ಸಾಮಾನ್ಯವಾಗಿ ಎಲ್ಲರಿಗೂ ತಲೆನೋವು ಬರುವುದು ಸಹಜ. ಆದರೆ ಮೈಗ್ರೇನ್ (Migraine) ಅಂತಹ ತಲೆನೋವು ಮಾತ್ರ ಕೆಲವರಲ್ಲಿ ಕಂಡುಬರುತ್ತದೆ. ಹಾಗಾದರೆ ಈ ಮೈಗ್ರೇನ್ ರೋಗ ಲಕ್ಷಣವನ್ನು ನಿರ್ವಹಿಸಲು ಮತ್ತು ಇದರ ದಾಳಿಯ ತೀವ್ರತೆಯನ್ನು ಕಡಿಮೆ ಮಾಡಲು ಕೆಲವು ಮನೆಮದ್ದುಗಳಿವೆ. ಇದನ್ನೇನಾದರೂ ನೀವು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಇಂತಹ ಭಯಂಕರ ತಲೆನೋವಿನಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹಾಗಾದರೆ ಆ ಮನೆಮದ್ದು ಯಾವುದು ಅನ್ನುವುದನ್ನು ಓದಿ ತಿಳಿಯೋಣ.

1. ನೆತ್ತಿಗೆ ಮಸಾಜ್ ಮಾಡಬೇಕು:
ನೆತ್ತಿಗೆ ಹೆಚ್ಚಿನ ಒತ್ತಡವನ್ನು ಹಾಕಿ ನಿಧಾನವಾಗಿ ಮಸಾಜ್ (Massage) ಮಾಡುವುದರಿಂದ ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಣೆಯಾಗುವುದಲ್ಲದೆ ಇದು ನಿಧಾನವಾಗಿ ನೋವನ್ನು ಕಡಿಮೆ ಮಾಡುತ್ತದೆ.
2. ವ್ಯಾಯಾಮ:
ಮೈಗ್ರೇನ್ ಬಂದ ನಂತರ ವ್ಯಾಯಾಮ ಮಾಡುವುದು ಉತ್ತಮವಲ್ಲ. ಬದಲಿಗೆ ದಿನನಿತ್ಯ ವಾಕಿಂಗ್ (Walking), ಸೈಕ್ಲಿಂಗ್, ರನ್ನಿಂಗ್ (Running) ಮಾಡುವುದರಿಂದ ಈ ಭಯಂಕರ ತಲೆನೋವನ್ನು ಸುಲಭವಾಗಿ ನಿಯಂತ್ರಿಸುವುದಲ್ಲದೆ ಹೆಚ್ಚಾಗಿ ಇದು ಕಾಡುವುದಿಲ್ಲ.
3. ಕತ್ತಲೆ ಕೋಣೆಯಲ್ಲಿ ಇರಬೇಕು:
ಒಂದು ವೇಳೆ ಈ ತಲೆನೋವು ನಿಮ್ಮನ್ನು ಹೆಚ್ಚಾಗಿ ಕಾಡುತ್ತಿದ್ದರೆ ತಕ್ಷಣವೇ ಬೆಳಕಿಲ್ಲದ ಕೊನೆಯಲ್ಲಿ ವಿಶ್ರಾಂತಿ ಪಡೆಯುವುದು ಒಳ್ಳೆಯದು. ತಲೆನೋವು ಇದ್ದಾಗ ಪ್ರಕಾಶಮಾನವಾದ ಬೆಳಕು ಇನ್ನಷ್ಟು ತಲೆನೋವನ್ನು ಉಲ್ಬಣಗೊಳಿಸುತ್ತದೆ.

4. ಸಾಕಷ್ಟು ನೀರನ್ನು ಕುಡಿಯುವುದು:
ನೆನಪಿಡಿ ಸಾಮಾನ್ಯವಾಗಿ ಈ ಮೈಗ್ರೇನ್ ತಲೆನೋವಿಗೆ ಈ ನಿರ್ಜಲೀಕರಣವೇ ಮುಖ್ಯ ಕಾರಣವಾಗಿದೆ ಹಾಗಾಗಿ ನೀರನ್ನು ಪ್ರತಿನಿತ್ಯ ಕುಡಿಯುವುದನ್ನು ಯಾವುದೇ ಕಾರಣಕ್ಕೂ ತಪ್ಪಿಸಲೇಬಾರದು.
5. ಬಲವಾದ ಸುವಾಸನೆ ತಪ್ಪಿಸಿ :
ಆಸ್ಮೋಪೊಬಿಯಾ (Asmopobia)ಅನ್ನುವುದು ಬಲವಾದ ವಾಸನೆಯ ಸೂಕ್ಷ್ಮತೆಯನ್ನು ಹೊಂದಿದ್ದು, ಮೈಗ್ರೇನ್ ಸಾಮಾನ್ಯ ಲಕ್ಷಣವಾಗಿದೆ. ಸುಗಂಧ ದ್ರವ್ಯಗಳು, ಕಟುವಾದ ಆಹಾರಗಳು, ಗ್ಯಾಸೋಲಿನ್ (Gasoline) ಮತ್ತು ರಾಸಾಯನಿಕ ವಾಸನೆಯನ್ನು ತಪ್ಪಿಸಲು ಪ್ರಯತ್ನಿಸುವುದು ಉತ್ತಮ ಯಾಕೆಂದರೆ ಈ ಪರಿಮಳಗಳು ಮೈಗ್ರೇನ್ ದಾಳಿಯನ್ನು ಹೆಚ್ಚಿಸುತ್ತದೆ.
6. ತಂಪಾದ ವಾತಾವರಣ:
ಅತಿಯಾಗಿ ಬಿಸಿಯಾಗುವುದು ಕೂಡ ಈ ತಲೆನೋವಿಗೆ ಕಾರಣವಾಗಬಹುದು. ಆದ್ದರಿಂದ ನೀವು ಇದರಿಂದ ಬಳಲುತ್ತಿದ್ದರೆ ಎ.ಸಿ (A C) ಅಥವಾ ಫ್ಯಾನ್ (Fan) ಕೆಳಗೆ ಮಲಗಿದರೆ ಒಳ್ಳೆಯದು.
7. ಶುಂಠಿ ತಿನ್ನುವುದು:
ಇನ್ನು ಈ ತಲೆನೋವು ಕಾಣಿಸಿಕೊಂಡಾಗ ವಾಕರಿಕೆ ಬರುವುದು ಸಹಜ ಹಾಗಾಗಿ ನಿರ್ಲಕ್ಷ್ಯ ಮಾಡದೆ ಶುಂಠಿಯ ಚೂರುಗಳನ್ನು ಜಗಿಯುವುದು ಉತ್ತಮ.
ಭವ್ಯಶ್ರೀ ಆರ್.ಜೆ