‘ಕ್ವಾಡ್’ ಮೂಲಕ 2022ರ ಅಂತ್ಯದ ವೇಳೆಗೆ ಭಾರತದಲ್ಲಿ ಕನಿಷ್ಠ 100 ಕೋಟಿ ಡೋಸ್ ಉತ್ಪಾದನೆ : ಅಮೆರಿಕಾ

ವಾಷಿಂಗ್ಟನ್, ಆ. 05: ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ‘ಕ್ವಾಡ್’ ದೇಶಗಳು 2022ರ ಅಂತ್ಯದ ವೇಳೆಗೆ ಭಾರತದಲ್ಲಿ ಕನಿಷ್ಠ 100 ಕೋಟಿ ಡೋಸ್‌ಗಳನ್ನು ಉತ್ಪಾದಿಸಲಿವೆ ಎಂದು ಹೇಳಿರುವ ಶ್ವೇತಭವನ, ವಿಶ್ವದಾದ್ಯಂತ ಅಗತ್ಯವಿರುವವರಿಗೆ ಉಚಿತವಾಗಿ ಲಸಿಕೆ ನೀಡುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ.

‘ಕ್ವಾಡ್‌’ ಗುಂಪು ಆಸ್ಟ್ರೇಲಿಯಾ, ಭಾರತ, ಜಪಾನ್‌ ಮತ್ತು ಅಮೆರಿಕ ದೇಶಗಳನ್ನು ಒಳಗೊಂಡಿದ್ದು, ಕ್ವಾಡ್‌ ನಾಯಕರು ಮಾರ್ಚ್‌ನಲ್ಲಿ ನಡೆದಿದ್ದ ಮೊದಲ ವರ್ಚುವಲ್‌ ಶೃಂಗಸಭೆಯಲ್ಲಿ ಆಗ್ನೇಯ ಏಷ್ಯಾ ದೇಶಗಳಿಗೆ 100 ಕೋಟಿ ಡೋಸ್‌ ಲಸಿಕೆ ಒದಗಿಸಲು ಒಪ್ಪಿಕೊಂಡಿದ್ದರು ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್‌ ಸಾಕಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಮೆರಿಕ ಇಲ್ಲಿಯವರೆಗೆ ಜಗತ್ತಿಗೆ 11 ಕೋಟಿ ಲಸಿಕೆಗಳನ್ನು ನೀಡಿದೆ. ಇಷ್ಟು ಪ್ರಮಾಣದ ಲಸಿಕೆಯನ್ನು ಬೇರೆ ಯಾವುದೇ ದೇಶಗಳು ಇಲ್ಲಿಯವರೆಗೂ ಇತರರೊಂದಿಗೆ ಹಂಚಿಕೊಂಡಿಲ್ಲ. ಇದಿನ್ನೂ ಆರಂಭವಷ್ಟೆ. ಅಮೆರಿಕವು ಫೈಜರ್‌ ಲಸಿಕೆಯ 50 ಕೋಟಿ ಡೋಸ್‌ಗಳನ್ನು ದಾನ ಮಾಡಲಿದ್ದು, ಈ ತಿಂಗಳ ಕೊನೆಯಲ್ಲಿ ಅದಕ್ಕೆ ಚಾಲನೆ ಸಿಗಲಿದೆ ಎಂದರು.

‘ಕ್ವಾಡ್’ ಮೂಲಕ 2022ರ ಅಂತ್ಯದ ವೇಳೆಗೆ ಭಾರತದಲ್ಲಿ ಕನಿಷ್ಠ 100 ಕೋಟಿ ಡೋಸ್ ಉತ್ಪಾದನೆ : ಅಮೆರಿಕಾ
ವಾಷಿಂಗ್ಟನ್: ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ‘ಕ್ವಾಡ್’ ದೇಶಗಳು 2022ರ ಅಂತ್ಯದ ವೇಳೆಗೆ ಭಾರತದಲ್ಲಿ ಕನಿಷ್ಠ 100 ಕೋಟಿ ಡೋಸ್‌ಗಳನ್ನು ಉತ್ಪಾದಿಸಲಿವೆ ಎಂದು ಹೇಳಿರುವ ಶ್ವೇತಭವನ, ವಿಶ್ವದಾದ್ಯಂತ ಅಗತ್ಯವಿರುವವರಿಗೆ ಉಚಿತವಾಗಿ ಲಸಿಕೆ ನೀಡುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ.

‘ಕ್ವಾಡ್‌’ ಗುಂಪು ಆಸ್ಟ್ರೇಲಿಯಾ, ಭಾರತ, ಜಪಾನ್‌ ಮತ್ತು ಅಮೆರಿಕ ದೇಶಗಳನ್ನು ಒಳಗೊಂಡಿದ್ದು, ಕ್ವಾಡ್‌ ನಾಯಕರು ಮಾರ್ಚ್‌ನಲ್ಲಿ ನಡೆದಿದ್ದ ಮೊದಲ ವರ್ಚುವಲ್‌ ಶೃಂಗಸಭೆಯಲ್ಲಿ ಆಗ್ನೇಯ ಏಷ್ಯಾ ದೇಶಗಳಿಗೆ 100 ಕೋಟಿ ಡೋಸ್‌ ಲಸಿಕೆ ಒದಗಿಸಲು ಒಪ್ಪಿಕೊಂಡಿದ್ದರು ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್‌ ಸಾಕಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಮೆರಿಕ ಇಲ್ಲಿಯವರೆಗೆ ಜಗತ್ತಿಗೆ 11 ಕೋಟಿ ಲಸಿಕೆಗಳನ್ನು ನೀಡಿದೆ. ಇಷ್ಟು ಪ್ರಮಾಣದ ಲಸಿಕೆಯನ್ನು ಬೇರೆ ಯಾವುದೇ ದೇಶಗಳು ಇಲ್ಲಿಯವರೆಗೂ ಇತರರೊಂದಿಗೆ ಹಂಚಿಕೊಂಡಿಲ್ಲ. ಇದಿನ್ನೂ ಆರಂಭವಷ್ಟೆ. ಅಮೆರಿಕವು ಫೈಜರ್‌ ಲಸಿಕೆಯ 50 ಕೋಟಿ ಡೋಸ್‌ಗಳನ್ನು ದಾನ ಮಾಡಲಿದ್ದು, ಈ ತಿಂಗಳ ಕೊನೆಯಲ್ಲಿ ಅದಕ್ಕೆ ಚಾಲನೆ ಸಿಗಲಿದೆ ಎಂದರು.

Exit mobile version