ಅದ್ಭುತ ಪಕ್ಷಿಗಳ ಲೋಕ `ಅತ್ತಿವೇರಿ’ ಪಕ್ಷಿಧಾಮ

Atthiveri Bird

ಬಣ್ಣ ಬಣ್ಣದ ಪಕ್ಷಿಗಳನ್ನು(Bird) ವೀಕ್ಷಿಸಲು ಎಲ್ಲಾ ಸಮಯದಲ್ಲೂ ಸಾಧ್ಯವಿಲ್ಲ ಮತ್ತು ಎಲ್ಲಾ ಸ್ಥಳಗಳಲ್ಲಿ ಸಾಧ್ಯವಿಲ್ಲ ಆ ರಮಣೀಯ ಸ್ಥಳವನ್ನು ನೋಡಬೇಕೆಂದರೆ ಕಾರವಾರ(Karwar) ಜಿಲ್ಲೆಯ ಮುಂಡಗೋಡ(Mundagoda) ತಾಲೂಕಿನ ಅತ್ತಿವೇರಿ ಗ್ರಾಮದ ಅತ್ತಿವೇರಿ ಪಕ್ಷಿಧಾಮದಲ್ಲಿ(Atthiweri Bird Sanctuary) ಮಾತ್ರ ಸಾಧ್ಯ . ಹಿಂದೆ ಈ ಪ್ರದೇಶದಲ್ಲಿ ಹೇರಳವಾಗಿ ಅತ್ತಿ ಹಣ್ಣು ಬೆಳೆಯುವುದರಿಂದ ಈ ಪ್ರದೇಶಕ್ಕೆ ಅತ್ತಿವೇರಿ ಗ್ರಾಮವೆಂದು ಹೆಸರಿಸಲಾಯಿತು. ಅತ್ತಿ ಹಣ್ಣು ಅರಿಸಿ ವಿವಿಧ ಪ್ರಭೇದದ ಪಕ್ಷಿಗಳು ಬರಲು ಪ್ರಾರಂಭಿಸಿದವು.

ಅಂದು ಪರಿಸರ ಮತ್ತು ಪಕ್ಷಿ ಪ್ರೇಮಿ ಡಾ. ಪಿ. ಡಿ. ಸುದರ್ಶನವರ ದೂರ ದೃಷ್ಠಿಯಿಂದ ಅತ್ತಿವೇರಿ ಪಕ್ಷಿಧಾಮ ರೂಪಿತಗೊಂಡಿದೆ. ಈ ಪ್ರದೇಶಕ್ಕೆ 2000 ಇಸ್ವಿಯಲ್ಲಿ ಕರ್ನಾಟಕ ಸರ್ಕಾರ ಈ ಪ್ರದೇಶವನ್ನು ಅತ್ತಿವೇರಿ ಪಕ್ಷಿಧಾಮ ಎಂದು ಷೋಷಣೆ ಮಾಡಿತು. ಈ ಪಕ್ಷಿಧಾಮವು ಸುಮಾರು 22 ಚದರ ಕಿ.ಮೀ ನಷ್ಷು ವಿಶಾಲವಾಗಿ ವ್ಯಾಪಿಸಿದೆ. ಅದರಲ್ಲಿ ಒಂದು ಬೃಹತ್ ಜಲಾಶಯ ಸಹ ಇದ್ದು, ಅದು ಅತಿ ವಿಶಾಲವಾಗಿ ವಿಸ್ತರಿಸಿದೆ ಮತ್ತು ಬಹಳ ಪ್ರಶಾಂತ ಸ್ಥಳವನ್ನು ಸಹ ಹೊಂದಿದೆ. ಈ ಸ್ಥಳವು ಮುಂಡಗೋಡದಿಂದ ಹುಬ್ಬಳಿಗೆ(Hubbali) ಹೋಗುವ ಮಾರ್ಗ ಮಧ್ಯದಲ್ಲಿ ಸಿಗುತ್ತದೆ ಮುಂಡಗೋಡದಿಂದ ಸುಮಾರ 17 ಕಿ.ಮಿ ನಷ್ಟು ಅಂತರ ದೂರದಲ್ಲಿದೆ .

ಪ್ರತಿ ವರ್ಷ ನವಂಬರ್ ತಿಂಗಳಲ್ಲಿ  ಅತ್ತಿವೇರಿ ಪಕ್ಷಿಧಾಮಕ್ಕೆ  ವಿವಿಧ ರಾಜ್ಯ ಮತ್ತು ರಾಷ್ಟ್ರಗಳಿಂದ  ವಿವಿಧ ವಿಭಿನ್ನ ಪ್ರಭೇದದ ಪಕ್ಷಿಗಳು ವಲಸೆ ಬರುತ್ತವೆ ಮತ್ತು ಗೂಡು ಕಟ್ಟಿ ಮೊಟ್ಟೆ ಇಟ್ಟು ಸಂತಾನ ಉತ್ಪತ್ತಿ ಮಾಡುತ್ತವೆ. ಸುಮಾರು ಏಪ್ರಿಲ್ ತಿಂಗಳಲ್ಲಿ ತಮ್ಮ ವಾಸ ಸ್ಥಾನಕ್ಕೆ ಹಿಂದಿರುಗುತ್ತವೆ .ಸುಮಾರು 100 ಕ್ಕಿಂತ ಹೆಚ್ಚು ಪ್ರಭೇದದ ಪಕ್ಷಿಗಳು ಇಲ್ಲಿ ಕಾಣಸಿಗುತ್ತವೆ. ಸಹಜವಾಗಿ ಇಲ್ಲಿ ಕಾಣಸಿಗುವ ಪಕ್ಷಿಗಳು ಹೆಚ್ಚಾಗಿ ವಾರ ಬ್ಲರ, ಪಟ್ಟೆಬಾತು, ನೀರು ಕಾಗೆ, ಸ್ಪೂನ ಬಾಲ, ಮೈನಾ, ಗಿಡುಗ, ತಂತಿ ಬಾಲದ ಗುಬ್ಬಿಗಳು, ಕೊಕ್ಕರೆ ಬಾತುಕೋಳಿಗಳು  ಹಾಗೂ ಇನ್ನಿತರ ವಿಶಿಷ್ಟವಾದ ಪಕ್ಷಿಗಳು ಕಾಣಸಿಗುತ್ತವೆ. 

ಈ ಪಕ್ಷಿಧಾಮದಲ್ಲಿ  ಮಕ್ಕಳಿಗೆ ರಂಜಿಸಲು ಉದ್ಯಾನವನವನ್ನು   ನಿರ್ಮಿಸಿದ್ದಾರೆ. ಆ ಉದ್ಯಾನವನದಲ್ಲಿ ಮಕ್ಕಳಿಗೆ ಆಡಲು ಜೋಕಾಲಿ  ಮತ್ತು ಜಾರು ಬಂಡಿಯನ್ನು ಸಹ ನಿರ್ಮಿಸಿದ್ದಾರೆ ಹಾಗೂ ಮಧ್ಯಾಹ್ನದ ಊಟಕ್ಕೆ ಅಲ್ಲಿಯೇ ಕ್ಯಾಂಟೀನ್ ವ್ಯವಸ್ಥೆ ಸಹ ಮಾಡಿದ್ದಾರೆ. ಪಕ್ಕದಲ್ಲಿ ಬೃಹತ್ ಜಲಾಶಯ ಸಹ ಇದೆ ಅದರಲ್ಲಿ ಯಥೇಚ್ಚವಾಗಿ ವಿವಿಧ ತರಹದ ಮೀನುಗಳು ಮತ್ತು ಪಕ್ಷಿಗಳು ಆಡುವದು ವೀಕ್ಷಿಸಬಹುದು ಮತ್ತು ಪಕ್ಷಿಗಳ ಚಿಲಿಪಿಲಿ ನಾದವನ್ನು ಸಹ ಕೇಳಬಹುದು.ಮೀನುಗಳಿಗೆ ಪ್ರವಾಸಿಗರು ತಿನ್ನಲು ಮಂಡಕ್ಕಿ  ಇಂತಹ ಪದಾರ್ಥವನ್ನು ಹಾಕುತ್ತಾರೆ. ಆಹಾರ ತಿನ್ನಲು ಮೀನುಗಳು ಮೇಲೆ ಎಗರುವದನ್ನು ನೋಡವುದೇ ರೋಮಾಂಚನ. 

ಪಕ್ಷಿಗಳ ಸೊಬಗನ್ನು ಸವಿಯಲು ಮತ್ತು ವೀಕ್ಷಿಸಲು ಸೂಕ್ತವಾದ ಸಮಯ ನವೆಂಬರ್ ತಿಂಗಳಿಂದ ಮಾರ್ಚ್ ತಿಂಗಳವರೆಗೆ ಈ ಸಮಯದಲ್ಲಿ ಪ್ರವಾಸಿಗರು ಮತ್ತು ಪರಿಸರ ಪ್ರೇಮಿಗಳು ಈ ಪಕ್ಷಿಧಾಮಕ್ಕೆ ಹೆಚ್ಚಾಗಿ ಬರುತ್ತಾರೆ. ಅತ್ತಿವೇರಿ ಪಕ್ಷಿಧಾಮದ  ಸೂತ್ತಲು ದಟ್ಟ ಅರಣ್ಯ  ಸದಾ ಹಚ್ಚ ಹಸಿರಿನಿಂದ ತುಂಬಿರುವುದರಿಂದ ಕಾಡು ಪ್ರಾಣಿಗಳಾದ ಕಾಡು ಹಂದಿ, ಮೊಲ, ನರಿ, ಮಂಗಗಳು, ಮುಂಗುಸಿ, ನವಿಲುಗಳು, ಅಲ್ಲಲ್ಲಿ ನೋಡಲು ಸಹಜವಾಗಿ ಸಿಗುತ್ತವೆ. ಈ ರಮಣೀಯ ದೃಶ್ಯ ನೋಡಿದರೆ ನಾವು ಯಾವುದೋ ಸ್ವರ್ಗದಲ್ಲಿ ಇರುವ ಭಾವನೆ ಬಾಸವಾಗುತ್ತದೆ.

                                                                       - ರಾಘವೇಂದ್ರ ಬೆಂಡ್ಲಗಟ್ಟಿ,  ಮುಂಡಗೋಡ (ಉ.ಕ)
Exit mobile version