ಚಳಿ ಹೆಚ್ಚುತ್ತಿದ್ದಂತೆ ಸೋಂಕುಗಳ ಲಕ್ಷಣಗಳು ಎಲ್ಲೆಡೆ ತೀವ್ರವಾಗುತ್ತಿವೆ. ಸುಸ್ತು, ಕೆಮ್ಮು, ನೆಗಡಿ, ಜ್ವರ, ಗಂಟಲುನೋವು (away from infections in winter) ಮುಂತಾದ ರೋಗ ಲಕ್ಷಗಳು ಕಂಡು
ಬರುತ್ತಿವೆ. ಎಲ್ಲೆಡೆ ಪ್ರೌಢರಲ್ಲೂ ಈ ಲಕ್ಷಣಗಳು ತೊಂದರೆ ಕೊಡುತ್ತಿವೆ. ಮಕ್ಕಳು ಅಷ್ಟೇಅಲ್ಲ. ದೊಡ್ಡವರಾಳಿಯೂ ಸಹ ಚೇತರಿಸಿಕೊಳ್ಳಲು ಆಗದಂತೆ ಗಂಭೀರ ಸ್ಥಿತಿಗೆ ತಂದು ಬಿಡುತ್ತವೆ ಹಾಗಾದರೆ
ಚಳಿಗಾಲದ ಸೋಂಕುಗಳು ಮಕ್ಕಳನ್ನು ಕಾಡದಂತೆ (away from infections in winter) ತಡೆಯುವುದು ಹೇಗೆ ತಿಳಿಯೋಣ.
ಒಬ್ಬರಿಂದೊಬ್ಬರಿಗೆ ವೇಗವಾಗಿ ಹರಡುವ ಈ ವೈರಸ್‌ಗಳು ಮಕ್ಕಳಲ್ಲಿ ಪ್ರಸರಣವಾಗುವುದು ಇನ್ನೂ ವೆಗವಾಗಿದೆ ಶಾಲೆಯಲ್ಲಿ ಅಥವಾ ಡೇ ಕೇರ್‌ನಲ್ಲಿ (day care) ಒಟ್ಟಿಗೆ ಆಡುವ, ಅಕ್ಕಪಕ್ಕ
ಕುಳಿತುಕೊಳ್ಳುವ, ಒಬ್ಬರ ವಸ್ತುಗಳನ್ನು ಇನ್ನೊಬ್ಬರು ಮುಟ್ಟುವ ಸಂದರ್ಭಗಳು ಇರುವುದರಿಂದ, ಮಕ್ಕಳಲ್ಲಿ ಸೋಂಕುಗಳು ಅತಿ ವೇಗವಾಗಿ ಹರಡುತ್ತವೆ. ಅದರಲ್ಲೂ ಕೆಲವು ತಿಂಗಳ ಹಿಂದೆ ಉಂಟಾದ
ಸೋಂಕಿನಿಂದ ಪ್ರತಿರೋಧಕ ಶಕ್ತಿ ಜಾಗೃತವಾಗಿರುತ್ತದೆ ಎಂದು ಮಕ್ಕಳ ವಿಷಯದಲ್ಲಿ ಹೇಳಲಾಗದು. ಹಾಗಾಗಿ ಚಿಣ್ಣರು ಆಗಾಗ ಆರೋಗ್ಯ ಸಮಸ್ಯೆ (Health Issue) ಎದುರಿಸುವುದು
ಸಾಮಾನ್ಯ ಎಂಬಂತೆ ಆಗುತ್ತಿದೆ.
ಆಹಾರ
ಹಸಿರು ತರಕಾರಿಗಳು- ಸೊಪ್ಪು, ಋತುಮಾನದ ಹಣ್ಣುಗಳು, ಧಾನ್ಯಗಳು, ಮೊಳಕೆ ಕಾಳುಗಳು, ಡೈರಿ ಉತ್ಪನ್ನಗಳು, ಬೀಜಗಳು, ಮೊಟ್ಟೆ, ಮೀನು ಮುಂತಾದವು ಉವು ವಿಟಮಿನ್ ಹೊಂದಿರುವ ಆಹಾರ
ಪದಾರ್ಥ ಮಕ್ಕಳಿಗೆ ಕೊಡುವುದರಿಂದ ರೋಗ ನಿರೋಧಕಶಕ್ತಿ ಹೆಚ್ಚುತ್ತದೆ ಮತ್ತು ಸೋಂಕುಗಳಿಂದ ದೂರ ವಿರಬಹುದು. ಕರಿದ, ಸಂಸ್ಕರಿತ, ಸಕ್ಕರೆಭರಿತ, ಪ್ಯಾಕ್ ಮಾಡಿದ ಆಹಾರಗಳು ತರುವುದು
ಹಾನಿಯನ್ನೇ ಹೊರತು ಆರೋಗ್ಯವನ್ನಲ್ಲ.ಜಂಕ್ ಸೇವನೆಯಿಂದ ಪ್ರತಿರೋಧಕ ಶಕ್ತಿ ತೀವ್ರವಾಗಿ ಕುಂಠಿತಗೊಳ್ಳುತ್ತದೆ
ಲಸಿಕೆ ಬೇಕು
ಆಯಾ ವರ್ಷದ ಫ್ಲೂ ಋತುವಿನಲ್ಲಿ ಯಾವೆಲ್ಲಾ ವೈರಸ್‌ಗಳು ಬರಬಹುದು ಎಂಬ ಲೆಕ್ಕಾಚಾರದ ಮೇಲೆ ಫ್ಲೂ ಲಸಿಕೆಯನ್ನು ತಯಾರಿಸಲಾಗುತ್ತದೆ. ಆದ್ದರಿಂದ ಪ್ರತಿ ವರ್ಷ ಮಕ್ಕಳಿಗೆ ಫ್ಲೂ ಲಸಿಕೆಯನ್ನು
ಹಾಕಿಸುವುದು ಉತ್ತಮ. ಇದರಿಂದ ರೋಗ ನಿರೋಧಕಶಕ್ತಿಯನ್ನು ತಾತ್ಕಾಲಿಕವಾಗಿ ಉತ್ತೇಜಿಸಿದಂತಾಗುತ್ತದೆ. ಒಂದೊಂದು ಸೋಂಕು ತಾಗಿದರೂ, ಅದರ ತೀವ್ರತೆ ಕಡಿಮೆ ಇರುತ್ತದೆ.ಹಾಗಾಗಿ
ಸೋಂಕು ಕಡಿಮೆಯೇ ಸಮಯದಲ್ಲಿ ನಾವು ಗುಣಮುಖರಾಗುತ್ತೆವೆ.
ಅಭ್ಯಾಸಗಳು
ಕೋವಿಡ್ ಭೀತಿಯೂ ಮತ್ತೆ ಹೆಚ್ಚಾಗುವ ಹಿನ್ನೆಲೆಯಲ್ಲಿ ವೈಯಕ್ತಿಕ ಅಂತರವನ್ನು ಸಾಧ್ಯವಾದಷ್ಟು ಕಾಯ್ದುಕೊಳ್ಳುವುದು, ಅಗತ್ಯ ವಾಗಿದೆ . ಆಗಾಗ ಕೈ ಶುಚಿ ಮಾಡುವುದು,, ಸಾರ್ವಜನಿಕ ಜಾಗಗಳಲ್ಲಿ
ಓಡಾಡುವಾಗ ಎಚ್ಚರಿಕೆ ವಹಿಸುವುದು, ಕಣ್ಣು-ಬಾಯಿ-ಮೂಗು ಮುಟ್ಟದಿರುವುದು, ನೆಗಡಿ-ಕೆಮ್ಮು ಇದ್ದರೆ ಮಾಸ್ಕ್ ಧರಿಸುವುದು ಮುಂತಾದ ಕೋವಿಡ್ ಕಾಲದ ಅಭ್ಯಾಸಗಳು ಚಳಿಗಾಲದಲ್ಲಿ ಜಾರಿಯಲ್ಲಿದ್ದರೆ
ನಮಗೆ ಹೆಚ್ಚಿನ ರಕ್ಷಣೆ ದೊರೆಯುತ್ತದೆ.
ಚಟುವಟಿಕೆ
ಮಕ್ಕಳು ನಿತ್ಯವೂ ಮನೆಯಿಂದ ಹೊರಾಂಗಣ ಆಟವಾಡಲು ಹೋಗುವಾಗ ಜಾಗೃತರಾಗಿ ಎಚ್ಚರಿಕೆವಹಿಸಿ ಸೋಂಕು ಹರಡುವ ಪ್ರಮಾಣ ಕಡಿಮೆಯಾಗುತ್ತದೆ . ಬಿಸಿಲಲ್ಲಿ ಮಕ್ಕಳು ಆಡಿದಾಗ ಪ್ರತಿರೋಧಕ
ಶಕ್ತಿ ಇನ್ನಷ್ಟು ಬಲವಾಗುತ್ತದೆ.
ನಿದ್ದೆ
ಬೆಳೆಯುವ ಮಕ್ಕಳಿಗೆ 9-10 ತಾಸು ನಿದ್ದೆ ಅಗತ್ಯ. ಇದರಿಂದ ಶರೀರದಲ್ಲಿ ಆಗುವ ಏರುಪೆರುಗಳು ಬೆಳೆಯುವ ಮಕ್ಕಳಲ್ಲಿ ಸರಿಯಾಗುತ್ತದೆ ಅಗತ್ಯವಾದ ವಿಶ್ರಾಂತಿ ನೀಡಿದಂತಾಗುತ್ತದೆ.
ನೀರು
ಮಕ್ಕಳ ಉತ್ತಮ ಬೆಳೆವಣಿಗೆಗೆ ನೀರು ಕುಡಿಯುವುದು ತುಂಬಾ ಮುಖ್ಯ ಆದ್ದರಿಂದ. ದಿನಕ್ಕೆ ಎಂಟು ಗ್ಲಾಸ್ ನೀರು ಕುಡಿಯುವುದು ದೇಹದಿಂದ ಕಶ್ಮಲಗಳನ್ನು ತೆಗೆಯಲು ಇದು ಎಲ್ಲರಿಗೂ ಬೇಕಾಗುತ್ತದೆ.
ಅವರು ಕುಡಿಯುವ ನೀರಿನ ಪ್ರಮಾಣ ಸಾಕಾಗುತ್ತಿಲ್ಲ ಎನಿಸಿದರೆ, ಇನ್ನಷ್ಟು ಕುಡಿಯುವಂತೆ ಪ್ರೋತ್ಸಾಹಿಸಿ. ಸೂಪ್, ಜ್ಯೂಸ್ ಮುಂತಾದ ದ್ರವಾಹಾರಗಳ ಮೂಲಕ ದೇಹಕ್ಕೆ ಸಾಕಷ್ಟು ನೀರು ದೊರೆಯುತ್ತಿದೆ
ಎಂಬುದನ್ನು ಖಾತ್ರಿಪಡಿಸಿ.
ಇದನ್ನು ಓದಿ: ಪೋಷಕರೇ ಗಮನಿಸಿ: 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡುವ ಶೀತದ ಸಿರಪ್ ಬ್ಯಾನ್
- ಮೇಘಾ ಮನೋಹರ ಕಂಪು