ಆರೋಗ್ಯ ವೃದ್ಧಿಯಲ್ಲಿ ಅರಿಶಿಣ

ಅರಿಶಿನದ ಪುಡಿಯನ್ನು ಕಾಳು ಮೆಣಸಿನ ಪುಡಿಯೊಂದಿಗೆ ಹಾಗೂ ಹಾಲಿನ ಜೊತೆ ಸೇರಿಸಿ  ಕುಡಿಯುವುದರಿಂದ ಕಫದ ನಿವಾರಣೆಗೆ ಹಾಗೂ ಗಂಟಲು ಕೆರೆತ ಶಮನವಾಗುತ್ತದೆ. ಮೂಳೆ ಸಮಸ್ಯೆಗೂ ಒಳ್ಳೆಯದಾಗುತ್ತದೆ ರಕ್ತ ಶುದ್ದೀಕರಣಕ್ಕೆ  ಶರೀರದ ಹೊಳಪಿಗೆ  ಶೀತವಾಗಿದ್ದಾಗ ಮೂಗು ಕಟ್ಟಿದ್ದಾಗ ಅರಿಶಿನ ಒಂದು ಚಿಟಿಕೆ ಅರಿಶಿನವನ್ನು ಹಾಲಿನೊಂದಿಗೆ ಮಿಕ್ಸ್ ಮಾಡಿ ಕುಡಿದರೆ ಪರಿಣಾಮಕಾರಿಯಾಗುತ್ತದೆ.

ಅರಿಶಿನ ಪುಡಿ ಮತ್ತು ಬೇವಿನ ಪುಡಿಯನ್ನು ಸಮಪ್ರಮಾಣದಲ್ಲಿ  ಹಾಲಲ್ಲಿ ಅಥವಾ ನೀರಲ್ಲಿ ಬೆರೆಸಿಕೊಂಡು  ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ  ದೇಹದಲ್ಲಿರುವ ಕ್ಯಾನ್ಸರ್ ಕಾರಕ ಜೀವಕೋಶಗಳನ್ನು ನಾಶಮಾಡುತ್ತದೆ.

 ಅರಿಶಿನ ಪುಡಿಗೆ ಮೆಂಥೆ ಪುಡಿ ಹಾಗೂ ಜೇನು ತುಪ್ಪವನ್ನು ಬೆರೆಸಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತೊಳೆದರೆ ಮುಖದ ನೆರಿಗೆಗಳು ಕಡಿಮೆಯಾಗುತ್ತದೆ. ಮುಖದಲ್ಲಿ ಹೊಳಪು ಮೂಡುವುದು. ಇನ್ನು ಸ್ನಾನದ ನೀರಿಗೆ ಒಂದು ಚಮಚ ಅರಿಶಿನ ಪುಡಿ ಬೆರೆಸಿದರೆ ನಂಜುಕಾರಕ ಜೀವಾಣುಗಳು ನಾಶವಾಗುತ್ತವೆ.

ದೇಹದಲ್ಲಿ ಗಾಯವಾಗಿದ್ದರೆ ಅರಿಶಿನ ಪುಡಿಯನ್ನು ಗಾಯಕ್ಕೆ ಹಚ್ಚುವುದರಿಂದ ಗಾಯ ಗುಣವಾಗುತ್ತದೆ. ಕಬ್ಬಿಣ ತಾಗಿ ಗಾಯವಾಗಿದ್ದರೆ ಆ ಗಾಯ ನಂಜುಕಾರಕವಾಗಿರುತ್ತದೆ. ಮತ್ತು ತುರಿಕೆ ಆಗುತ್ತದೆ. ಅದಕ್ಕಿ ಅರಿಶಿನ ಪುಡಿಯನ್ನು ನಿಂಬೆ ರಸದೊಂದಿಗೆ  ಕಲಸಿ ಹಚ್ಚುವುದರಿಂದ  ತುರಿಕೆ ಹಾಗೂ ಗಾಯ ಗುಣವಾಗುತ್ತದೆ.

Exit mobile version