ಎಲೆಕ್ಷನ್‌ 2023 : ಮತ ಚಲಾಯಿಸಿದ ನಂತರ ಸಾವನ್ನಪಿದವರು ಎಷ್ಟು ಮಂದಿ ಗೊತ್ತಾ ?

Karnataka : ಕರ್ನಾಟಕ ವಿಧಾನಸಭೆಗೆ (Karnataka Legislative Assembly) ಇಂದು ಮತದಾನ ಪ್ರಕ್ರಿಯೆ ಭರ್ಜರಿಯಾಗಿ ನಡೆಯಿತು. ಒಟ್ಟು ಶೇ 65.65 ರಷ್ಟು ಮತ ಚಲಾವಣೆಯಾಗಿದೆ. ಇಡೀ ಕರುನಾಡಲ್ಲಿ ಸಣ್ಣ (Assembly election) ಪುಟ್ಟ ಘರ್ಷಣೆಗಳನ್ನು ಹೊರತುಪಡಿಸಿ ಉಳಿದೆಲ್ಲೆಡೆ ಶಾಂತಿಯುತವಾಗಿ ಮತದಾನ (Voting) ನಡೆಯಿತು. ಈ ನಡುವೆ ಸಾವಿನಂಥ ಅಹಿತಕರ ಹಾಗೂ ನೋವಿನ ಘಟನೆಗಳೂ ನಡೆದಿವೆ.


ಮತ ಚಲಾಯಿಸಿ ಮನೆಗೆ ಹಿಂದಿರುಗಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆ (Raichur District) ದೇವದುರ್ಗ ತಾಲೂಕಿನ ಗೆಜ್ಜೆಬಾವಿಯಲ್ಲಿ ನಡೆದಿದೆ.

ರಾಮಣ್ಣ ಬೋವಿ (60ವರ್ಷ) ಮೃತಪಟ್ಟ ವ್ಯಕ್ತಿ ಎಂದು ತಿಳಿದು ಬಂದಿದೆ.

ಇಂದು ಬೆಳಿಗ್ಗೆ ಗೆಜ್ಜೆಬಾವಿ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದ್ದ ರಾಮಣ್ಣ ಮನೆಗೆ ಹೋಗಿ ವಿಶ್ರಾಂತಿ ಪಡೆಯುತ್ತಿದ್ದರು . ಈ ವೇಳೆ ಆರೋಗ್ಯದಲ್ಲಿ ಏರುಪೇರಾಗಿ ,ಬಿಪಿ ಕಮ್ಮಿಯಾಗಿ (Assembly election) ಮೃತಪಟ್ಟಿರುವುದಾಗಿ ತಿಳಿದು ಬಂದಿದೆ .


ಇನ್ನು ಹಾಸನ ಜಿಲ್ಲೆಯ (Hasana distric) ಬೇಲೂರು ತಾಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ವ್ಯಕ್ತಿಯೋರ್ವ ಮತ ಚಲಾಯಿಸಿ ಹೊರ ಬಂದ ನಂತರ ಹೃದಯಾಘಾತಕ್ಕೆ ಒಳಗಾಗಿ ಮೃತ ಪಟ್ಟಿದ್ದಾರೆ .

ಇವರನ್ನು ನಲವತ್ತೊಂಬತ್ತು ವರುಷದ ಜಯಣ್ಣ ಎಂದು ಗುರುತಿಸಲಾಗಿದೆ. ಬೆಳಗಾವಿ ಜಿಲ್ಲೆ ಸವದತ್ತಿ-ಯಲ್ಲಮ್ಮ ಕ್ಷೇತ್ರದ ವ್ಯಾಪ್ತಿಯ ಗ್ರಾಮದಲ್ಲಿ ಮತದಾನಕ್ಕೂ ಮುನ್ನ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : https://vijayatimes.com/worms-all-over-the-body/

ಪಾರವ್ವ ಎಂಬುವವರು ಮತಗಟ್ಟೆಗೆ ಬಂದು ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದ ವೇಳೆ ಬಿಪಿ ಕಮ್ಮಿಯಾಗಿ ಮತಗಟ್ಟೆಯಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ .


ಆನೆ ತುಳಿತಕ್ಕೆ ಸಿಕ್ಕು ಸಾವು:

ಆನೆಗಳು ಹೆಚ್ಚಾಗಿ ಕಾಣಿಸಿ ಕೋಳ್ಳುವ ಚಾಮರಾಜನಗರದಲ್ಲಿ ಇಂದು ಕೂಡ ಓರ್ವ ಆನೆ ದಾಳಿಗೆ ಸಾವನ್ನಪ್ಪಿದ್ದಾನೆ .

ಹಳೇ ಮಾರ್ಟಳ್ಳಿಯಿಂದ ಹನೂರು ತಾಲೂಕಿನ ತೋಕೆರೆಗೆ ಕಾಲು ದಾರಿಯಲ್ಲಿ ಹೋಗುತ್ತಿದ್ದಾಗ ಮಹದೇಶ್ವರ ಬೆಟ್ಟದ ಏರನಕಲ್ಲು ಎಂಬಲ್ಲಿ ದಾಳಿ ನಡೆಸಿದ ಆನೆ ಮತ ಚಲಾಯಿಸಲು ಹೋಗುತ್ತಿದ್ದ ಪುಟ್ಟಸ್ವಾಮಿ (35) ಬಲಿ ಪಡೆದಿದೆ .

ಇದನ್ನೂ ಓದಿ : https://vijayatimes.com/10-lakhs-for-astrologers-reward/


ಚಿತ್ರದುರ್ಗ ಜಿಲ್ಲೆಯಲ್ಲಿ (Chitradurga distric) ವೃದ್ಧರೊಬ್ಬರು ತಮ್ಮ ಅಮೂಲ್ಯ ಮತ ಚಲಾಯಿಸಿದ ನಂತರ ಸಾವನ್ನಪ್ಪಿದ ಘಟನೆ ನಡೆದಿದೆ.

ಚಳ್ಳಕೆರೆ ತಾಲೂಕಿನ ರೇಣುಕಾಪುರ ಗ್ರಾಮದ ಅಮೀರ್ ಸಾಬ್‌ ಮೃತರು. ಮತದಾನದ ನಂತರ ಅಮೀತ್ ಸಾಬ್ ಅವರಿಗೆ ಹೃದಯಾಘಾತವಾಗಿದೆ.

ಕೂಡಲೇ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.

Exit mobile version