• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Sports

ಭಾರತ ತಂಡವು ಏಷ್ಯಾಕಪ್ ಆಡಲು ಪಾಕ್ ನೆಲಕ್ಕೆ ಕಾಲಿಡುತ್ತಾ??? ಸ್ಪಷ್ಟನೆ ನೀಡಿದ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್

Rashmitha Anish by Rashmitha Anish
in Sports
ಭಾರತ ತಂಡವು ಏಷ್ಯಾಕಪ್ ಆಡಲು ಪಾಕ್ ನೆಲಕ್ಕೆ ಕಾಲಿಡುತ್ತಾ??? ಸ್ಪಷ್ಟನೆ ನೀಡಿದ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್
0
SHARES
244
VIEWS
Share on FacebookShare on Twitter

World Cup 2023 : ಯಾವುದೇ ಕ್ರೀಡಾ ಸ್ಪರ್ಧೆಗಳು ಬದ್ಧ ಎದುರಾಳಿ ದೇಶಗಳಾದ ಭಾರತ ಮತ್ತು ಪಾಕಿಸ್ತಾನ (Asia cup india pakistan) ಮಧ್ಯೆ ನಡೆಯುತ್ತೆ ಅಂದರೆ ಅತ್ತ ಕುತೂಹಲದ

ಕಣ್ಣುಗಳನ್ನು ಇಡೀ ಕ್ರೀಡಾ ಜಗತ್ತೇ ನೆಟ್ಟಿರುತ್ತೆ. ಹೀಗಿರುವಾಗ ಭಾರತದಲ್ಲೇ ಅಕ್ಟೋಬರ್​ 5ರಿಂದ ನಡೆಯಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್​ನಲ್ಲಿ (ICC ODI World Cup),

ಇಂಡೋ-ಪಾಕ್​ ತಂಡಗಳು ಬಹಳ ದಿನಗಳ ನಂತರ ಮುಖಿಮುಖಿಯಾಗಲಿವೆ. ಉಭಯ ತಂಡಗಳು ಅದಕ್ಕೂ ಮುನ್ನ ಏಷ್ಯಾಕಪ್ (Asia Cup) ಆಡಬೇಕಿದೆ. ಆದರೆ ಪಾಕಿಸ್ತಾನ ಸರ್ಕಾರ

ಏಷ್ಯಾಕಪ್ ಹಾಗೂ ವಿಶ್ವಕಪ್​ ವಿಚಾರದಲ್ಲಿ ದಿನಗೊಂದು ಖ್ಯಾತೆ ತೆಗೆಯುತ್ತಿದ್ದು ಇದೀಗ ಏಷ್ಯಾಕಪ್ ವೇಳಾಪಟ್ಟಿ ವಿಳಂಬವಾಗುವಂತೆ ಮಾಡುತ್ತಿದೆ.

Asia cup india pakistan

ಬಹಳ ವರ್ಷಗಳಿಂದಲೂ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ರಾಜಕೀಯ ವೈಮನಸ್ಸಿದೆ. ಎರಡೂ ದೇಶಗಳ ಮಧ್ಯೆ ದ್ವಿಪಕ್ಷೀಯ ಕ್ರಿಕೆಟ್​ ಸರಣಿಗಳು ಇದೇ ಕಾರಣಕ್ಕಾಗಿ ನಿಂತೇ ಹೋಗಿವೆ.

ಸದ್ಯ ಕ್ರಿಕೆಟ್​ ಅಭಿಮಾನಿಗಳಿಗೆ ಐಸಿಸಿ ಟೂರ್ನಿಗಳಲ್ಲಿ (ICC Tourney) ಮಾತ್ರ ಇಂಡೋ-ಪಾಕ್​ ಕದನ ಕಣ್ತುಂಬಿಕೊಳ್ಳುವ ಅವಕಾಶ, ಸಿಕ್ತಿದೆ. ಆದರೆ ಇದೀಗ ಪಾಕ್ ಕ್ರೀಡಾ ಸಚಿವ ಭಾರತ ತಂಡವು

ಏಷ್ಯಾಕಪ್ ಆಡಲು ಪಾಕ್ ನೆಲಕ್ಕೆ ಬರದಿದ್ದರೆ, ವಿಶ್ವಕಪ್ ಆಡಲು ಪಾಕ್ ತಂಡ ಕೂಡ ಭಾರತಕ್ಕೆ ಬರುವುದಿಲ್ಲ ಎಂದು ಹೇಳುವ ಮೂಲಕ ಹೊಸ ವಿವಾದ ಹುಟ್ಟುಹಾಕಿದ್ದರು. ಏಷ್ಯಾಕಪ್ ವೇಳಾಪಟ್ಟಿ

ಪ್ರಕಟಣೆಯೂ ಇದರಿಂದಾಗಿ ವಿಳಂಬವಾಗಿತ್ತು. ಇದೀಗ ಐಪಿಎಲ್ (IPL) ಅಧ್ಯಕ್ಷ ಅರುಣ್ ಧುಮಾಲ್ (Arun Dhumal) ಏಷ್ಯಾಕಪ್ ವೇಳಾಪಟ್ಟಿ ಬಿಡುಗಡೆಯ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.

Asia cup india pakistan

ಪಾಕಿಸ್ತಾನಕ್ಕೆ ಹೋಗುತ್ತಿಲ್ಲ ಭಾರತ

ಅರುಣ್ ಧುಮಾಲ್, ಎಲ್ಲಾ ವದಂತಿಗಳಿಗೂ ತೆರೆ ಎಳೆದಿದ್ದು, ಏಷ್ಯಾಕಪ್‌ ವೇಳಾಪಟ್ಟಿಯ ಸುತ್ತ ಎದ್ದಿರುವ ವಿವಾದಗಳ ಕುರಿತು ಸದ್ಯಕ್ಕೆ ಸ್ಪಷ್ಟನೆ ನೀಡಿದ್ದು ಏಷ್ಯಾಕಪ್​ನಲ್ಲಿ ಈ ಬಾರಿಯು ಟೀಂ

ಇಂಡಿಯಾ ಶ್ರೀಲಂಕಾ(Sri Lanka) ನೆಲದಲ್ಲಿ ಪಾಕ್ ತಂಡವನ್ನು ಎದುರಿಸುವುದು ಖಚಿತ ಎಂದಿದ್ದಾರೆ. ವರದಿಯ ಪ್ರಕಾರ, ಟೀಂ ಇಂಡಿಯಾ ಈ ಬಾರಿಯ ಏಷ್ಯಾಕಪ್​ಗಾಗಿ ಪಾಕಿಸ್ತಾನಕ್ಕೆ

(Pakistan) ಹೋಗುತ್ತಿಲ್ಲ. ಬದಲಿಗೆ ಲಂಕಾದಲ್ಲಿ ಟೀಂ ಇಂಡಿಯಾದ ಎಲ್ಲಾ ಪಂದ್ಯಗಳು ನಡೆಯಲ್ಲಿವೆ (Asia cup india pakistan) ಎಂದು ವರದಿಯಾಗಿದೆ.

ಇದನ್ನೂ ಓದಿ : ಕನಿಷ್ಠ 7 ಭಾರತೀಯ ಕೆಮ್ಮು ಸಿರಪ್ ಗಳು ವಿಷಕಾರಿಯಾಗಿವೆ : ವಿಶ್ವ ಆರೋಗ್ಯ ಸಂಸ್ಥೆ

ಈ ಬಗ್ಗೆ ದಕ್ಷಿಣ ಆಫ್ರಿಕಾದಲ್ಲಿ(South Africa) ನಡೆದ ಮಹತ್ವದ ಸಭೆಯಲ್ಲಿ ಅಂತಿಮ ನಿರ್ಧಾರಕ್ಕೆ ಬರಲಾಗಿದ್ದು, ಸಭೆಯಲ್ಲಿ ಭಾಗಿಯಾಗಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಪ್ರತಿನಿಧಿ ಮುಖ್ಯಸ್ಥ

ಝಕಾ ಅಶ್ರಫ್ ಮತ್ತು ಬಿಸಿಸಿಐ (BCCI) ಕಾರ್ಯದರ್ಶಿ ಜಯ್ ಶಾ (Jay Shah) ಏಷ್ಯಾಕಪ್​ ವೇಳಾಪಟ್ಟಿಗೆ ಅಸ್ತು ಎಂದಿದ್ದಾರೆ ಎಂದು ವರದಿಯಾಗಿದೆ. ಧುಮಾಲ್ ಪ್ರಕಾರ ಪಾಕಿಸ್ತಾನದಲ್ಲಿ

ಕಾಂಟಿನೆಂಟಲ್ ಪಂದ್ಯಾವಳಿಯ ನಾಲ್ಕು ಪಂದ್ಯಗಳು ನಡೆಯಲಿದ್ದು, ಶ್ರೀಲಂಕಾದಲ್ಲಿ ಉಳಿದ ಪಂದ್ಯಗಳು ನಿಗದಿಪಡಿಸಲಾಗಿದೆ.

Asia cup india pakistan

ಭಾರತ- ಪಾಕ್ ಲಂಕಾ ನಾಡಲ್ಲಿ ಮುಖಾಮುಖಿ

ಈ ಬಗ್ಗೆ ಹೇಳಿಕೆ ನೀಡಿರುವ ಧುಮಾಲ್, ಪಿಸಿಬಿ(PCB) ಮುಖ್ಯಸ್ಥ ಝಕಾ ಅಶ್ರಫ್ ಅವರನ್ನು ‘ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರು ಭೇಟಿ ಮಾಡಿದ್ದು, ಏಷ್ಯಾ ಕಪ್ ವೇಳಾಪಟ್ಟಿಯನ್ನು

ಅಂತಿಮಗೊಳಿಸಲಾಗಿದೆ. ಏಷ್ಯಾಕಪ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ಮೊದಲೇ ಚರ್ಚಿಸಿದಂತೆ ಆಯೋಜಿಸಲಾಗುತ್ತದೆ. ನಾಲ್ಕು ಪಂದ್ಯಗಳು ಲೀಗ್ ಹಂತದಲ್ಲಿ ಪಾಕಿಸ್ತಾನದಲ್ಲಿ ನಡೆಯಲಿವೆ.

ನಂತರ ಭಾರತ ಮತ್ತು ಪಾಕಿಸ್ತಾನ ಎರಡೂ ಪಂದ್ಯ ಸೇರಿದಂತೆ ಒಟ್ಟು 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ.ಎರಡೂ ತಂಡಗಳು ಒಂದು ವೇಳೆ ಫೈನಲ್ ಆಡಿದರೆ ಮೂರನೇ ಬಾರಿ

ಉಭಯ ತಂಡಗಳು ಮುಖಾಮುಖಿಯಾಗಲಿವೆ’ ಎಂದಿದ್ದಾರೆ.

ಅಲ್ಲದೆ ಈ ಹಿಂದೆ ಟೀಂ ಇಂಡಿಯಾ (Team India) ಏಷ್ಯಾಕಪ್ ಆಡಲು ಪಾಕಿಸ್ತಾನಕ್ಕೆ ಬರಲಿದೆ ಎಂದು ಪಾಕ್ ಕ್ರೀಡಾ ಸಚಿವ ಎಹ್ಸಾನ್ ಮಜಾರಿ, ಹೇಳಿದ್ದಾರೆ ಎಂದು ಪಾಕ್ ಮಾಧ್ಯಮಗಳು

(Media) ವರದಿ ಮಾಡಿದ್ದವು. ಆದರೆ ಧುಮಾಲ್ ಈ ಎಲ್ಲಾ ವರದಿಗಳನ್ನು ತಳ್ಳಿಹಾಕಿ ‘ಅಂತಹ ಯಾವುದೇ ಚರ್ಚೆ ನಡೆದಿಲ್ಲ. ಟೀಂ ಇಂಡಿಯಾ, ಏಷ್ಯಾಕಪ್ ಆಡಲು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ.

ಏಷ್ಯಾಕಪ್ ವೇಳಾಪಟ್ಟಿ ಈಗಾಗಲೇ ಅಂತಿಮಗೊಂಡಿದ್ದು, ಪಂದ್ಯಾವಳಿ ಅದರಂತೆ ನಡೆಯಲಿದೆ ಎಂದಿದ್ದಾರೆ.

Asia cup india pakistan

ಭಾರತವು ಶ್ರೀಲಂಕಾದ ದಂಬುಲ್ಲಾದಲ್ಲಿ 2010ರ ಆವೃತ್ತಿಯಂತೆಯೇ ಪಾಕಿಸ್ತಾನವನ್ನು ಎದುರಿಸಲಿದೆ. ಹಾಗೆಯೇ ತನ್ನ ತವರು ನೆಲದಲ್ಲಿ ಪಾಕಿಸ್ತಾನ ಏಕೈಕ ಪಂದ್ಯವನ್ನಾಡಲಿದ್ದು,

ನೇಪಾಳ (Nepal) ತಂಡವನ್ನು ಆ ಪಂದ್ಯದಲ್ಲಿ ಎದುರಿಸಲಿದೆ. ಇನ್ನುಳಿದ ಮೂರು ಪಂದ್ಯಗಳಲ್ಲಿ ಬಾಂಗ್ಲಾದೇಶ (Bangla Desh) ತಂಡವನ್ನು ಅಫ್ಘಾನಿಸ್ತಾನ ಎದುರಿಸಿದರೆ, ಬಾಂಗ್ಲಾದೇಶ,

ಶ್ರೀಲಂಕಾ ತಂಡವನ್ನು ಮೂರನೇ ಪಂದ್ಯದಲ್ಲಿ ಎದುರಿಸಲಿದೆ. ಇನ್ನು ಪಾಕ್ ನೆಲದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ನಡುವಿನ ಪಂದ್ಯ ನಡೆಯುವ ಕೊನೆಯ ಏಷ್ಯಾಕಪ್ ಪಂದ್ಯವಾಗಲಿದೆ.

ರಶ್ಮಿತಾ ಅನೀಶ್

Tags: IndiaPakistanworldcup2023

Related News

ಏಷ್ಯನ್ ಗೇಮ್ಸ್ – 2023 : ಮಿಶ್ರ ಡಬಲ್ಸ್ ಟೆನಿಸ್ನಲ್ಲಿ ಚಿನ್ನ ತಂದ ಬೋಪಣ್ಣ-ರುತುಜಾ ಜೋಡಿ
Sports

ಏಷ್ಯನ್ ಗೇಮ್ಸ್ – 2023 : ಮಿಶ್ರ ಡಬಲ್ಸ್ ಟೆನಿಸ್ನಲ್ಲಿ ಚಿನ್ನ ತಂದ ಬೋಪಣ್ಣ-ರುತುಜಾ ಜೋಡಿ

September 30, 2023
ವಿಶ್ವ ದಾಖಲೆ: ರೋಹಿತ್ ಶರ್ಮ ಅವರಿಂದ 6 ಸಿಕ್ಸರ್ ಸಿಡಿಸುವ ಮೂಲಕ ವಿಶ್ವ ದಾಖಲೆ
Sports

ವಿಶ್ವ ದಾಖಲೆ: ರೋಹಿತ್ ಶರ್ಮ ಅವರಿಂದ 6 ಸಿಕ್ಸರ್ ಸಿಡಿಸುವ ಮೂಲಕ ವಿಶ್ವ ದಾಖಲೆ

September 29, 2023
ಏಷ್ಯನ್ ಗೇಮ್ಸ್: ವಿಶ್ವ ದಾಖಲೆ ಬರೆದ ಪುರುಷರ 10 ಮೀಟರ್ ಏರ್ ರೈಫಲ್ ತಂಡ..!
Sports

ಏಷ್ಯನ್ ಗೇಮ್ಸ್: ವಿಶ್ವ ದಾಖಲೆ ಬರೆದ ಪುರುಷರ 10 ಮೀಟರ್ ಏರ್ ರೈಫಲ್ ತಂಡ..!

September 25, 2023
ವಿಶ್ವಕಪ್ ಟೂರ್ನಿ : ವಿಜೇತರಿಗೆ 33.24 ಕೋ., ರನ್ನರ್ ಅಪ್ ತಂಡಕ್ಕೆ16.62 ಕೋಟಿ ರೂ.ಬಹುಮಾನ ಘೋಷಿಸಿದ ಐಸಿಸಿ
Sports

ವಿಶ್ವಕಪ್ ಟೂರ್ನಿ : ವಿಜೇತರಿಗೆ 33.24 ಕೋ., ರನ್ನರ್ ಅಪ್ ತಂಡಕ್ಕೆ16.62 ಕೋಟಿ ರೂ.ಬಹುಮಾನ ಘೋಷಿಸಿದ ಐಸಿಸಿ

September 25, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.