Karwar , ಆಗಸ್ಟ್ 02: ಪೋಷಕರೇ ಎಚ್ಚರ! ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ದಯವಿಟ್ಟು ಅವರ ಕೈಗೆ ನಿಮ್ಮ ಮೊಬೈಲ್ ಚಾರ್ಜರ್ (Baby died because charger) ಸಿಗದಂತೆ
ನೋಡಿಕೊಳ್ಳಿ. ಯಾಕಂದ್ರೆ ನಿಮ್ಮ ಮೊಬೈಲ್ ಚಾರ್ಜರ್ ಮಗುವಿನ ಪ್ರಾಣಕ್ಕೇ ಕಂಟಕ ತರಬಹುದು. ಸ್ಪಲ್ಪ ಎಚ್ಚರ ತಪ್ಪಿದರೂ ಎಂತಹ ದಾರುಣ ಅವಘಡ ಸಂಭವಿಸಬಹುದು ಎನ್ನುವುದಕ್ಕೆ
ಉತ್ತರ ಕನ್ನಡದಲ್ಲಿ (Uttara Kannada) ನಡೆದ ಈ ಒಂದು ಮನಕಲುಕುವ ಘಟನೆಯೇ ಇದೀಗ ಸಾಕ್ಷಿಯಾಗಿದೆ. ಕಾರವಾರ ತಾಲೂಕಿನ ಸಿದ್ದರದಲ್ಲಿ (Siddara) ಇಂದು ಬುಧವಾರದಂದು 8
ತಿಂಗಳ ಮಗುವೊಂದು ಸ್ವೀಚ್ ಬೋರ್ಡ್‌ಗೆ ಹಾಕಿದ್ದ ಮೊಬೈಲ್ ಚಾರ್ಜರ್ ವೈಯರ್ ಬಾಯಿಗೆ ಹಾಕಿದ ಪರಿಣಾಮ ವಿದ್ಯುತ್ ಪ್ರಹರಿಸಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಸಿದ್ದರ ಗ್ರಾಮದ ಸಂಜನಾ ಕಲ್ಗುಟಕರ್ (Sanjana Kalkutakar) ಮತ್ತು ಸಂತೋಷ ಕಲ್ಗುಟಕರ್ (Santhosh Kalkutakar) ಎಂಬ ದಂಪತಿಯ ಏಂಟು ತಿಂಗಳ ಹೆಣ್ಣು ಮಗು ಆಗಿರುವ ಸಾನಿಧ್ಯ
ಕಲ್ಲುಟಕರ್ (Sanidhya Kalkutakar) ಇಂದು ಮೃತಪಟ್ಟಿದೆ. ಇಂದು(ಆಗಸ್ಟ್ 02) ಬೆಳಗ್ಗೆ ಮನೆಯಲ್ಲಿ ಸ್ವಿಚ್ ಬೋರ್ಡ್‌ಗೆ (Switch Board)ಹಾಕಿದ್ದ ಮೊಬೈಲ್ ಚಾರ್ಜರ್ ಅನ್ನು ಆಫ್ ಮಾಡಲು ಮರೆತಿದ್ದರಿಂದ
ಮೊಬೈಲ್ ಚಾರ್ಜರ್ ನೇತಾಡಿಕೊಂದಿತ್ತು . ಆದರೆ ಮಗು ಆನ್ ಇದ್ದ ಚಾರ್ಜರ್ ವೈಯರ್ ಅನ್ನು ಇದೇ ಸಮಯದಲ್ಲಿ ಬಾಯಿಗೆ ಹಾಕಿದ್ದು, ಈ ವೇಳೆ ಏಕಾಏಕಿ ವಿದ್ಯುತ್ ಪ್ರಹರಿಸಿದೆ. ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.
ಇದನ್ನೂ ಓದಿ : ದ್ವಿತೀಯ ಪಿಯುಸಿಯಲ್ಲಿ ಅನುತೀರ್ಣರಾದ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್, 2ನೇ ಬಾರಿ ಪೂರಕ ಪರೀಕ್ಷೆ: ವೇಳಾಪಟ್ಟಿ ಬಿಡುಗಡೆ
ವಿದ್ಯುತ್ ಅವಘಡ ಸಂಭವಿಸುತ್ತಿದ್ದಂತೆ ಮಗುವನ್ನು ಕೂಡಲೇ ಉತ್ತರ ಕನ್ನಡ ಜಿಲ್ಲಾ ಆಸ್ಪತ್ರೆಗೆ(Hospital) ಕರೆ ತಂದರೂ ಅದಾಗಲೇ ಎಂಟು ತಿಂಗಳ ಕಂದಮ್ಮ ಕೊನೆಯುಸಿರೆಳೆದಿದೆ ಎಂದು ಜಿಲ್ಲಾಸ್ಪತ್ರೆ ವೈದ್ಯರು
ಪೋಷಕರಿಗೆ ತಿಳಿಸಿದ್ದಾರೆ. ಇನ್ನು ಮಗುವಿನ ತಂದೆ ಸಂತೋಷ ಕಲ್ಗುಟಕರ್ ಗುತ್ತಿಗೆ ನೌಕರನಾಗಿ ಹೆಸ್ಕಾಂನಲ್ಲಿ(HESCOM) ಕೆಲಸ ನಿರ್ವಹಿಸುತ್ತಿದ್ದರು ,ಈ ವಿಷಯ ತಲುಪಿದಾಗ ಈ ವಿಷಯ ಕೇಳಿ
ಅಸ್ವಸ್ತರಾಗಿ ಕುಸಿದು ಬಿದ್ದಿದ್ದರು ಸಿದ್ದರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಕ್ಷಣ ಅವರನ್ನು ದಾಖಲು ಮಾಡಲಾಗಿದೆ. ಮಗುವಿನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಜಿಲ್ಲಾಸ್ಪತ್ರೆಯ
ಶವಗಾರದಲ್ಲಿ ಮೃತ (Baby died because charger) ಮಗುವನ್ನು ಇರಿಸಲಾಗಿದೆ.

ಇನ್ನು ಸಂತೋಷ್ ಕಲ್ಗುಟಕರ್ ದಂಪತಿಗೆ ಈ ಮೃತಪಟ್ಟ ಸಾನಿಧ್ಯ ಕಲ್ಲುಟಕರ್ ಮಗು ಮೂರನೇ ಮಗುವಾಗಿತ್ತು. ಇನ್ನಿಬ್ಬರು ಕೂಡ ಹೆಣ್ಣು ಮಕ್ಕಳೂ ಇದ್ದರು ಅದರಲ್ಲಿ ಇಂದು ಒಂದು ಹೆಣ್ಣು ಮಗುವಿನ ಹುಟ್ಟುಹಬ್ಬ
ಇದ್ದ ಕಾರಣ, ಕುಟುಂಬಸ್ಥರು ಹಾಗೂ ಮಗುವಿನ ತಾಯಿ ಹುಟ್ಟುಹಬ್ಬದ ಆಚರಣೆ ಸಂಭ್ರಮದಲ್ಲಿದ್ದರು. ಈ ಮಧ್ಯದಲ್ಲಿ ಇಂತಹ ಒಂದು ಅವಘಡ ಸಂಭವಿಸಿದ್ದು, ಇದೀಗ ಸಂಭ್ರಮದ ಮನೆಯಲ್ಲಿ ಸೂತಕದ
ಛಾಯೆ ಆವರಿಸಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.
ರಶ್ಮಿತಾ ಅನೀಶ್