ಸಾರನಾಥದ “ಲಯನ್ ಕ್ಯಾಪಿಟಲ್” ದೇಶದ ಕಾನೂನುಬದ್ಧ ಲಾಂಛನ

India

ರಾಜರಾಂ ತಲ್ಲೂರ್ ಅವರ ವಾಲ್‍ನಿಂದ, ಸಾರನಾಥದ ಮ್ಯೂಸಿಯಂನಲ್ಲಿ ಸಂರಕ್ಷಿಸಲಾಗಿರುವ ಅಶೋಕ ಚಕ್ರವರ್ತಿಯ “ಲಯನ್ ಕ್ಯಾಪಿಟಲ್”(Lion Capital) ಈ ದೇಶದ ಲಾಂಛನ. THE STATE EMBLEM OF INDIA (PROHIBITION OF IMPROPER USE) ACT, 2005 ACT NO. 50 OF 2005 ಎಂಬ ಸಾಂವಿಧಾನಿಕ ರಕ್ಷಣೆ ಈ ಲಾಂಛನಕ್ಕಿದೆ. ಈ ಲಾಂಛನವನ್ನು ವಿರೂಪಗೊಳಿಸುವುದು ಶಿಕ್ಷಾರ್ಹ ಅಪರಾಧ ಕೂಡ.

ಒಕ್ಕೂಟ ಸರ್ಕಾರಕ್ಕೆ ಈ ಲಾಂಛನದ ಬಳಕೆಯನ್ನು ನಿರ್ದೇಶಿಸುವ ಕಾನೂನುಬದ್ಧ ಅಧಿಕಾರ ಇದೆಯೇ ಹೊರತು ಇದನ್ನು ವಿರೂಪಗೊಳಿಸುವ ಅಥವಾ ತನ್ನ ಮನಸ್ಸಿಗೆ ಬಂದಂತೆ ಸ್ವರೂಪದಲ್ಲಿ ಬದಲಾವಣೆಗಳನ್ನು ಮಾಡುವ ಹಕ್ಕಿಲ್ಲ. ಈಗ ಹೊಸ ಸಂಸತ್ ಭವನದ ಮೇಲುಭಾಗದಲ್ಲಿ ಉದ್ಘಾಟನೆಗೊಂಡಿರುವ ವ್ಯಗ್ರ ಸಿಂಹಗಳನ್ನು ಹೊಂದಿರುವ ಪ್ರತಿಮೆಗೂ ಮತ್ತು ಸಾರನಾಥದ ಪ್ರಶಾಂತ ಮುದ್ರೆಯ ಘನಗಂಭೀರ ಸಿಂಹಗಳಿರುವ ದೇಶದ ಲಾಂಛನಕ್ಕೂ ಎದ್ದು ಕಾಣುವ ವ್ಯತ್ಯಾಸ ತೋರುತ್ತಿದೆ. ಇದನ್ನು ಉದ್ಘಾಟನೆಗೆ ಮುನ್ನ ಒಕ್ಕೂಟ ಸರ್ಕಾರ ಗಮನಿಸಬೇಕಿತ್ತು. ಇದೊಂದು ಲೋಪವೇ ಸರಿ.

ದೇಶದ ಲಾಂಛನದ ಕಾಯಿದೆಯ ಪೂರ್ಣಪಾಠ ಆಸಕ್ತರಿಗಾಗಿ ಇಲ್ಲಿದೆ: https://legislative.gov.in/sites/default/files/A2005-50.pdf

ಜೊತೆಗೆ, ನಾಡಿನ ಹಿರಿಯ ಕಲಾವಿದ ರಾಮ್ ರೆಹಮಾನ್ ಅವರು ಸಾರನಾಥ್ ಮ್ಯೂಸಿಯಂನಲ್ಲಿ ತೆಗೆದ ರಾಷ್ಟ್ರಲಾಂಛನದ ಚಿತ್ರವನ್ನೂ ಮತ್ತು ಸರ್ಕಾರವೇ ಕಾನೂನುಬದ್ಧವಾಗಿ ಅಂಗೀಕರಿಸಿದ ಲಾಂಛನ ಮುದ್ರೆಯ ಚಿತ್ರವನ್ನೂ ಈ ಪೋಸ್ಟ್ ಜೊತೆ ಇರಿಸಿದ್ದೇನೆ. ಹೊಸ ಲಾಂಛನ ಸಂವಿಧಾನಬದ್ಧವಾಗಿಲ್ಲ/ಕಾನೂನುಬದ್ಧವಾಗಿಲ್ಲ ಎಂದಾದರೆ ಅದನ್ನು ಸರಿಯಾದ ವೇದಿಕೆಯಲ್ಲಿ ಪ್ರಶ್ನಿಸಬೇಕಾದುದು ಪ್ರತಿಪಕ್ಷಗಳು. ಅವರು ಅವರ ಜವಾಬ್ದಾರಿಗಳನ್ನು ನಿರ್ವಹಿಸದಿದ್ದರೆ ಅವರೂ ಈ ಲೋಪದಲ್ಲಿ ಪಾಲುದಾರರೇ.

Exit mobile version