Hangzhou (China): ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ಗೇಮ್ಸ್ ನಲ್ಲಿ (Asian Game) ಭಾರತೀಯ ಮಹಿಳಾ ಕ್ರಿಕೆಟ್ ಟೀಮ್ ಶ್ರೀಲಂಕಾ (Srilanka) ತಂಡವನ್ನು ಸೋಲಿಸುವ ಮೂಲಕ ಚಿನ್ನವನ್ನು ಪಡೆದುಕೊಂಡಿದೆ.

ಭಾರತ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನಾ (Smriti Mandhana) ಶ್ರೀಲಂಕಾ ಸ್ಪಿನ್ನರ್ಗಳ ವಿರುದ್ಧ 45 ಎಸೆತಗಳಲ್ಲಿ 46 ರನ್ ಗಳಿಸಿದ್ದರಿಂದ ಹರ್ಮನ್ಪ್ರೀತ್ ಕೌರ್ ನೇತೃತ್ವದ ಟೀಂ ಇಂಡಿಯಾ (Team India) 19ನೇ ಆವೃತ್ತಿಯ ಏಷ್ಯನ್ ಗೇಮ್ಸ್ನಲ್ಲಿ ಹ್ಯಾಂಗ್ಝೌನಲ್ಲಿ ಐತಿಹಾಸಿಕ ಚಿನ್ನವನ್ನು ಗೆದ್ದುಕೊಂಡಿತು.
ಭಾರತ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನಾ 46 ರನ್ ಗಳಿಸಿದ್ದಾಗ, 15ನೇ ಓವರ್ನಲ್ಲಿ ಮಂಧಾನಾ ಔಟ್ ಆದ ನಂತರ ಭಾರತ ತಂಡ, ಅಂತಿಮ 31 ಎಸೆತಗಳಲ್ಲಿ ಐದು ವಿಕೆಟ್ಗಳ ನಷ್ಟಕ್ಕೆ ಕೇವಲ 27 ರನ್ ಗಳಿಸಿತು. ಐಸಿಸಿ (ICC) ಹೇರಿದ ನಿಷೇಧದ ಕಾರಣದಿಂದ ಚೀನಾದಲ್ಲಿ ಭಾರತದ ಅಭಿಯಾನದ ಮೊದಲ ಎರಡು ಪಂದ್ಯಗಳನ್ನು ಕಳೆದುಕೊಂಡಿದ್ದ ನಾಯಕ ಹರ್ಮನ್ಪ್ರೀತ್ (Harmanpreet) ಕೂಡ ಐದರಲ್ಲಿ ಕೇವಲ 2 ರನ್ಗೆ ಔಟಾದ ಕಾರಣ ಭಾರತದ ತಂಡ ಕೇವಲ 116ರನ್ಗಳನ್ನು ಗಳಿಸಿ, ಬೃಹತ್ ಮೊತ್ತ ಕಲೆಹಾಕಲು ವಿಫಲವಾಯಿತು.

117 ರನ್ಗಳ ಗುರಿ ಬೆನ್ನಟ್ಟಿ ಶ್ರೀಲಂಕಾ ತಂಡಕ್ಕೆ ಟಿ-20ಗೆ (T-20) ಪಾದಾರ್ಪಣೆ ಮಾಡಿದ ಸಾಧು ತನ್ನ ಮೊದಲ ಎರಡು ಓವರ್ಗಳಲ್ಲಿ ಮೂರು ವಿಕೆಟ್ಗಳನ್ನು ಪಡೆದ ಕಾರಣ, ಶ್ರೀಲಂಕಾ ತಂಡ ಕೇವಲ 26 ಎಸೆತಗಳಲ್ಲಿ ನಾಯಕಿ ಚಾಮರಿ ಅಥಾಪತ್ತು ಸೇರಿದಂತೆ ತನ್ನ ಪ್ರಮುಖ ಮೂರು ವಿಕೆಟ್ಗಳನ್ನು ಕಳೆದುಕೊಂಡಿತು.
ಹಾಸಿನಿ ಪೆರೆರಾ (Hasini Perera)(25) ಮತ್ತು ನೀಲಾಕ್ಷಿ ಡಿ ಸಿಲ್ವಾ (23)ಜೊತೆಯಾಟ ಬಿಟ್ಟರೆ ನಿರಂತರವಾಗಿ ವಿಕೆಟ್ಗಳು ಬೀಳುತ್ತಲೇ ಇದ್ದವು, ರಾಜೇಶ್ವರಿ ಗಾಯಕ್ವಾಡ್ ಎರಡು ವಿಕೆಟ್, ದೀಪ್ತಿ ಶರ್ಮಾ, ಪೂಜಾ ವಸ್ತ್ರಕರ್ ಮತ್ತು ದೇವಿಕಾ ವೈದ್ಯ ತಲಾ ಒಂದು ವಿಕೆಟ್ ಪಡೆದರು. ಅಂತಿಮವಾಗಿ ಶ್ರೀಲಂಕಾ ತಂಡ 20 ಓವರ್ಗಳಲ್ಲಿ ಎಂಟು ವಿಕೆಟ್ಗೆ 97 ರನ್ಗಳಿಸಲು ಮಾತ್ರ ಶಕ್ತವಾಯಿತು. ಭಾರತ ತಂಡ 19 ರನ್ಗಳ ಭರ್ಜರಿ ಜಯಗಳಿಸಿತು.