ಈ ಚಾಲಕ ತನ್ನ ಆಟೋ ಹತ್ತುವ ಪ್ರಯಾಣಿಕರಿಗೆ ಉಚಿತವಾಗಿ ಕೊಡ್ತಾರೆ ಸಿಹಿ, ಫಸ್ಟ್ ಏಡ್, ಸ್ಯಾನಿಟೈಸರ್!

ಬೆಳಗ್ಗೆ ಕೆಲಸಕ್ಕೆಂದು ಅಥವಾ ಕಾಲೇಜ್ಗೆ ಹೊರಟಾಗ ಆಟೋ ಸಿಗದೇ ಪರದಾಡುವ ಅನುಭವ ಹೆಚ್ಚಿನವರಿಗೆ (Auto Driver Gives Candies) ಇದ್ದೇ ಇರುತ್ತದೆ. ಇದೇ ಸೂಕ್ತ ಸಮಯ ಎಂದು ಹೆಚ್ಚು ಹಣ ಕೇಳುವ ಕೆಲವು ಚಾಲಕರೂ ಇರುತ್ತಾರೆ,

ಇಂತವರ ಮಧ್ಯೆ ತನ್ನ ಆಟೋ (Auto) ಹತ್ತುವ ಗ್ರಾಹಕರ ಅನುಭವ ಚೆನ್ನಾಗಿರಬೇಕು ಎನ್ನುವ ಕಾಳಜಿ ವಹಿಸುವ ಕೆಲವು ಚಾಲಕರೂ ಇದ್ದಾರೆ.

ಇಂತಹ ಒಬ್ಬ ಚಾಲಕನ ಕಥೆಯನ್ನು ಉತ್ತಮ್ ಕಶ್ಯಪ್ ಎನ್ನುವ ವ್ಯಕ್ತಿಯೊಬ್ಬರು ಟ್ವಿಟರ್‌ನಲ್ಲಿ(Twitter) ಹಂಚಿಕೊಂಡಿದ್ದಾರೆ.
ಹೌದು, ಉತ್ತಮ್ ಕಶ್ಯಪ್ ಅವರು ಟ್ವಿಟರ್‌ನಲ್ಲಿ ರಾಜೇಶ್ ಎಂಬ ಸಹೃದಯಿ ಆಟೋ ಚಾಲಕನ ವಿಶಿಷ್ಟ ಆಟೋದ ಬಗ್ಗೆ ವಿವರವಾಗಿ ಬರೆದುಕೊಂಡಿದ್ದಾರೆ.

ತಮ್ಮ ಪೋಸ್ಟ್ಗೆ, “ವಿಶಿಷ್ಟ ಆಟೋ ಮಾಲೀಕ ರಾಜೇಶ್ ಅವರನ್ನು ಭೇಟಿ ಮಾಡಿ” ಎಂಬ ಕ್ಯಾಪ್ಶನ್ ಕೊಟ್ಟಿದ್ದು, ರಾಜೇಶ್ ಅವರ ಆಟೋದ ಒಳಭಾಗದ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.

ಅಷ್ಟಕ್ಕೂ, ರಾಜೇಶ್ ಅವರ ಆಟೋದ ವಿಶೇಷತೆ ಏನು ಎನ್ನುವ ಪ್ರಶ್ನೆಗೆ (Auto Driver Gives Candies) ಉತ್ತರ ಇಲ್ಲಿದೆ.

https://fb.watch/gy61LkU_pR/ ಕಿಲ್ಲರ್‌ ಕೋಕ್‌ ! ಪ್ಲೀಸ್‌… ಮಕ್ಕಳನ್ನ ದೂರ ಇಡಿ.

ಬೆಂಗಳೂರು ಮಹಾನಗರದಲ್ಲಿ ಆಟೋದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ, ಟ್ರಾಫಿಕ್ ನಲ್ಲಿ ಸಿಲುಕಿಕೊಂಡು ತಲೆಬಿಸಿ ಮಾಡಿಕೊಳ್ಳುವ ಗ್ರಾಹಕರ ಸಲುವಾಗಿ, ರಾಜೇಶ್ ಅವರು ತಮ್ಮ ಆಟೋದ ಒಳಗಡೆ ಸಾಧ್ಯವಾದಷ್ಟು ಸೌಲಭ್ಯಗಳನ್ನು ಕಲ್ಪಿಸಿದ್ದಾರೆ.

https://vijayatimes.com/morbi-bridge-collapse/

ಒಂದಿಷ್ಟು ಚಾಕಲೇಟ್ ಗಳು, ಸಮಯ ಕಳೆಯಲು ಪುಸ್ತಕ ದಿನಪತ್ರಿಕೆಗಳು, ಸ್ಯಾನಿಟೈಸರ್ ಹಾಗೂ ಫಸ್ಟ್ ಏಡ್ ಬಾಕ್ಸ್ ಕೂಡ ಇಟ್ಟಿದ್ದಾರೆ!

ಇದರ ಬಗ್ಗೆ ಕೇಳಿದರೆ ರಾಜೇಶ್ ಹೀಗೆ ಹೇಳುತ್ತಾರೆ, “ನನಗೆ ಗ್ರಾಹಕರೇ ಎಲ್ಲಾ, ಅವರು ಖುಷಿಯಾಗಿದ್ದರೆ ನನಗೂ ಸಂತೋಷ. ಹಾಗಾಗಿ ಕೈಲಾದಷ್ಟು ಪ್ರಯತ್ನ ಪಡುತ್ತಿದ್ದೇನೆ” ಎನ್ನುತ್ತಾರೆ. ಇನ್ನು, ರಾಜೇಶ್ ಆಟೋದಲ್ಲಿ ಪ್ರಯಾಣಿಸಿದ ಉತ್ತಮ್ ಕಶ್ಯಪ್ ಅವರಿಗೆ ಸಂತಸವಾದ ಕಾರಣ, ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

https://twitter.com/uuttamk/status/1585937454934020096?s=20&t=n6G_R751iMVQXlv9Td1-xA

ಇವರ ಈ ಪೋಸ್ಟ್ ಗೆ 890ಕ್ಕೂ ಹೆಚ್ಚು ಲೈಕ್‌ಗಳು ಮತ್ತು ಅನೇಕ ಪ್ರತಿಕ್ರಿಯೆಗಳು ಬಂದಿದ್ದು, ತನ್ನ ಆಟೋದಲ್ಲಿ ಪ್ರಯಾಣಿಸುವ ಗ್ರಾಹಕರ ದಿನವನ್ನು ಚೆನ್ನಾಗಿರಿಸಲು ಪ್ರಯತ್ನ ಮಾಡುತ್ತಿರುವುದಕ್ಕಾಗಿ ರಾಜೇಶ್ ಅವರಿಗೆ ಧನ್ಯವಾದ ಹೇಳುವುದರಿಂದ ಹಿಡಿದು,

ಅವರ ಕೆಲಸವನ್ನು ಮೆಚ್ಚಿಕೊಂಡು ಹಲವಾರು ಜನ ಕಾಮೆಂಟ್ ವಿಭಾಗದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Exit mobile version