಿ ರಿಲೀಸ್ ಮಾಡಿಬಿಡಿ ಎಲ್ಲರೂ ದೇಶಾದ್ಯಂತ ಉಚಿತವಾಗಿ ನೋಡಬಹುದು ಎಂದು ವ್ಯಂಗ್ಯವಾಡಿದ್ದರು.

Exit mobile version