ಬಿಜೆಪಿಯವರೆಲ್ಲಾ ಕ್ಲೀನ್ ಇದ್ದಾರಾ? : ಡಿಕೆಶಿ ಪ್ರಶ್ನೆ

ದೆಹಲಿ, ಆ. 05: ಜಮೀರ್ ಮತ್ತು ರೋಷನ್ ಮನೆ ಮೇಲೆ ದಾಳಿಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಖಂಡಿಸಿದ್ದಾರೆ. ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಚಾರಣೆ ನಡೆದ ಬಳಿಕವೂ ದಾಳಿ ನಡೆಸುವ ಅಗತ್ಯವೇನಿತ್ತು, ಇದು ದುರುದ್ದೇಶಪೂರಿತ ಮತ್ತು ಅಧಿಕಾರದ ದುರ್ಬಳಕೆ, ಕಿರುಕುಳ ಎಂದು ಡಿಕೆಶಿ ಆರೋಪಿಸಿದ್ದಾರೆ.

ಜಮೀರ್ ಪರ ಬ್ಯಾಟಿಂಗ್ ಮಾಡಿದ ಡಿಕೆಶಿ, ಇಡಿ ದಾಳಿ ಮೂಲಕ ಕಿರುಕುಳ ನೀಡಲಾಗುತ್ತಿದೆ, ಒಂದು ಸಮುದಾಯವನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ. ಆಪರೇಶನ್ ಕಮಲ ಕಮಲ ನಡೆಯುತ್ತಿದ್ದಾಗ ಐಟಿ, ಈಡಿ ಎಲ್ಲಿತ್ತು? ಅದಕ್ಕಾಗಿ 9 ಕೋಟಿ ಸಾಲ ಮಾದಲಾಗಿದೆ. ಇದನ್ನ ರಮೇಸಶ್ ಜಾರಕಿಹೊಳಿಯವರೇ ಹೇಳಿದರೂ ಬಿಜೆಪಿ ನಾಯಕರ ಮನೆ ಮೇಲೆ ರೇಡ್ ಯಾಕೆ ನಡೆದಿಲ್ಲ? ಎಂದು ಆಕ್ರೋಷ ಹೊರಹಾಕಿದರು.

ಈ ಸಂರ್ಭದಲ್ಲಿ ಇಡಿ ದಾಳಿ ಅಗತ್ಯವಿರಲಿಲ್ಲ. ಐಟಿ ಈಡಿ ಅದಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ .ಈ ಅನ್ಯಾಯಗಳಿಗೆಲ್ಲ ಕಾನೂನಾತ್ಮಕವಾಗಿ ಉತ್ತರಿಸುವ ಶಕ್ತಿ ನಮಗಿದೆ ಎಂದಿದ್ದಾರೆ. ಡಿಕೆ ಸುರೇಶ್ ಕೂಡ ದಾಳಿ ಖಂಡಿಸಿ, ಇದು ದ್ವೇಶಷ ರಾಜಕಾರಣದ ಭಾಗ ಎಂದು ಆರೋಪಿಸಿದ್ದಾರೆ.

Exit mobile version